ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಮಹತ್ವದ ನಿರ್ಣಯ, ಟಿಟಿಡಿ ಮಂಡಳಿಗೆ ಸುಧಾಮೂರ್ತಿ ನೇಮಕ

|
Google Oneindia Kannada News

Recommended Video

ಬಹುದೊಡ್ಡ ನಿರ್ಣಯವನ್ನು ತೆಗೆದುಕೊಂಡ ಜಗನ.| sudha murthy | Oneindia Kannada

ಅಮರಾವತಿ, ಸೆ. 17: ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿ ತಮ್ಮ ಅಂಕಲ್ ವೈ ವಿ ಸುಬ್ಬಾರೆಡ್ಡಿರನ್ನು ಕೂರಿಸಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇಂದು ಮಹತ್ವದ ನಿರ್ಣಯ ಕೈಗೊಂಡು ಆದೇಶ ಹೊರಡಿಸಿದ್ದಾರೆ.

ಟಿಟಿಡಿ ಮಂಡಳಿಗೆ ನೂತನ ಸದಸ್ಯರನ್ನು ನೇಮಕ ಮಾಡಿ ಆಂಧ್ರ ಪ್ರದೇಶ ಸಿಎಂ ಜಗನ್​ ಮೋಹನ್​ ರೆಡ್ಡಿ ಮಂಗಳವಾರದಂದು ಆದೇಶ ಹೊರಡಿಸಿದ್ದಾರೆ. ಟಿಟಿಡಿ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಮತ್ತೊಮ್ಮೆ ಟಿಟಿಡಿ ಮಂಡಳಿಗೆ ಮರಳಿದ್ದಾರೆ.

ಆಂಧ್ರಕ್ಕೆ ಮೊಟ್ಟ ಮೊದಲ ಲೋಕಾಯುಕ್ತ ನೇಮಕ, ಜಗನ್ ನಡೆ ಹಿಂದಿನ ರಹಸ್ಯವೇನು?ಆಂಧ್ರಕ್ಕೆ ಮೊಟ್ಟ ಮೊದಲ ಲೋಕಾಯುಕ್ತ ನೇಮಕ, ಜಗನ್ ನಡೆ ಹಿಂದಿನ ರಹಸ್ಯವೇನು?

ಜಗತ್ತಿನ ಶ್ರೀಮಂತ ದೇಗುಲ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲದ ಆಡಳಿತ ನಿರ್ವಹಣೆಗೆ ಜಗನ್ ಅವರು ತಮ್ಮ ಆಪ್ತರನ್ನು ಮಾತ್ರ ನೇಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹಳೆ ಮಂಡಳಿ ಅವಧಿ ಮುಕ್ತಾಯವಾಗಿ ಮೂರು ತಿಂಗಳಾದರೂ ಹೊಸ ಸದಸ್ಯರನ್ನು ನೇಮಿಸಿರಲಿಲ್ಲ. ಆದರೆ ಹೊಸ ಮಂಡಳಿ ರಚಿಸಿದ್ದಲ್ಲದೆ, ಸದಸ್ಯರ ಸಂಖ್ಯೆಯನ್ನು 15ರಿಂದ 25ಕ್ಕೇರಿಸಲಾಗಿದೆ. ಇದಲ್ಲದೆ ಮೂರು ಮಂದಿ ಎಕ್ಸ್ ಆಫಿಸಿಯೋ ಸದಸ್ಯರಿರುತ್ತಾರೆ.

ಮಂಡಳಿಯ ಹೊಸ ಸದಸ್ಯರ ಪೈಕಿ ಸುಧಾ ಮೂರ್ತಿ. ಸಂಪತ್​​ ರವಿ ನಾರಾಯಣ, ರಮೇಶ್​ ಶೆಟ್ಟಿ ಕರ್ನಾಟಕದಿಂದ ನೇಮಕವಾಗಿದ್ದಾರೆ. ಒಟ್ಟಾರೆ, ತೆಲಂಗಾಣದಿಂದ 7 ಮಂದಿ, ಆಂಧ್ರ ಪ್ರದೇಶದಿಂದ 8 ಜನ, ಕರ್ನಾಟಕ, ತಮಿಳುನಾಡಿನಿಂದ ತಲಾ 4, ದೆಹಲಿ, ಮಹಾರಾಷ್ಟ್ರದಿಂದ ತಲಾ ಒಬ್ಬರು ಈ ಮಂಡಳಿಯಲ್ಲಿ ಸದಸ್ಯರಾಗಿ ನೇಮಕವಾಗಿದ್ದಾರೆ.

