ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ತಿಂಗಳ ಮಗು ಜೊತೆ ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ

|
Google Oneindia Kannada News

ಅಮರಾವತಿ, ಏಪ್ರಿಲ್ 12 : ದೇಶದಲ್ಲಿ ಕೊರೊನಾ ಆತಂಕ ಸೃಷ್ಟಿ ಮಾಡಿದೆ. ವೈದ್ಯರು, ಪೊಲೀಸರು ಬಿಡುವಿಲ್ಲದಂತೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಸಹ ಜನರಿಗೆ ನೆರವಾಗಲು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಐಎಎಸ್ ಅಧಿಕಾರಿಯೊಬ್ಬರ ಕಾರ್ಯ ವೈಖರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸೃಜನಾ ಗುಮ್ಮಲ್ಲ ಎಂಬ ಅಧಿಕಾರಿ ವಿಶಾಖಪಟ್ಟಣಂ ಮುನಿಪಲ್ ಕಮೀಷನರ್. ಒಂದು ತಿಂಗಳ ಮಗುವಿನೊಂದಿಗೆ ಅವರು ಕೆಲಸಕ್ಕೆ ಹಾಜರಾಗಿದ್ದಾರೆ.

ಗೃಹಬಂಧನ ಬಿಟ್ಟು ಓಡಿಹೋಗಿದ್ದ ಕೇರಳ ಐಎಎಸ್ ಅಧಿಕಾರಿ ವಿರುದ್ಧ ಕೇಸ್ಗೃಹಬಂಧನ ಬಿಟ್ಟು ಓಡಿಹೋಗಿದ್ದ ಕೇರಳ ಐಎಎಸ್ ಅಧಿಕಾರಿ ವಿರುದ್ಧ ಕೇಸ್

ನಿಯಮಗಳ ಅನ್ವಯ ಮಾತೃತ್ವದ ರಜೆ ಪಡೆಯಲು ಅವರಿಗೆ ಅವಕಾಶವಿದೆ. ಆದರೆ, ಕೊರೊನಾ ಸಮಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ತೋಳಿನಲ್ಲಿ ಪುಟ್ಟ ಕಂದನ್ನು ಕರೆದುಕೊಂಡು ಬಂದು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಮಗುಗೆ ಜನ್ಮನೀಡಿ ಮಾದರಿಯಾದ ಐಎಎಸ್ ಅಧಿಕಾರಿಸರ್ಕಾರಿ ಆಸ್ಪತ್ರೆಯಲ್ಲಿ ಮಗುಗೆ ಜನ್ಮನೀಡಿ ಮಾದರಿಯಾದ ಐಎಎಸ್ ಅಧಿಕಾರಿ

Lockdown IAS Officer Working With One Month Baby

ಐಎಎಸ್ ಅಧಿಕಾರಿಗಳ ಸಂಘ ಕೂಡಾ ಸೃಜನಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಸೃಜನಾ ಅವರ ಫೋಟೋಗಳು ವೈರಲ್ ಆಗಿವೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆ

"ಜವಾಬ್ದಾರಿಯುತ ಅಧಿಕಾರಿಯಾಗಿ ಇಂತಹ ಸಮಯದಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ಬದ್ಧತೆಯೊಂದಿಗೆ ಕೆಲಸ ಮಾಡಲು ನನ್ನ ಇಡೀ ಕುಟುಂಬವು ನನಗೆ ಪ್ರೇರಣೆಯಾಗಿದೆ" ಎಂದು ಸೃಜನಾ ಗುಮ್ಮಲ್ಲ ಹೇಳಿದ್ದಾರೆ.

ಸೃಜನಾ ಅವರ ಪತಿ ವಕೀಲರು. ಪತಿ ಮತ್ತು ತಾಯಿಯ ಬೆಂಬಲದಿಂದ ಕರ್ತವ್ಯ ನಿರ್ಹವಣೆ ಮಾಡಲು ಸಾಧ್ಯವಾಗುತ್ತಿದೆ. 4 ಗಂಟೆಗೊಮ್ಮೆ ಮನೆಗೆ ಹೋಗಿ ಮಗುವನ್ನು ನೋಡಿಕೊಂಡು, ಹಾಲುಣಿಸಿ ಬರುತ್ತಿದ್ದಾರೆ. ಜನರು ಸಹ ಸೃಜನಾ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

English summary
In the time of lockdown IAS officer working in Visakhapatnam with one month baby. Visakhapatnam Mucipal Commissioner Gummalla Srijana joined duty without maternity leave to serve the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X