ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶ ವಿಚಿತ್ರ ಕಾಯಿಲೆ ಪ್ರಕರಣ: ರಕ್ತದಲ್ಲಿ ಸೀಸ, ನಿಕ್ಕಲ್ ಅಂಶ ಪತ್ತೆ

|
Google Oneindia Kannada News

ಅಮರಾವತಿ, ಡಿಸೆಂಬರ್ 8: ಆಂಧ್ರಪ್ರದೇಶದ ಎಲೂರು ನಗರದಲ್ಲಿ ವಿಚಿತ್ರ ಕಾಯಿಲೆಯಿಂದ ನೂರಾರು ಜನರು ಆಸ್ಪತ್ರೆಗೆ ದಾಖಲಾದ ಪ್ರಕರಣದಲ್ಲಿ ವಿವಿಧ ಮಾದರಿಗಳನ್ನು ಅಧ್ಯಯನ ಮಾಡಿರುವ ತಜ್ಞರ ತಂಡಕ್ಕೆ, ಅಸ್ವಸ್ಥ ಜನರ ರಕ್ತದಲ್ಲಿ ಸೀಸ ಮತ್ತು ನಿಕ್ಕಲ್ ಪತ್ತೆಯಾಗಿದೆ.

ದೆಹಲಿಯ ಏಮ್ಸ್ ವೈದ್ಯರ ತಂಡ ಪೂರ್ವ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದ ವಿವಿಧ ಭಾಗಗಳಿಂದ ಕನಿಷ್ಠ 10 ಮಂದಿ ರೋಗಿಗಳ ರಕ್ತದ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಅವುಗಳಲ್ಲಿ ಭಾರಿ ಪ್ರಮಾಣದಲ್ಲಿ ಸೀಸ ಹಾಗೂ ನಿಕ್ಕಲ್ ಇರುವುದು ಗೊತ್ತಾಗಿದೆ. ಶನಿವಾರ ಸಂಜೆಯ ಬಳಿಕ ಎಲೂರು ಪಟ್ಟಣದಲ್ಲಿ ಇದ್ದಕ್ಕಿದ್ದಂತೆ ಜನರಲ್ಲಿ ವಿಚಿತ್ರ ಕಾಯಿಲೆ ಉಂಟಾಗಿತ್ತು.

ಆಂಧ್ರಪ್ರದೇಶದಲ್ಲಿನ ವಿಚಿತ್ರ ಕಾಯಿಲೆಗೆ ಕಾರಣ ಇದುಆಂಧ್ರಪ್ರದೇಶದಲ್ಲಿನ ವಿಚಿತ್ರ ಕಾಯಿಲೆಗೆ ಕಾರಣ ಇದು

ಜನರು ಹೀಗೆ ಕಾಯಿಲೆ ಬೀಳಲು ಕುಡಿಯುವ ನೀರು ಅಥವಾ ಹಾಲಿನಲ್ಲಿ ಸೀಸ ಮತ್ತು ನಿಕ್ಕಲ್ ರಾಸಾಯನಿಕಗಳು ಬೆರೆತಿರುವ ಸಾಧ್ಯತೆ ಕಾರಣ ಇರಬಹುದು ಎಂದು ತಜ್ಞರು ಊಹಿಸಿದ್ದಾರೆ. 'ಏಮ್ಸ್‌ಗೆ ನಾವು ತುರ್ತು ಕಾರಣದಿಂದ ಕೆಲವೇ ಪ್ರಮಾಣದಲ್ಲಿ ಮಾದರಿಗಳನ್ನು ಕಳುಹಿಸಿದ್ದೆವು. ಆದರೆ ಅವರ ವರದಿಗಳಲ್ಲಿ, ರೋಗಿಗಳ ಮಾದರಿಗಳಲ್ಲಿ ಭಾರಿ ಪ್ರಮಾಣದ ಸೀಸ ಹಾಗೂ ನಿಕ್ಕಲ್ ಪತ್ತೆಯಾಗಿದೆ. ನಾವು ಇನ್ನಷ್ಟು ಮಾದರಿಗಳನ್ನು ಕಳುಹಿಸಿದ್ದು, ಅವುಗಳ ವರದಿಗಳಿಗೆ ಕಾದಿದ್ದೇವೆ' ಎಂದು ಎಲೂರು ಸರ್ಕಾರಿ ಆಸ್ಪತ್ರೆ ವರಿಷ್ಠಾಧಿಕಾರಿ ಡಾ. ಎ.ವಿ. ಮೋಹನ್ ತಿಳಿಸಿದ್ದಾರೆ.

Lead, Nickel Found In Blood Of Eluru Mystery Disease Patients

'ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ ಮತ್ತು ಇತರೆ ಸಂಸ್ಥೆಗಳಲ್ಲಿ ಮತ್ತಷ್ಟು ಪರೀಕ್ಷೆಗಳು ನಡೆಯುತ್ತಿದ್ದು, ಅವುಗಳ ವರದಿ ಶೀಘ್ರದಲ್ಲಿಯೇ ಬರುವ ನಿರೀಕ್ಷೆಯಿದೆ' ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಎಲೂರಿನಲ್ಲಿ ವಿಚಿತ್ರ ಕಾಯಿಲೆ; ಸಿಎಂ ಜಗನ್ ಭೇಟಿಎಲೂರಿನಲ್ಲಿ ವಿಚಿತ್ರ ಕಾಯಿಲೆ; ಸಿಎಂ ಜಗನ್ ಭೇಟಿ

'ಈ ಪ್ರದೇಶದ ಜನರ ದೇಹದೊಳಗೆ ಹೀಗೆ ಇದ್ದಕ್ಕಿದ್ದಂತೆ ಸೀಸ ಮತ್ತು ನಿಕ್ಕಲ್ ಅಂಶಗಳು ಹೇಗೆ ಸೇರಿಕೊಳ್ಳಲು ಸಾಧ್ಯ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವಿಸ್ತೃತ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ' ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

English summary
AIIMS Report says lead and nickel were found in the blood samples of Andhra Pradesh's Eluru town mystery disease case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X