ತಿರುಪತಿ ದೇವಾಲಯದ ಸುತ್ತಮುತ್ತ ಜಗನ್ ಆಡಳಿತದ 'ಕಲರವ'ತಿರುಪತಿ ದೇವಾಲಯದ ಸುತ್ತಮುತ್ತ ಜಗನ್ ಆಡಳಿತದ 'ಕಲರವ'

"ನನ್ನನ್ನು ಟಿಟಿಡಿ ಸದಸ್ಯರನ್ನಾಗಿ ನೇಮಿಸಿದ್ದು ಈ ಹಿಂದಿನ ಸರ್ಕಾರ. ಇದೀಗ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ ನಾನು ಸದಸ್ಯಳಾಗಿ ಮುಂದುವರಿಯುವುದು ಸರಿಯಲ್ಲ ಎಂಬುದು ನನ್ನ ಭಾವನೆ. ಹೊಸ ಸರ್ಕಾರಕ್ಕೂ ನನ್ನನ್ನು ಬೋರ್ಡ್ ಸದಸ್ಯಳನ್ನಾಗಿ ಮುಂದುವರಿಸುವ ಇಚ್ಛೆ ಇದ್ದರೆ ನಾನು ಸಂತೋಷದಿಂದ ಮತ್ತೆ ಬೋರ್ಡ್ ಗೆ ಸೇರುತ್ತೇನೆ" ಎಂದು ಸುಧಾಮೂರ್ತಿ ಅವರು ರಾಜೀನಾಮೆ ನೀಡಿದ್ದಾಗ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು

ಕರ್ನಾಟಕದಿಂದ 3 ಮಂದಿ ಸದಸ್ಯರು

ಕರ್ನಾಟಕದಿಂದ 3 ಮಂದಿ ಸದಸ್ಯರು

ಮಂಡಳಿಯ ಹೊಸ ಸದಸ್ಯರ ಪೈಕಿ ಸುಧಾ ಮೂರ್ತಿ. ಸಂಪತ್​​ ರವಿ ನಾರಾಯಣ, ರಮೇಶ್​ ಶೆಟ್ಟಿ ಕರ್ನಾಟಕದಿಂದ ನೇಮಕವಾಗಿದ್ದಾರೆ. ಒಟ್ಟಾರೆ, ತೆಲಂಗಾಣದಿಂದ 7 ಮಂದಿ, ಆಂಧ್ರ ಪ್ರದೇಶದಿಂದ 8 ಜನ, ಕರ್ನಾಟಕ, ತಮಿಳುನಾಡಿನಿಂದ ತಲಾ 4, ದೆಹಲಿ, ಮಹಾರಾಷ್ಟ್ರದಿಂದ ತಲಾ ಒಬ್ಬರು ಈ ಮಂಡಳಿಯಲ್ಲಿ ಸದಸ್ಯರಾಗಿ ನೇಮಕವಾಗಿದ್ದಾರೆ.

ಟಿಟಿಡಿ ಮಂಡಳಿ ಸುಧಾಮೂರ್ತಿಗೆ ಹೊಸದಲ್ಲ

ಟಿಟಿಡಿ ಮಂಡಳಿ ಸುಧಾಮೂರ್ತಿಗೆ ಹೊಸದಲ್ಲ

ಸುಧಾಮೂರ್ತಿ ಅವರನ್ನು ಟಿಟಿಡಿ ಸದಸ್ಯರನ್ನಾಗಿ ಫೆಬ್ರವರಿ 2017 ರಲ್ಲಿ ನೇಮಿಸಲಾಗಿತ್ತು. ಅದು ಕೇವಲ ಎರಡು ತಿಂಗಳ ಅವಧಿಗೆ. ನಂತರ 2018 ರಲ್ಲಿ ಮತ್ತೆ ಅವರನ್ನು ಸದಸ್ಯರನ್ನಾಗಿ ಮರುನೇಮಕ ಮಾಡಲಾಯ್ತು. ರಾಜಕೀಯ ನಿವೃತ್ತಿ ಪಡೆದ ಮತ್ತು ರಾಜ್ಯ ರಾಜಕಾರಣದಲ್ಲಿ ವಿಫಲರಾದವರಿಗಾಗಿ ಟಿಟಿಡಿ ಬೋರ್ಡ್ ಸೀಮಿತವಾಗಿದೆ ಎಂಬ ಟೀಕೆ ಹಬ್ಬಿದ್ದ ಸಮಯದಲ್ಲಿ ಆ ಬೋರ್ಡ್ ನ ಘನತೆಯನ್ನು ಹೆಚ್ಚಿಸಲು ಮುಂದಾಗಿದ್ದ ಅಂದಿನ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸುಧಾಮೂರ್ತಿ ಅವರನ್ನು ಬೋರ್ಡ್ ಗೆ ನೇಮಿಸುವ ನಿರ್ಧಾರ ತೆಗೆದುಕೊಂಡಿತ್ತು. ಈ ಬಾರಿ ಆಂಧ್ರದ ಡಿಪಿ ಅನಂತ ಹಾಗೂ ಸುಧಾಮೂರ್ತಿ ಅವರು ಮರು ನೇಮಕವಾಗಿದ್ದಾರೆ.

