• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಕ್ತರ ಗಮನಕ್ಕೆ: ತಿರುಪತಿ ದೇವಸ್ಥಾನದಿಂದ ಬಂತೊಂದು ಮಾಹಿತಿ

|

ನವದೆಹಲಿ, ಜುಲೈ 17: ತಿರುಪತಿ ತಿರುಮಲ ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಭಕ್ತರು ಬಂದರೆ ಮತ್ತಷ್ಟು ಬೇಗ ಸೋಂಕು ತಗುಲುತ್ತದೆ ಎಂದು ಹೇಳಲಾಗಿತ್ತು.

ತಿರುಪತಿಯ 15 ಅರ್ಚಕರಿಗೆ ಕೋವಿಡ್ -19 ಸೋಂಕು

ಜೂನ್ ಮಧ್ಯವಾರದಲ್ಲೇ ದೇವಸ್ಥಾನವನ್ನು ತೆರೆಯಲಾಯಿತು. ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಮಾತನಾಡಿ, ಯಾವುದೇ ಕಾರಣಕ್ಕೂ ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ ಭಕ್ತರಿಗೆ ವೆಂಕಟೇಶನ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದರು.

14 ಮಂದಿ ಅರ್ಚಕರು ಹಾಗೂ 140 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು. ಹೆಚ್ಚೆಚ್ಚು ಭಕ್ತರು ಬರುವುದರಿಂದ ಕೊರೊನಾ ಸೋಂಕು ಹೆಚ್ಚಾಗುವುದು ಹೌದು ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈಗ 70 ಮಂದಿ ಗುಣಮುಖರಾಗಿದ್ದಾರೆ. ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಂಧ್ರಪ್ರದೇಶದ ಪೊಲೀಸರಿಗೆ ಹೆಚ್ಚು ಸೋಂಕು ತಗುಲಿದೆ.

ದೇವಸ್ಥಾನವನ್ನು ಮುಚ್ಚುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಹಿರಿಯ ಅರ್ಚಕರಿಗೆ ದೇವಸ್ಥಾನಕ್ಕೆ ಬರದಂತೆ ತಿಳಿಸಲಾಗಿದೆ. ಅರ್ಚಕರು ಹಾಗೂ ಸಿಬ್ಬಂದಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಊಟ, ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

English summary
People can continue to visit the famous Tirumala Tirupati Balaji temple, the top official of the temple's board has said amid a controversy over priests and employees getting infected with the highly contagious coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X