• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕ್‌ ಗೂಢಚರ್ಯೆ ಸಂಸ್ಥೆ ಪರ ಹಣ ಸಂಗ್ರಹ; ಎನ್‌ಐಎಯಿಂದ ಚಾರ್ಜ್‌ಶೀಟ್

|

ಅಮರಾವತಿ, ಮಾರ್ಚ್ 12: ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್‌ಐ ಪರ ಹಣ ಸಂಗ್ರಹಿಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳ ಶುಕ್ರವಾರ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಗುಜರಾತ್ ಗೋಧ್ರಾ ನಿವಾಸಿ ಇಮ್ರಾನ್ ಯಾಕುಬ್ ಗಿತೇಲಿ ವಿರುದ್ಧ ಮೊದಲು ಆಂಧ್ರ ಪ್ರದೇಶದ ವಿಜಯವಾಡ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ದಾಖಲಿಸಲಾಗಿತ್ತು. ಗಿತೇಲಿ ಬಟ್ಟೆ ವ್ಯಾಪಾರಿ ಸೋಗಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದ. ಪಾಕಿಸ್ತಾನಿ ಏಜೆಂಟರೊಂದಿಗೆ ಸಂಪರ್ಕದಲ್ಲಿದ್ದ. ಭಾರತದ ಸೂಕ್ಷ್ಮ ಹಾಗೂ ಕಾರ್ಯತಂತ್ರದ ಮಾಹಿತಿಗಳನ್ನು ನೌಕಾಪಡೆ ಸಿಬ್ಬಂದಿಯಿಂದ ಪಡೆದುಕೊಂಡು ಅವರ ಖಾತೆಗಳಿಗೆ ಹಣ ವರ್ಗಾಯಿಸಿ ಐಎಸ್‌ಐಗೆ ರವಾನಿಸುತ್ತಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ISIಗೆ ಯುದ್ಧ ವಿಮಾನದ ಮಾಹಿತಿ ನೀಡುತ್ತಿದ್ದ HAL ಉದ್ಯೋಗಿ ಬಂಧನಪಾಕಿಸ್ತಾನದ ISIಗೆ ಯುದ್ಧ ವಿಮಾನದ ಮಾಹಿತಿ ನೀಡುತ್ತಿದ್ದ HAL ಉದ್ಯೋಗಿ ಬಂಧನ

ಭಾರತದಲ್ಲಿ ಸೌಹಾರ್ದತೆ, ಶಾಂತಿ ಕದಡುವ ಹುನ್ನಾರ ನಡೆಸಿದ್ದ ಎಂದು ಮಾಹಿತಿ ನೀಡಿದ್ದಾರೆ. ಕಳೆದ ಜೂನ್‌ನಲ್ಲಿ ಈ ಸಂಬಂಧ ಹದಿನಾಲ್ಕು ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಐಎಸ್‌ಐ ಏಜೆಂಟ್ ಆಗಿ ಈತ ಪಿತೂರಿ ನಡೆಸಿದ ಆರೋಪದಲ್ಲಿ ಈತನ ಮೇಲೆ ನವೆಂಬರ್ 2019ರಲ್ಲಿ ವಿಜಯವಾಡದಲ್ಲಿ ಐಪಿಸಿ, ಯುಎಪಿಎ ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. 2019ರ ಡಿಸೆಂಬರ್‌ನಲ್ಲಿ ಪ್ರಕರಣವನ್ನು ಮರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಇದೀಗ ಮತ್ತೊಮ್ಮೆ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

English summary
NIA filed additional chargesheet against Indian operative of Pakistan's ISI for raising funds for espionage activities in India on friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X