ಟಿಟಿಡಿಗೆ ಸುಧಾಮೂರ್ತಿ ರಾಜೀನಾಮೆ ನೀಡಿದ್ದು ಸತ್ಯ: ಕಾರಣವೇನು?ಟಿಟಿಡಿಗೆ ಸುಧಾಮೂರ್ತಿ ರಾಜೀನಾಮೆ ನೀಡಿದ್ದು ಸತ್ಯ: ಕಾರಣವೇನು?

ಟಿಟಿಡಿ ಮಂಡಳಿ ಅಧ್ಯಕ್ಷ ವಿವಾದ

ಟಿಟಿಡಿ ಮಂಡಳಿ ಅಧ್ಯಕ್ಷ ವಿವಾದ

ಅತ್ಯಂತ ಶ್ರೀಮಂತ ದೇಗುಲವಾದ ತಿರುಪತಿ ತಿರುಮಲ ದೇವಾಲಯದ ಟಿಟಿಡಿ ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕೆ ಅದರದೇ ಆದ ಮಹತ್ವವಿದೆ. ಜಗನ್ ಸಂಬಂಧಿ ವೈವಿ ಸುಬ್ಬಾರೆಡ್ಡಿ ನೇಮಕದ ಬಗ್ಗೆ ವಿವಾದ ಎದ್ದಿತ್ತು. ಸುಬ್ಬಾರೆಡ್ಡಿ ಕ್ರಿಶ್ಚಿಯನ್ ಆಗಿದ್ದು, ಅವರಿಗೆ ಹಿಂದು ದೇವಾಲಯದ ಆಡಳಿತ ನೀಡುವುದು ಎಷ್ಟು ಸರಿ ಎಂಬ ಬಗ್ಗೆ ಚರ್ಚೆ ಎದ್ದಿತ್ತು. ಜಗನ್ ತನ್ನ ಸಂಬಂಧಿ ಯೆಹೊವಾ ವಿನ್ಸೆಂಟ್ ಸುಬ್ಬಾರೆಡ್ಡಿ(ವೈವಿ ಸುಬ್ಬಾರೆಡ್ಡಿ) ಅವರನ್ನು ತಿರುಪತಿ ತಿರುಮಲ ಬೋರ್ಡ್ ನ ಚೇರ್ ಪರ್ಸನ್ ಆಗಿ ನೇಮಕ ಮಾಡಿ ಹಿಂದೂ ದೇಗುಲದ ದುಡ್ಡನ್ನು ಚರ್ಚ್ ಅಭಿವೃದ್ಧಿಗೆ ಬಳಸುತ್ತಾರೆ ಎಂಬ ಅಪವಾದವೂ ಕೇಳಿ ಬಂದಿತ್ತು. ಆದರೆ ನಾನು ಕ್ರೈಸ್ತನಲ್ಲ ಎಂದು ಸುಬ್ಬಾರೆಡ್ಡಿ ಸ್ಪಷ್ಟನೆ ನೀಡಿದ್ದರು.

ಟಿಟಿಡಿಗೆ ನೂತನ ಅಧ್ಯಕ್ಷ: ನಾನು ಹಿಂದೂ, ಕ್ರಿಶ್ಚಿಯನ್ ಅಲ್ಲ, ಸ್ಪಷ್ಟನೆಟಿಟಿಡಿಗೆ ನೂತನ ಅಧ್ಯಕ್ಷ: ನಾನು ಹಿಂದೂ, ಕ್ರಿಶ್ಚಿಯನ್ ಅಲ್ಲ, ಸ್ಪಷ್ಟನೆ

