ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಕಟೇಶ್ವರ ಭಕ್ತಿ ಚಾನೆಲ್‌ಗೆ ಪತ್ರಕರ್ತೆ ಸ್ವಪ್ನ ಸುಂದರಿ ನಿರ್ದೇಶಕಿಯಾಗಿ ನೇಮಕ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 14: ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಮಂಡಳಿಗೆ ಇನ್ಫೋಸಿಸ್ ಫೌಂಡೇಷನ್ ಸುಧಾಮೂರ್ತಿ ಸೇರಿದಂತೆ ಅನೇಕ ಹಿರಿಯರನ್ನು ನೇಮಿಸಿದ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಈಗ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (SVBC) ಮುಖ್ಯಸ್ಥ ಸ್ಥಾನಕ್ಕೆ ಜನಪ್ರಿಯ ನಿರೂಪಕಿ, ಪತ್ರಕರ್ತೆಯನ್ನು ಕರೆ ತರಲು ಮುಂದಾಗಿರುವ ಸುದ್ದಿ ಬಂದಿದೆ.

ಜಗನ್ ಮಹತ್ವದ ನಿರ್ಣಯ, ಟಿಟಿಡಿ ಮಂಡಳಿಗೆ ಸುಧಾಮೂರ್ತಿ ನೇಮಕಜಗನ್ ಮಹತ್ವದ ನಿರ್ಣಯ, ಟಿಟಿಡಿ ಮಂಡಳಿಗೆ ಸುಧಾಮೂರ್ತಿ ನೇಮಕ

ಲಭ್ಯ ಮಾಹಿತಿಯಂತೆ ಪೃಥ್ವಿರಾಜ್ ಮುಖ್ಯಸ್ಥರಾಗಿರುವ ಎಸ್ ವಿ ಬಿಸಿ ವಾಹಿನಿಗೆ ಪತ್ರಕರ್ತೆ ಸ್ವಪ್ನ ಸುಂದರಿ ಮುಖ್ಯಸ್ಥರಾಗಲಿದ್ದಾರೆ. ಈ ಕುರಿತಂತೆ ಶೀಘ್ರದಲ್ಲೇ ಅಧಿಕೃತ ಆದೇಶ ಹೊರ ಬರಲಿದೆ. ಟಿವಿ9 ಸುದ್ದಿ ವಾಹಿನಿಯಲ್ಲಿ ನಿರೂಪಕಿ, ವರದಿಗಾರ್ತಿಯಾಗಿ ಸುಮಾರು 15 ವರ್ಷಕ್ಕೂ ಅಧಿಕ ಅನುಭವವನ್ನು ಹೊಂದಿದ್ದ ಸ್ವಪ್ನ ಅವರು ನಂತರ ಜಗನ್ ಒಡೆತನದ ಸಾಕ್ಷಿ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿಯಾದರು. ಎಫ್ ಎಂ ವಾಹಿನಿ, ಸಂಗೀತಕ್ಷೇತ್ರದಲ್ಲೂ ಕೈಯಾಡಿಸಿರುವ ಸ್ವಪ್ನ ಅವರು ಮಾಧ್ಯಮ ಸಲಹೆಗಾರ್ತಿಯಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ನಂತರ ಈ ಸ್ಥಾನಕ್ಕೆ ವೈಎಸ್ ಜಗನ್ ಪತ್ನಿ ವೈಎಸ್ ಭಾರತಿಯನ್ನು ನೇಮಿಸಲಾಯಿತು. ಭಾರತಿ ಹಾಗೂ ಸಾಕ್ಷಿ ಇಬ್ಬರು ಉತ್ತಮ ಗೆಳತಿಯರು ಎಂಬುದು ಬಹಿರಂಗ ಸತ್ಯ.

Journalist-cum-television anchor Swapna Sundari to become director of SVBC

Recommended Video

ತಿಮ್ಮಪ್ಪನ ಒಡವೆಗಳನ್ನ ಜೂನ್ 28ರಂದು ಪ್ರದರ್ಶನಕ್ಕೆ ಇಡಲು ತಿರುಮಲ ತಿರುಪತಿ ದೇವಸ್ಥಾನ ನಿರ್ಧಾರ | Oneindia Kannada

ಆಂಧ್ರಕ್ಕೆ ಮೊಟ್ಟ ಮೊದಲ ಲೋಕಾಯುಕ್ತ ನೇಮಕ, ಜಗನ್ ನಡೆ ಹಿಂದಿನ ರಹಸ್ಯವೇನು? ಆಂಧ್ರಕ್ಕೆ ಮೊಟ್ಟ ಮೊದಲ ಲೋಕಾಯುಕ್ತ ನೇಮಕ, ಜಗನ್ ನಡೆ ಹಿಂದಿನ ರಹಸ್ಯವೇನು?

ಸ್ವಪ್ನ ಅವರಿಗಿಂತ ಮುಂಚಿತವಾಗಿ ಸಜ್ಜಲ ರಾಮಕೃಷ್ಣ ರೆಡ್ಡಿ, ದೇವುಲಪಲ್ಲಿ ಅಮರ್, ಕೆ ರಾಮಚಂದ್ರ ಮೂರ್ತಿ, ಜಿವಿಡಿ ಕೃಷ್ಣಮೋಹನ್, ಕೆ ಶ್ರೀಹರಿ ಹಾಗೂ ದೇವಿರೆಡ್ಡಿ ಶ್ರೀನಾಥ್ ರೆಡ್ಡಿ ಮೊದಲಾದ ಹಿರಿಯ ಪತ್ರಕರ್ತರಿಗೆ ಸಲಹಾ ಸಮಿತಿಯಲ್ಲಿ ಸ್ಥಾನ ಕಲ್ಪಿಸಿ ಉನ್ನತ ಹುದ್ದೆಗಳನ್ನು ನೀಡಿದ್ದಾರೆ. ಸಂಪುಟ ವಿಸ್ತರಣೆ, ಟಿಟಿಡಿ ಮಂಡಳಿ ನೇಮಕಾತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕದಲ್ಲೂ ಜಗನ್ ಸ್ವಜನಪಕ್ಷಪಾತಿ ಎಂಬುದನ್ನು ನಿರೂಪಿಸಿದ್ದರು. ಈಗ ಎಸ್ವಿಬಿ ಚಾನೆಲ್ ಮುಖ್ಯಸ್ಥೆಯಾಗಿ ಸ್ವಪ್ನರನ್ನು ನೇಮಿಸಿದರೆ ಮತ್ತೆ ಚರ್ಚೆಗೆ ಗ್ರಾಸವಾಗಲಿದೆ.

English summary
Journalist-cum-television anchor Swapna Sundari is likely to be appointed as the director of Sri Venkateshwara Bhakthi Channel by the Andhra Pradesh government headed by Y S Jagan Mohan Reddy shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X