ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್, ಕೆಸಿಆರ್ ಮೋದಿ ಅವರ ಮುದ್ದಿನ ನಾಯಿಗಳು: ಚಂದ್ರಬಾಬು ನಾಯ್ಡು ವಿವಾದ

|
Google Oneindia Kannada News

ಕೃಷ್ಣಾ, ಏಪ್ರಿಲ್ 9: ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು, ವೈಎಸ್ಆರ್‌ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು 'ನರೇಂದ್ರ ಮೋದಿ ಅವರ ಮುದ್ದಿನ ನಾಯಿಗಳು' ಎಂದು ಕರೆದಿದ್ದಾರೆ.

ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಚಂದ್ರಬಾಬು ನಾಯ್ಡು, ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾರೀ ಬೆಲೆ ತೆರಬೇಕಾಗುತ್ತೆ! ಮೋದಿಗೆ ನಾಯ್ಡು ಖಡಕ್ ಎಚ್ಚರಿಕೆ ಭಾರೀ ಬೆಲೆ ತೆರಬೇಕಾಗುತ್ತೆ! ಮೋದಿಗೆ ನಾಯ್ಡು ಖಡಕ್ ಎಚ್ಚರಿಕೆ

'ನಾಚಿಕೆಯಿಲ್ಲದ ಜಗನ್ ಮೋಹನ್ ರೆಡ್ಡಿ ನಾಯಿ ಬಿಸ್ಕತ್ತು ತಿನ್ನುತ್ತಿದ್ದಾರೆ. ಅದನ್ನು ನಮಗೂ ಹಂಚಲು ಬರುತ್ತಿದ್ದಾರೆ. ಜಗನ್ ಮೋಹನ್ ರೆಡ್ಡಿ ಮತ್ತು ಕೆಸಿಆರ್ ಇಬ್ಬರೂ ಮೋದಿ ಅವರ ಮುದ್ದಿನ ನಾಯಿಗಳು. ಒಂದೇ ಒಂದು ಬಿಸ್ಕತ್‌ಗಾಗಿ ಅವರು ಮೋದಿ ಅವರ ಕಾಲಬಳಿ ಕೂರುತ್ತಾರೆ. ಜಗನ್ ಆ ಬಿಸ್ಕತ್‌ಗಳನ್ನು ನಿಮ್ಮೊಂದಿಗೂ ಹಂಚಿಕೊಳ್ಳಲು ಬರುತ್ತಾರೆ. ಎಚ್ಚರದಿಂದಿರಿ' ಎಂದು ನಾಯ್ಡು ಹೇಳಿದರು.

Lok Sabha elections 2019 jagan, kcr modis pet dogs Andhra Pradesh cm Chandrababu Naidu

ವೈಎಸ್‌ಆರ್‌ಸಿಪಿಯ ರಾಜಕೀಯ ಪ್ರಚಾರಗಳಿಗೆ ಬಿಜೆಪಿ ಮತ್ತು ಟಿಆರ್‌ಎಸ್ ಹಣಕಾಸು ಒದಗಿಸುತ್ತಿವೆ ಎಂದು ಆರೋಪಿಸಿದ ನಾಯ್ಡು, ಕೋಟ್ಯಂತರ ರೂಪಾಯಿ ಸುರಿದರೂ ರಾಜ್ಯದಲ್ಲಿ ಅವರು ಮತಗಳನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂದರು.

ಚಂದ್ರಬಾಬು ನಾಯ್ಡುಗೆ NDA ಮುಚ್ಚಿದ ಬಾಗಿಲು! ಅಮಿತ್ ಶಾ ಕಿಡಿಚಂದ್ರಬಾಬು ನಾಯ್ಡುಗೆ NDA ಮುಚ್ಚಿದ ಬಾಗಿಲು! ಅಮಿತ್ ಶಾ ಕಿಡಿ

'ಮೋದಿ ಮತ್ತು ಕೆಸಿಆರ್ ಜಗನ್ ಅವರ ಚುನಾವಣಾ ಖರ್ಚಿಗಾಗಿ ಸಾವಿರ ಕೊಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಕೆಸಿಆರ್, ನೀವು ಏಕೆ ಆ ಹಣ ಕಳುಹಿಸಿದ್ದು? ನಿಮ್ಮ ರಾಜ್ಯದ ಹಣವನ್ನು ನಮಗೇಕೆ ಕಳುಹಿಸಿದಿರಿ? ನೀವು ಹತ್ತು ಸಾವಿರ ಕೋಟಿ ರೂಪಾಯಿ ಸುರಿದರೂ ನಿಮಗೆ ಇಲ್ಲಿ ಒಂದೇ ಒಂದು ಮತ ಸಿಗುವುದಿಲ್ಲ. ನಿಮ್ಮ ಬಗ್ಗೆ ಇಲ್ಲಿನ ಜನ ಕೋಪಗೊಂಡಿದ್ದಾರೆ' ಎಂದು ಹೇಳಿದರು.

English summary
Lok Sabha elections 2019: Andhra Pradesh Chief Minister Chandrababu Naidu sparked controversy by calling Jagan Mohan Reddy and K Chandrasekhar Rao the 'pet dogs of Modi'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X