ನಿರೀಕ್ಷೆಯಂತೆ ಎನ್ ಶ್ರೀನಿವಾಸನ್ ನೇಮಕ

ನಿರೀಕ್ಷೆಯಂತೆ ಎನ್ ಶ್ರೀನಿವಾಸನ್ ನೇಮಕ

ವೈಎಸ್ ಆರ್ ಪಕ್ಷದ ಅಧ್ಯಕ್ಷ ಹಾಗೂ ಕಡಪ ಸಂಸದ ಜಗಮೋಹನ್ ರೆಡ್ಡಿ ಒಡೆತನದ ಕಂಪೆನಿಯಲ್ಲಿ ಕಾನೂನು ಬಾಹಿರವಾಗಿ ಇಂಡಿಯಾ ಸಿಮೆಂಟ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಅವರು ಹಣ ಹೂಡಿಕೆ ಮಾಡಿ, ಸಿಬಿಐ ತನಿಖೆ ಎದುರಿಸಿದ್ದು ನೆನಪಿರಬಹುದು. ಬಿಸಿಸಿಐನ ಮಾಜಿ ಅಧ್ಯಕ್ಷ ಉದ್ಯಮಿ ಎನ್ ಶ್ರೀನಿವಾಸನ್ ನೇಮಕ ನಿರೀಕ್ಷಿತವಾಗಿತ್ತು ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಉದ್ಯಮಿಗಳ ಪೈಕಿ ಮೈ ಹೋಂ ಗ್ರೂಪ್ ಚೇರ್ಮನ್ ಜುಪಲ್ಲಿ ರಾಮೇಶ್ವರ್ ರಾವ್(ತೆಲಂಗಾಣ), ಹಾಗೂ ನಮಸ್ತೆ ತೆಲಂಗಾಣ ದಿನಪತ್ರಿಕೆಯ ಎಂಡಿ ದಿವಕೊಂಡಾ ದಾಮೋದರ್ ರಾವ್ ಸೇರ್ಪಡೆಗೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಕಾರಣ ಎಂಬುದು ಗುಟ್ಟಾದ ವಿಷಯವೇನಲ್ಲ.

ಸಿಬಿಐ ನ್ಯಾಯಾಲಯದ ಕಟಕಟೆಗೆ ಶ್ರೀನಿವಾಸನ್ಸಿಬಿಐ ನ್ಯಾಯಾಲಯದ ಕಟಕಟೆಗೆ ಶ್ರೀನಿವಾಸನ್

ಟಿಟಿಡಿ ನೂತನ ಸದಸ್ಯರ ಪಟ್ಟಿ

ಟಿಟಿಡಿ ನೂತನ ಸದಸ್ಯರ ಪಟ್ಟಿ

ಆಂಧ್ರಪ್ರದೇಶ: ವಿ ಪ್ರಶಾಂತಿ, ಯುವಿ ರಮಣ ಮೂರ್ತಿ ರಾಜು(ಕೆ ಬಾಬು ರಾಜು), ಡಿ ಪಿ ಅನಂತ, ಚಿಪ್ಪಗಿರಿ ಪ್ರಸಾದ್, ಮೇದಾ ಮಲ್ಲಿಕಾರ್ಜುನ ರೆಡ್ಡಿ, ಗೊಲ್ಲ ಬಾಬು ರಾವ್, ನಾದೆಂದ್ಲಾ ಸುಬ್ಬಾರಾವ್, ಪಾರ್ಥಸಾರಥಿ

ಕರ್ನಾಟಕ: ರಮೇಶ್ ಶೆಟ್ಟಿ, ಸಂಪತ್, ರವಿ ನಾರಾಯಣನ್, ಸುಧಾ ನಾರಾಯಣಮೂರ್ತಿ

ತೆಲಂಗಾಣ: ಜುಪಲ್ಲಿ ರಾಮೇಶ್ವರ್ ರಾವ್, ದಾಮೋದರ್ ರಾವ್, ಪುಟ್ಟ ಪ್ರತಾಪ್ ರೆಡ್ಡಿ, ಬಿ ಪಾರ್ಥಸಾರಧಿ ರೆಡ್ಡಿ, ವಿ ಭಾಸ್ಕರ ರಾಮರಾವ್, ಮುರಾಂಶೆಟ್ಟಿ ರಾಮುಲು, ಕೆ ಶಿವಕುಮಾರ್.

ತಮಿಳುನಾಡು: ಕೃಷ್ಣಮೂರ್ತಿ ವೈದ್ಯನಾಥನ್, ಎನ್ ಶ್ರೀನಿವಾಸನ್, ನಿಚಿತಾ ಮುತ್ತುವರಪು, ಕುಮಾರ ಗುರು.
ದೆಹಲಿ: ಶಿವಶಂಕರನ್,
ಮಹಾರಾಷ್ಟ್ರ: ರಾಜೇಶ್ ಶರ್ಮ

English summary
Andhra Pradesh CM Jagan Mohan Reddy makes big decision inducted Infosys foundation chief Sudha Murthy and two others in TTD Board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X