ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ನೆವರ್ ಅಗೇನ್' ಆಂಧ್ರದಲ್ಲಿ ಮೋದಿ ವಿರುದ್ಧ ಅಭಿಯಾನ

|
Google Oneindia Kannada News

ಅಮರಾವತಿ(ಆಂಧ್ರಪ್ರದೇಶ), ಫೆಬ್ರವರಿ 10: ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇಂದು ದಕ್ಷಿಣ ಭಾರತದಲ್ಲಿ ಚುನಾವಣಾ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ. ಆದರೆ, ಮೋದಿ ಅಲೆ ಮತ್ತೊಮ್ಮೆ ಮೂಡದಂತೆ ತಡೆಯಲು ಮಹಾಘಟಬಂದನ್ ಪಕ್ಷಗಳು ಯತ್ನಿಸುತ್ತಿವೆ.

ಮೋದಿ ಅವರು ಗುಂಟೂರು, ಹುಬ್ಬಳ್ಳಿ ಹಾಗೂ ತಿರುಪ್ಪೂರ್ ನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಆದರೆ, ಮೋದಿ ವಿರೋಧಿ ಪೋಸ್ಟರ್ ಗಳು ತಲೆ ಎತ್ತಿವೆ. ಈ ಪೋಸ್ಟರ್ ಗಳನ್ನು ಯಾರು ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಮೋದಿಗೆ ಕಪ್ಪುಬಾವುಟದ ಸ್ವಾಗತ ನೀಡಿದ ಅಸ್ಸಾಂ ವಿದ್ಯಾರ್ಥಿಗಳುಮೋದಿಗೆ ಕಪ್ಪುಬಾವುಟದ ಸ್ವಾಗತ ನೀಡಿದ ಅಸ್ಸಾಂ ವಿದ್ಯಾರ್ಥಿಗಳು

#NoMoreModi #ModiIsMistake, #Modi Never Again ..ಇತ್ಯಾದಿ ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟರ್ ಗಳನ್ನು ಹಾಕಲಾಗಿದೆ.

‘Modi go back’: Protests held in Guntur, other parts of Andhra Pradesh before prime minister’s visit

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬುನಾಯ್ಡು ಅವರು ತಮ್ಮ ಕಾರ್ಯಕರ್ತರಿಗೆ ಟೆಲಿಕಾನ್ಫರೆನ್ಸ್ ಮೂಲಕ ಸ್ಪಷ್ಟ ಸಂದೇಶ ನೀಡಿದ್ದು,' ನಾಳೆ ಕರಾಳ ದಿನ ಪ್ರಧಾನಿ ಮೊದಿ ಅವರು ಇಲ್ಲಿಗೆ ಬರುತ್ತಿದ್ದು, ನಮಗಾದ ಅನ್ಯಾಯದ ಬಗ್ಗೆ ಗಟ್ಟಿ ದನಿಯಲ್ಲಿ ಅವರಿಗೆ ಕೂಗಿ ಹೇಳಬೇಕಿದೆ. ರಾಜ್ಯ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಬಲಹೀನಗೊಳಿಸುವ ಮೋದಿ ತಂತ್ರವನ್ನು ನಾವು ತಡೆಗಟ್ಟಬೇಕಿದೆ, ರಫೆಲ್ ಡೇಲ್ ನಲ್ಲಿ ಪ್ರಧಾನಿ ಸಚಿವಾಲಯ ಭಾಗಿಯಾಗುವ ಮೂಲಕ ದೇಶಕ್ಕೆ ಅಗೌರವ ತೋರಿದ್ದಾರೆ. ನಾವು ಹಳದಿ ಹಾಗೂ ಕಪ್ಪು ಅಂಗಿ ತೊಟ್ಟು, ಬಾಲೂನ್ ಹಿಡಿದು ಗಾಂಧಿಜೀ ಮಾರ್ಗದ ಪ್ರತಿಭಟನೆ ಮಾಡೋಣ' ಎಂದಿದ್ದಾರೆ.

ಪೌರತ್ವ ಮಸೂದೆ ಬಗ್ಗೆ ಸುಳ್ಳುಸುದ್ದಿ ಹರಡಿಸಲಾಗುತ್ತಿದೆ: ಮೋದಿ ಆರೋಪ ಪೌರತ್ವ ಮಸೂದೆ ಬಗ್ಗೆ ಸುಳ್ಳುಸುದ್ದಿ ಹರಡಿಸಲಾಗುತ್ತಿದೆ: ಮೋದಿ ಆರೋಪ

ತೆಲಂಗಾಣ ರಾಜ್ಯಕ್ಕೆ ಸಿಕ್ಕಂತೆ ಆಂಧ್ರಪ್ರದೇಶಕ್ಕೂ ವಿಶೇಷ ಮಾನ್ಯತೆ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಆಂಧ್ರಪ್ರದೇಶ ಚಂದ್ರಬಾಬು ನಾಯ್ಡು ಅವರು ಕೋರಿದ್ದರು. ಆದರೆ, ಆಂಧ್ರದ ಮನವಿಯನ್ನು ಮೋದಿ ತಿರಸ್ಕರಿಸಿದ್ದರು.

ಗುಂಟೂರಿನಲ್ಲಿ ಟಿಡಿಪಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ರಣಕಹಳೆಗುಂಟೂರಿನಲ್ಲಿ ಟಿಡಿಪಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ರಣಕಹಳೆ

ಗುಂಟೂರಿನ ಎತ್ಕೂರು ಬೈ ಪಾಸ್ ರಸ್ತೆ ಬಳಿ ಪ್ರಜಾ ಚೈತನ್ಯ ಸಭಾ ಸಾರ್ವಜನಿಕ ಸಭೆಯನ್ನು ನಡೆಸಲಿರುವ ಮೋದಿ ಅವರು ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.

ಹುಬ್ಬಳ್ಳಿ : ಸಂಜೆ 5 ಗಂಟೆಗೆ ನರೇಂದ್ರ ಮೋದಿ ಸಮಾವೇಶ ಹುಬ್ಬಳ್ಳಿ : ಸಂಜೆ 5 ಗಂಟೆಗೆ ನರೇಂದ್ರ ಮೋದಿ ಸಮಾವೇಶ

ಇದಲ್ಲದೆ, ಕೃಷ್ಣಪಟ್ಟಣಂನಲ್ಲಿ ಬಿಪಿಸಿಎಲ್ ಹೊಸ ಟರ್ಮಿನಲ್ ಸ್ಥಾಪನೆಗೆ ಶಂಕು ಸ್ಥಾಪನೆ ಮಾಡ್ಲಿದ್ದಾರೆ ಒನ್ಎನ್ ಜಿಸಿಯ ವಿಶಿಷ್ಟ ಹಾಗೂ ಎಸ್ 1 ಅಭಿವೃದ್ಧಿ ಯೋಜನೆ, ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದ ಯೋಜನೆ ಹಾಗೂ ವಿಶಾಖಪಟ್ಟಣಂನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

English summary
Prime Minister Narendra Modi's visit to Andhra Pradesh, anti-Modi posters surfaced in the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X