• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರಪ್ರದೇಶ ಟಿಡಿಪಿ ಅಧ್ಯಕ್ಷರಾಗಿ ಕಿಂಜರಾಪು ಅಚನ್‌ನಾಯ್ಡು ನೇಮಕ

|

ವಿಜಯವಾಡ, ಅಕ್ಟೋಬರ್ 19: ತೆಲುಗು ದೇಶಂ ಪಕ್ಷ(ಟಿಡಿಪಿ)ದ ಹೊಸ ಅಧ್ಯಕ್ಷರಾಗಿ ಮಾಜಿ ಸಚಿವ ಮತ್ತು ಪಕ್ಷದ ಹಿರಿಯ ನಾಯಕ ಕಿಂಜರಾಪು ಅಚನ್‌ನಾಯ್ಡು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಇದೇ ವೇಳೆ ಟಿಡಿಪಿಯ 27 ಸದಸ್ಯರ ಕೇಂದ್ರ ಸಮಿತಿ ಮತ್ತು 25 ಸದಸ್ಯರ ಪೊಲಿಟ್‌ಬ್ಯುರೊವನ್ನು ಪ್ರಕಟಿಸಿರುವ ನಾಯ್ಡು ಅವರು, ಕೇಂದ್ರ ಸಮಿತಿಯಲ್ಲಿ ಹಿರಿಯ ನಾಯಕರಾದ ಕಾವಲಿ ಪ್ರತಿಭಾ ಭಾರತಿ, ಗಲ್ಲಾ ಅರುಣಾ ಕುಮಾರ್, ಡಿಕೆ ಸತ್ಯಪ್ರಭಾ ಮತ್ತು ಕೋಟ್ಲಾ ಸೂರ್ಯಪ್ರಕಾಶ್ ರೆಡ್ಡಿ ಸೇರಿದಂತೆ ಆರು ಉಪಾಧ್ಯಕ್ಷರಿದ್ದಾರೆ.

ಆಂಧ್ರ ರೈತನ ಇಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು: ಚಂದ್ರಬಾಬು ನಾಯ್ಡು

ನಾ.ರಾ ಲೋಕೇಶ್ ಅವರೊಂದಿಗೆ ಕೆ.ರಾಮೋಹನ್ ನಾಯ್ಡು, ನಿಮ್ಮಲಾ ರಮನೈದು ಮತ್ತು ಬೀಡಾ ರವಿಚಂದ್ರ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.

ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಸೋಮವಾರ ಅಚನ್‌ನಾಯ್ಡು ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಎಲ್ ರಮಣ ಅವರನ್ನು ತೆಲಂಗಾಣದ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಉಳಿಸಿಕೊಳ್ಳಲಾಗಿದೆ. ನಾರಾ ಲೋಕೇಶ್ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ.

English summary
Telugu Desam president N Chandrababu Naidu on Monday reconstituted the party politburo and the central committee and appointed senior leader Kinjarapu Atchannaidu as the new president for the Andhra Pradesh unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X