ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿನಿಮಾ ಮಾಡೋಕೆ ಟೈಂ ಇಲ್ಲ, ಪ್ರಜಾಸೇವೆಯೇ ನನಗೆಲ್ಲ'

|
Google Oneindia Kannada News

Recommended Video

ಸಿನಿಮಾ ಮಾಡೋಕೆ ಟೈಂ ಇಲ್ಲ, ಪ್ರಜಾಸೇವೆಯೇ ನನಗೆಲ್ಲ' ; ಪವನ್ ಕಲ್ಯಾಣ್ | Oneindia Kannada

ಅಮರಾವತಿ, ನವೆಂಬರ್ 21: ನಟ, ರಾಜಕಾರಣಿ, ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ತಮಗೆ ಸಿನಿಮಾದಲ್ಲಿ ನಟಿಸಲು ಈಗ ಪುರುಸೋತ್ತಿಲ್ಲ ಎಂದಿದ್ದಾರೆ. ಈ ಮೂಲಕ ಚಿತ್ರರಂಗದಿಂದ ದೂರ ಉಳಿದು ಪ್ರಜಾಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪವನ್ ಕಲ್ಯಾಣ್ ಅವರು ಹೊಸ ಚಿತ್ರವೊಂದರ ಮಾತುಕತೆಯಲ್ಲಿ ತೊಡಗಿದ್ದಾರೆ. ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬೆಲ್ಲ ಗಾಸಿಪ್ ಗಳು ಹರಿದಾಡಿತ್ತು. ಈ ಸುದ್ದಿಗಳೆಲ್ಲ ಸುಳ್ಳು, ನಾನು ಮುಂದಿನ ಚಿತ್ರಕ್ಕೆ ಸಹಿ ಮಾಡಿಲ್ಲ ಎಂದು ಗಾಳಿಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ.

ವೈಎಸ್ ಆರ್ ಕಾಂಗ್ರೆಸ್, ಜನ ಸೇನಾ ಪಾರ್ಟಿ ತೆಲಂಗಾಣ ಸ್ಪರ್ಧೆಯಿಲ್ಲ!ವೈಎಸ್ ಆರ್ ಕಾಂಗ್ರೆಸ್, ಜನ ಸೇನಾ ಪಾರ್ಟಿ ತೆಲಂಗಾಣ ಸ್ಪರ್ಧೆಯಿಲ್ಲ!

'ನಾನು ಒಂದು ಚಿತ್ರಕ್ಕೆ ಸಹಿ ಮಾಡಿರುವುದಾಗಿ ಸುದ್ದಿ ಹರಿದಾಡುತ್ತಿದೆ. ಆದ್ರೆ ಇದು ಶುದ್ಧ ಸುಳ್ಳು. ನನಗೆ ಸಿನಿಮಾದಲ್ಲಿ ನಟಿಸಲು ಸಮಯವಿಲ್ಲ. ಹೀಗಾಗಿ, ನಾನು ಯಾವುದೇ ಚಿತ್ರದಲ್ಲಿ ನಟನೆ ಮಾಡುವುದಿಲ್ಲ. ಬದಲಾಗಿ ನನ್ನನ್ನು ನಾನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ನನ್ನ ಉಳಿದ ಜೀವನ ಜನರ ಸೇವೆಗೆ ಮುಡಿಪು ಎಂದು ಪವನ್ ಕಲ್ಯಾಣ್ ಅವರು ಟ್ವೀಟ್ ಮಾಡಿದಾರೆ.

ಅತ್ತಾರಿಂಟಿಕಿ ದಾರೇದಿ, ಗಬ್ಬರ್ ಸಿಂಗ್ ಖ್ಯಾತಿಯ ಜನಪ್ರಿಯ ನಟ ಪವನ್ ಕಲ್ಯಾಣ್ ಅವರು, 2014ರಿಂದ ಜನಸೇನಾ ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ತೆಲಂಗಾಣ ವಿಧಾನಸಭೆಗೆ ಪವನ್ ಪಕ್ಷ ಸ್ಪರ್ಧೆ ಇಲ್ಲ

ತೆಲಂಗಾಣ ವಿಧಾನಸಭೆಗೆ ಪವನ್ ಪಕ್ಷ ಸ್ಪರ್ಧೆ ಇಲ್ಲ

2014ರಲ್ಲಿ ಅವರು ಜನ ಸೇನಾ ಎಂಬ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದಲ್ಲದೆ, ಆ ವರ್ಷ ನಡೆದಿದ್ದ ವಿಧಾನಸಭೆ ಹಾಗೂ ಸಂಸತ್ ಚುನಾವಣೆಗಳಲ್ಲಿ ಬಿಜೆಪಿ-ಟಿಡಿಪಿ ಪಕ್ಷಗಳ ಮೈತ್ರಿಯನ್ನು ಬೆಂಬಲಿಸಿದ್ದರು. ಆದರೆ, ಅವರು ಆಗ ಚುನಾವಣೆಗೆ ನಿಂತಿರಲಿಲ್ಲ.

ಪ್ರಧಾನಿ ಮೋದಿಯನ್ನು ಒಮ್ಮೆ ಹೊಗಳಿ, ಒಮ್ಮೆ ತೆಗಳುವ ಮೂಲಕ ತಾವು ಆಂಧ್ರಪ್ರದೇಶ ಜನತೆ ಪರ ಮಾತ್ರ ಕಾರ್ಯ ನಿರ್ವಹಿಸುವುದಾಗಿ ಸಾರಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ತಯಾರಿ ನಡೆಸಿದ್ದು, ತೆಲಂಗಾಣ ವಿಧಾನಸಭೆ ಚುನಾವಣೆ 2018ಯಲ್ಲಿ ಸ್ಪರ್ಧಿಸುತ್ತಿಲ್ಲ.

