ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ ಆನ್‌ಲೈನ್ ಜೂಜು ನಿಷೇಧ, ಜಗನ್ ಸರ್ಕಾರದ ಮಹತ್ವದ ತೀರ್ಮಾನ: ರಾಜ್ಯದಲ್ಲಿ ಯಾವಾಗ?

|
Google Oneindia Kannada News

ಅಮರಾವತಿ, ಸೆಪ್ಟೆಂಬರ್ 3: ಊರುಗಳು, ವಿವಿಧ ಸಮಾರಂಭಗಳ ನೆಪದಲ್ಲಿ ನಡೆಯುತ್ತಿದ್ದ ಜೂಜು ಈಗ ಮನೆ ಮನೆಗೂ ಬಂದಿದೆ. ಯಾರ ಕೈಯಲ್ಲಿ ಸ್ಮಾರ್ಟ್‌ಫೋನ್ ಇದೆಯೋ ಅವರೆಲ್ಲರೂ ಜೂಜಾಟದಲ್ಲಿ ತೊಡಗಿಕೊಳ್ಳಲು ಅವಕಾಶ ಇರುವಂತಹ ಅಪಾಯಕಾರಿ ಮಟ್ಟದಲ್ಲಿ ತಂತ್ರಜ್ಞಾನ ಬೆಳೆದಿದೆ. ಆನ್‌ಲೈನ್ ಮೂಲಕವೇ ಗ್ಯಾಂಬ್ಲಿಂಗ್ ನಡೆಸುವ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿದ್ದು, ಇವು ಯಾವುದೇ ಭಯವಿಲ್ಲದೆ ಜಾಹೀರಾತುಗಳನ್ನು ನೀಡಿ ಜನರನ್ನು ಆಕರ್ಷಿಸುತ್ತಿವೆ. ಇಂತಹ ಆನ್‌ಲೈನ್ ಜೂಜಾಟಕ್ಕೆ ಕಡಿವಾಣ ಹಾಕಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ.

ರಮ್ಮಿ ಮತ್ತು ಪೋಕರ್‌ನಂತಹ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಲು ಆಂಧ್ರಪ್ರದೇಶ ಸರ್ಕಾರ ಗುರುವಾರ ನಿರ್ಧರಿಸಿದೆ. ಯುವಜನರನ್ನು ಇಂತಹ ಆಟಗಳು ತಪ್ಪುದಾರಿಗೆ ಎಳೆಯುತ್ತಿರುವುದರಿಂದ ಅವುಗಳನ್ನು ನಿಷೇಧಿಸಲು ಆಂಧ್ರ ಸರ್ಕಾರ ಮುಂದಾಗಿದೆ.

ತಮನ್ನಾ-ವಿರಾಟ್ ಕೊಹ್ಲಿ ವಿರುದ್ಧ ದೂರು: ಬಂಧನಕ್ಕೆ ಒತ್ತಾಯ

ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಅನ್‌ಲೈನ್ ಗ್ಯಾಂಬ್ಲಿಂಗ್ ಮೇಲೆ ನಿಷೇಧ ಹೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಸಚಿವ ಪೆರ್ನಿ ವೆಂಕಟರಾಮಯ್ಯ (ನಾನಿ) ತಿಳಿಸಿದರು. ಮುಂದೆ ಓದಿ...

ಎಲ್ಲ ಜೂಜಾಟ ನಿಷೇಧ

ಎಲ್ಲ ಜೂಜಾಟ ನಿಷೇಧ

ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾನಿ, ಆನ್‌ಲೈನ್ ಜೂಜು ದೊಡ್ಡ ಅನೈತಿಕ ಹಾವಳಿಯಾಗಿ ಪರಿಣಮಿಸಿದೆ. ಯುವಜನರನ್ನು ತಪ್ಪು ದಾರಿಗೆ ಎಳೆಯುವ ಮೂಲಕ ಅವರಿಗೆ ಹಾನಿ ಮಾಡುತ್ತಿದೆ ಎಂದು ಆರೋಪಿಸಿದರು.

