ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ: ಮೂವರು ಪ್ರಾಣಾಪಾಯದಿಂದ ಪಾರು

|
Google Oneindia Kannada News

ವಿಜಯವಾಡ, ಆಗಸ್ಟ್ 18: ಭಿನ್ನಾಭಿಪ್ರಾಯ ತಾರಕಕ್ಕೇರಿ ಮೂವರಿದ್ದ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಆಂಧ್ರಪ್ರದೇಶಲ್ಲಿ ನಡೆದಿದೆ.

ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಒಬ್ಬರಿಗೆ ಗಂಭೀರ ಗಾಯವಾಗಿದೆ. ಆರೋಪಿಯನ್ನು ವೇಣುಗೋಪಾಲ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಆತ ಬೆಂಕಿ ಹಚ್ಚಿದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.

ಕೊರೊನಾ ಸೋಂಕಿತ ಸಾವು: ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಕುಟುಂಬಸ್ಥರುಕೊರೊನಾ ಸೋಂಕಿತ ಸಾವು: ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಕುಟುಂಬಸ್ಥರು

ಕಾರಿನೊಳಗಿದ್ದವರು ಗಂಗಾಂಧರ್, ಅವರ ಪತ್ನಿ ಹಾಗೂ ಒಬ್ಬ ಸ್ನೇಹಿತ ಎನ್ನಲಾಗಿದೆ. ಇವರ ಪೈಕಿ ಸ್ನೇಹಿತನಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಗಾಧರ್ ಮತ್ತವರ ಪತ್ನಿಗೆ ಸ್ವಲ್ಪ ಗಾಯಗಳಾಗಿರುವುದು ತಿಳಿದುಬಂದಿದೆ. ಭರತ್ ನಗರ್​ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಫೈವ್ ಸ್ಟಾರ್ ಹೋಟೆಲ್​ವೊಂದರ ಪಕ್ಕದಲ್ಲೇ ಈ ಘಟನೆ ನಡೆಸಿದೆ.

Man Sets Car On Fire After Locking Former Business Partner

ಗಂಗಾಧರ್ ಅವರೇ ಕೊನೆಗೆ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ ಸೋಮವಾರ ಸಂಜೆ ವಿಜಯವಾಡದಲ್ಲಿ ವೇಣುಗೋಪಾಲ್ ರೆಡ್ಡಿ ಜೊತೆ ಗಂಗಾಧರ್ ಹಾಗೂ ಅವರ ಪತ್ನಿ ಮತ್ತು ಒಬ್ಬ ಸ್ನೇಹಿತ ಕಾರಿನಲ್ಲಿ ಕೂತು ವ್ಯವಹಾರ ಸಂಬಂಧಿತ ಚರ್ಚೆ ನಡೆಸಿದ್ದಾರೆ.

ಸಿಗರೇಟು ಸೇದಿ ಬರುತ್ತೇನೆಂದು ಹೇಳಿ ಆರೋಪಿ ಆ ಕಾರನ್ನು ಲಾಕ್ ಮಾಡಿ ಹೊರಗೆ ಬಂದಿದ್ದಾನೆ. ವಿಸ್ಕಿ ಬಾಟಲ್​ನಲ್ಲಿ ತಾನು ತುಂಬಿಕೊಂಡು ಬಂದಿದ್ದ ಪೆಟ್ರೋಲ್ ಅನ್ನು ಕಾರಿಗೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹರ್ಷವರ್ಧನ್ ರಾಜು ತಿಳಿಸಿದ್ದಾರೆ.

ಆರೋಪಿ ವೇಣುಗೋಪಾಲ್ ರೆಡ್ಡಿ ಮತ್ತು ಗಂಗಾಧರ್ ಇಬ್ಬರೂ ಕೆಲ ಕಾಲದ ಹಿಂದೆ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದರು. ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.

ಆದರೆ, ಕಾಲಾನಂತರದಲ್ಲಿ ವ್ಯವಹಾರ ಸರಿಯಾಗಿ ಆಗದೆ ನಷ್ಟ ತಲೆದೋರಿದೆ. ಈ ವೇಳೆ ವೇಣುಗೋಪಾಲ್ ಮತ್ತು ಗಂಗಾಧರ್ ಪಾರ್ಟ್ನರ್​ಶಿಪ್ ಕಡಿದುಕೊಂಡಿದ್ದಾರೆ. ಬಳಿಕ ಗಂಗಾಧರ್ ಅವರನ್ನು ಸಂಪರ್ಕಿಸಿ ಮಾತನಾಡಲು ಆರೋಪಿ ವೇಣುಗೋಪಾಲ್ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

English summary
A man allegedly set a car on fire after locking three persons, including a woman, inside the vehicle in broad daylight in Vijayawada, Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X