ನಮ್ಮ ಪಕ್ಷ ಜನಹಿತಕ್ಕಾಗಿ ಮಾತ್ರ ಎಂದ ಪವನ್

ನಮ್ಮ ಪಕ್ಷ ಜನಹಿತಕ್ಕಾಗಿ ಮಾತ್ರ ಎಂದ ಪವನ್

ಆಂಧ್ರದಲ್ಲಿ ಟಿಡಿಪಿ ಗೆಲುವಿಗೆ ಕಾರಣರಾಗಿದ್ದ ಪವನ್ ಆಂಧ್ರದಲ್ಲಿ ಟಿಡಿಪಿ ಗೆಲುವಿಗೆ ಕಾರಣರಾಗಿದ್ದ ಪವನ್ ಅವರು ಜನ ಸೇನಾ ಪಕ್ಷದ ಮೂಲಕ ರಾಜ್ಯದ ಹಿತಾಸಕ್ತಿಗಾಗಿ ದುಡಿಯುತ್ತಿದ್ದಾರೆ. ಆದರೆ, ಬಿಜೆಪಿ ಟಿಕೆಟ್ ಕೂಡಾ ನಿರಾಕರಿಸಿ ಚುನಾವಣೆ ಸ್ಪರ್ಧಿಸದೇ ಜನ ಹಿತಕ್ಕಾಗಿ ಸಮಾವೇಶಗಳನ್ನು ನಡೆಸಿದ್ದಾರೆ. ಮೋದಿ ಅವರಿಂದಲೂ ಹೊಗಳಿಕೆ ಪಡೆದುಕೊಂಡಿದ್ದ ಪವನ್ ಅವರು ಕೇಂದ್ರ ಸರ್ಕಾರದ ವಿರುದ್ಧವೂ ತಿರುಗಿ ಬಿದ್ದಿದ್ದರು.

ಆಂಧ್ರಪ್ರದೇಶ ಬಿಜೆಪಿ ವಿರೋಧ ಕಟ್ಟಿಕೊಂಡ ಪವನ್

ಆಂಧ್ರಪ್ರದೇಶ ಬಿಜೆಪಿ ವಿರೋಧ ಕಟ್ಟಿಕೊಂಡ ಪವನ್

ನೋಟುಗಳ ನಿಷೇಧ, ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ನೀತಿ, ದಲಿತರ ಮೇಲಿನ ದೌರ್ಜನ್ಯ, ರೋಹಿತ್ ವೆಮುಲಾ ಪ್ರಕರಣ ಸೇರಿದಂತೆ ಅನೇಕ ವಿಷಯಗಳಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿಯನ್ನು ತೀವ್ರವಾಗಿ ಖಂಡಿಸಿ ಪವನ್ ಕಲ್ಯಾಣ್ ಅವರು ಟ್ವೀಟ್ ಮಾಡಿದ್ದರು.

ಬಿಜೆಪಿ ಕೂಡಾ ತೀವ್ರವಾಗಿ ಪ್ರತಿಕ್ರಿಯಿಸಿತ್ತುಬಿಜೆಪಿ ಕೂಡಾ ತೀವ್ರವಾಗಿ ಪ್ರತಿಕ್ರಿಯಿಸಿತ್ತು

ರಾಜಕೀಯಕ್ಕೆ ಬರಲು ಮೋದಿ ಪ್ರೇರಣೆ ಎಂದಿದ್ದರು

ರಾಜಕೀಯಕ್ಕೆ ಬರಲು ಮೋದಿ ಪ್ರೇರಣೆ ಎಂದಿದ್ದರು

ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಅನ್ವಯ ಭಾರತ ಚುನಾವಣಾ ಆಯೋಗವು ಜನಸೇನಾ ಪಾರ್ಟಿಯನ್ನು ನೋಂದಣಿ ಮಾಡಿಕೊಂಡು 2014ರ ನವೆಂಬರ್ 24ರಿಂದ ಅನ್ವಯವಾಗುವಂತೆ ಪ್ರಮಾಣಪತ್ರ ನೀಡಿದೆ. ನೋಂದಣಿ ಸಂಖ್ಯೆ 56/118/2014 ಪಿಪಿಎಸ್-1 ಎಂದು ಜನಸೇನಾ ಪಾರ್ಟಿಯ ಮುಖಂಡರು ಪ್ರಕಟಿಸಿದ್ದಾರೆ. ನಾನು ರಾಜಕೀಯ ರಂಗಕ್ಕೆ ಇಷ್ಟು ಹತ್ತಿರವಾಗುತ್ತಿರುವುದು ಮೋದಿ ಅವರಿಗಾಗಿ ಮಾತ್ರ, ನಾನು ಸ್ಥಾನ ಮಾನ ಸಿಗಬೇಕೆಂದು ಬಯಸುವುದಿಲ್ಲ ಎಂದು ಪವನ್ ಹೇಳಿದ್ದರು

English summary
Actor-politician and Jana Sena Party chief Pawan Kalyan Tuesday said he has “no time” for movies as he was devoting full time for public service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X