ಯುವಜನರನ್ನು ಈ ರೀತಿಯ ಕೆಟ್ಟ ಅಭ್ಯಾಸಗಳಿಂದ ರಕ್ಷಿಸುವ ಸಲುವಾಗಿ ನಾವು ಅಂತಹ ಎಲ್ಲ ಆನ್‌ಲೈನ್ ಗ್ಯಾಂಬ್ಲಿಂಗ್ ಮೇಲೆ ನಿಷೇಧ ಹೇರಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.

ಜೂಜಾಟಕ್ಕೆ ಶಿಕ್ಷೆ ಏನು?

ಜೂಜಾಟಕ್ಕೆ ಶಿಕ್ಷೆ ಏನು?

ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯದ ಪ್ರಕಾರ, ಮೊದಲ ಬಾರಿಯ ಅಪರಾಧಕ್ಕಾಗಿ ಆನ್‌ಲೈನ್ ಗ್ಯಾಂಬ್ಲಿಂಗ್ ಸಂಘಟಕರನ್ನು ದಂಡ ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು. ಎರಡನೆಯ ಬಾರಿ ತಪ್ಪು ಮರುಕಳಿಸಿದರೆ ದಂಡ ಹಾಗೂ ಎರಡು ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ಪಬ್ಜಿ ಆಡುತ್ತಿದ್ದ ಅಪ್ರಾಪ್ತ ಬಾಲಕ ಏಕಾಏಕಿ ನೇಣಿಗೆ ಶರಣುಪಬ್ಜಿ ಆಡುತ್ತಿದ್ದ ಅಪ್ರಾಪ್ತ ಬಾಲಕ ಏಕಾಏಕಿ ನೇಣಿಗೆ ಶರಣು

ಇದಲ್ಲದೆ ಆನ್‌ಲೈನ್‌ನಲ್ಲಿನ ಜೂಜಿನ ಆಟಗಳನ್ನು ಆಡುವ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಅಂತಹವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಹ ಸಚಿವ ನಾನಿ ತಿಳಿಸಿದರು.

ಜೂಜು ಜಾಹೀರಾತಿನಲ್ಲಿ ನಟರು

ಜೂಜು ಜಾಹೀರಾತಿನಲ್ಲಿ ನಟರು

ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಆನ್‌ಲೈನ್ ಜೂಜಿಗೆ ಜನರನ್ನು ಆಹ್ವಾನಿಸುವ ಮತ್ತು ಪ್ರಚೋದಿಸುವ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಇಂತಹ ಜಾಹೀರಾತುಗಳಲ್ಲಿ ಚಿತ್ರರಂಗದ ಖ್ಯಾತ ತಾರೆಯರು ಕಾಣಿಸಿಕೊಳ್ಳುತ್ತಿರುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿವೆ. ಚಿತ್ರನಟ ಸುದೀಪ್ ಅವರು ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಲವಾರು ಮಂದಿ ವಿರೋಧ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ನಿಷೇಧ ಯಾವಾಗ?

ರಾಜ್ಯದಲ್ಲಿ ನಿಷೇಧ ಯಾವಾಗ?

ಆನ್‌ಲೈನ್ ಜೂಜು ವಿರುದ್ಧ ಅನೇಕ ಸಂಘಟನೆಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ನಡೆಸುತ್ತಿವೆ. ಸಾರ್ವಜನಿಕ ಜೂಜಾಟಕ್ಕೆ ನಿಷೇಧವಿದೆ. ಆದರೆ ಆನ್‌ಲೈನ್‌ನಲ್ಲಿ ಬೇರೆ ಬಗೆಯ ಜೂಜಾಟಗಳು ಎಗ್ಗು ಸಿಗ್ಗಿಲ್ಲದೆ ನಡೆಯುತ್ತಿವೆ. ಈ ಸಮಯದಲ್ಲಿ ಮನೆಯಲ್ಲಿಯೇ ಇರುವ ಅನೇಕ ಯುವಕರು ಇಂತಹ ಜೂಜಾಟದಿಂದ ಹಣ ಮಾಡಬಹುದು ಎಂಬ ಆಸೆಗೆ ಬಿದ್ದು ವ್ಯಸನರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಇಂತಹ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಕರ್ನಾಟಕದಲ್ಲಿ ಯಾವಾಗ ಇಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

English summary
Online Rummy, Poker Banned by Andhra Pradesh Government; Will Karnataka follow AP?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X