• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರಪ್ರದೇಶದಲ್ಲಿ ಒಂದೇ ಕುಟುಂಬದ 6 ಮಂದಿ ಬರ್ಬರ ಹತ್ಯೆ

|

ಆಂಧ್ರ ಪ್ರದೇಶ, ಏಪ್ರಿಲ್ 15: ಒಂದೇ ಕುಟುಂಬದ ಆರು ಮಂದಿಯನ್ನು ರಾತ್ರೋರಾತ್ರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೆಂಡುರ್ತಿ ಮಂಡಲ್ ಎಂಬಲ್ಲಿ ನಡೆದಿದೆ.

ಆರೋಪಿಯನ್ನು ಅಪ್ಪಲರಾಜು ಎಂದು ಗುರುತಿಸಲಾಗಿದೆ. ಈ ಕುಟುಂಬದ ಒಬ್ಬ ವ್ಯಕ್ತಿಯು ಅಪ್ಪಲರಾಜು ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಈ ಸೇಡಿನಿಂದ ಆರು ಮಂದಿಯನ್ನು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಆದರೆ ಅತ್ಯಾಚಾರ ಆರೋಪಿಯು ನಾಪತ್ತೆಯಾಗಿದ್ದಾನೆ. ಇವರ ನಡುವೆ ಆಸ್ತಿ ವಿಷಯವಾಗಿ ಜಗಳ ನಡೆದಿರುವುದಾಗಿಯೂ ತಿಳಿದುಬಂದಿದೆ.

ಒರಿಸ್ಸಾ ಮೂಲದ ತಾಯಿ ಮತ್ತು ಮಗನ ಬರ್ಬರ ಹತ್ಯೆ ! ಒರಿಸ್ಸಾ ಮೂಲದ ತಾಯಿ ಮತ್ತು ಮಗನ ಬರ್ಬರ ಹತ್ಯೆ !

ಬುಧವಾರ ಮಧ್ಯ ರಾತ್ರಿ ಈ ಎರಡೂ ಕುಟುಂಬದ ನಡುವೆ ಜಗಳ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆನಂತರ ಕೊಲೆ ಮಾಡಲಾಗಿದೆ. ಗುರುವಾರ ಬೆಳಿಗ್ಗೆ ಸಂಗತಿ ಬೆಳಕಿಗೆ ಬಂದಿದೆ. ಆನಂತರ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಂತರ ಕಾರಣ ಬಹಿರಂಗವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ವಿಜಯಸಾಯಿ ರೆಡ್ಡಿ ಅವರು ಈ ಪ್ರಕರಣದ ಸಮಗ್ರ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

English summary
Six members of a family killed by a man whose daughter was allegedly raped by a member of the said family at andhra pradesh,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X