ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹಳ್ಳಿಯಲ್ಲಿ ಮಹಿಳೆಯರು ನೈಟಿ ಧರಿಸುವಂತಿಲ್ಲ!

|
Google Oneindia Kannada News

ಅಮರಾವತಿ, ಫೆಬ್ರವರಿ 25: ಮಹಿಳೆಯರು ನೈಟಿ ಧರಿಸುವುದು ಸರ್ವೆ ಸಾಮಾನ್ಯ, ಆದರೆ ಆಂಧ್ರಪ್ರದೇಶ ಹಳ್ಳಿಯಲ್ಲಿ ಮಹಿಳೆಯರು ನೈಟಿ ಧರಿಸಿದರೆ ದಂಡ ವಿಧಿಸುತ್ತಾರೆ.

ಆಂಧ್ರ ಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ತೋಕಲಪಲ್ಲಿ ಗ್ರಾಮದಲ್ಲಿ ನೈಟಿ ಹಾಕಿಕೊಂಡು ಗ್ರಾಮದಲ್ಲಿ ಓಡಾಡುವಂತಿಲ್ಲ. ಒಂದು ವೇಳೆ ಬೆಳಗಿನ ವೇಳೆ ನೈಟಿ ಧರಿಸಿ ಓಡಾಡಿದರೆ ದಂಡ ವಿಧಿಸಲಾಗುತ್ತದೆ.

ಬೆಳಗಿನ ಸಮಯ ನೈಟಿ ಧರಿಸಿ ಓಡಾಡಿದರೆ 2000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಗ್ರಾಮದ ಪ್ರಮುಖರು ನಿಯಮ ರೂಪಿಸಿದ್ದು, ನೈಟಿ ಧರಿಸಿ ಓಡಾಡುವುದನ್ನು ಕಂಡು ತಿಳಿಸಿದರೆ ಅಂಥಹವರಿಗೆ 1000 ಬಹುಮಾನ ಸಹ ನೀಡಲಾಗುತ್ತದೆ.

ಏಳು ತಿಂಗಳ ಹಿಂದೆಯೇ ನಿಯಮ ಜಾರಿ

ಏಳು ತಿಂಗಳ ಹಿಂದೆಯೇ ನಿಯಮ ಜಾರಿ

ಈ ರೀತಿಯ ನಿಯಮವೊಂದನ್ನು ಗ್ರಾಮಸ್ಥರು ಜಾರಿಗೆ ತಂದು ಏಳು ತಿಂಗಳಾಗಿವೆ. ಆದರೆ ಇತ್ತೀಚೆಗಷ್ಟೆ ಯಾರೊ ಒಬ್ಬ ಅನಾಮಿಕರು ಹೀಗೊಂದು ನಿಯಮ ರೂಪಿಸಿರುವ ಬಗ್ಗೆ ತಹಶೀಲ್ದಾರ್ ಗೆ ಪತ್ರ ಬರೆದ ಕಾರಣ, ತಹಶೀಲ್ದಾರ್ ಅವರು ಗ್ರಾಮಕ್ಕೆ ಭೇಟಿ ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ.

ಪುರುಷರು ದೂರು ನೀಡಿದ್ದರಿಂದ ಈ ಕ್ರಮ

ಪುರುಷರು ದೂರು ನೀಡಿದ್ದರಿಂದ ಈ ಕ್ರಮ

ಕೆಲವು ತಿಂಗಳ ಹಿಂದೆ ಗ್ರಾಮದ ಪ್ರಮುಖರಿಗೆ ಯಾರೊ ಕೆಲವು ಪುರುಷರು ಮಹಿಳೆಯರು ನೈಟಿ ಧರಿಸುತ್ತಿರುವ ಬಗ್ಗೆ ದೂರು ನೀಡಿದರಂತೆ. ಮಹಿಳೆಯರು ನೈಟಿ ಧರಿಸಿ ಗ್ರಾಮದಲ್ಲಿ ಓಡಾಡುವುದನ್ನು ನೋಡಲು ಪುರುಷರಿಗೆ ಕಷ್ಟವಾಗುತ್ತಿದೆ, ಹಾಗಾಗಿ ನೈಟಿಯನ್ನು ನಿಷೇಧಿಸಿ ಎಂದು ಮನವಿ ಮಾಡಿದ್ದರಂತೆ ಹಾಗಾಗಿ ಈ ನಿರ್ಣಯವನ್ನು ಮಹಿಳೆಯರ ಮೇಲೆ ಹೇರಿದ್ದಾರೆ.

ಮಹಿಳೆಯರ ಜೊತೆ ಸಭೆ ನಡೆಸಿದ್ದ ಮುಖಂಡರು

ಮಹಿಳೆಯರ ಜೊತೆ ಸಭೆ ನಡೆಸಿದ್ದ ಮುಖಂಡರು

ಈ ರೀತಿಯ ನಿರ್ಣಯ ಕೈಗೊಳ್ಳುವ ಮುನ್ನಾ ಗ್ರಾಮದ ಪ್ರಮುಖರು ಮಹಿಳೆಯರೊಂದಿಗೆ ಸಭೆ ನಡೆಸಿಯೇ ನಿರ್ಧಾರ ಕೈಗೊಂಡಿದ್ದಾರೆ. ಮಹಿಳೆಯರೂ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಕಳೆದ ಏಳು ತಿಂಗಳಲ್ಲಿ ಒಬ್ಬರಿಗೂ ದಂಡ ವಿಧಿಸಿಲ್ಲ, ಮಹಿಳೆಯರು ಶಿಸ್ತಿನಿಂದ ನಿಯಮ ಪಾಲಿಸಿದ್ದಾರೆ.

ಗ್ರಾಮದ ಮುಖಂಡರಿಗೆ ತಿಳಿ ಹೇಳಿದ ಅಧಿಕಾರಿಗಳು

ಗ್ರಾಮದ ಮುಖಂಡರಿಗೆ ತಿಳಿ ಹೇಳಿದ ಅಧಿಕಾರಿಗಳು

ವಿಷಯ ತಿಳಿದ ನಂತರ ಗ್ರಾಮಕ್ಕೆ ಭೇಟಿ ನೀಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ತಹಶೀಲ್ದಾರ್ ಅವರುಗಳು ಗ್ರಾಮದ ಪ್ರಮುಖರೊಂದಿಗೆ ಮಾತನಾಡಿ, ಈ ರೀತಿಯ ಯಾವುದೇ ನಿಯಮಗಳನ್ನು ಮಹಿಳೆಯರ ಮೇಲೆ ಹೇರುವುದು ಕಾನೂನು ಉಲ್ಲಂಘನೆ ಆಗುತ್ತದೆ ಎಂದು ತಿಳಿ ಹೇಳಿದ್ದಾರೆ. ಗ್ರಾಮದರ ಮುಖಂಡರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.

English summary
Andra Pradesh's Thokalapalli village banned women wearing nighties in day. If women wore nighties will be fined 2000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X