ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿ ದಿಗ್ವಿಜಯದ ಹಿಂದಿನ ಶಕ್ತಿ ಪ್ರಶಾಂತ್ ಕಿಶೋರ್

|
Google Oneindia Kannada News

ಅಮರಾವತಿ, ಮೇ 24: 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು 2019ರಲ್ಲೂ ಗೆಲುವಿನ ಸಂಭ್ರಮದಲ್ಲಿದ್ದಾರೆ. ಆದರೆ, ಈ ಬಾರಿ ದಕ್ಷಿಣದಲ್ಲಿ ಯಶಸ್ಸು ಕಂಡಿದ್ದಾರೆ. ಸತತ 8 ವರ್ಷಗಳಿಂದ ಯಶಸ್ಸಿಗಾಗಿ ಹಂಬಲಿಸಿದ್ದ ವೈಎಸ್ ಜಗನ್ ಮೋಹನ್ ರೆಡ್ಡಿ ಕನಸು ನನಸಾಗಲು ನೆರವಾಗಿದ್ದಾರೆ.

ಬಿಹಾರದಲ್ಲಿ ಜೆಡಿಯು ಗೆಲುವಿಗೂ ಕಾರಣರಾಗಿದ್ದ ಪ್ರಶಾಂತ್ ಅವರಿಗೆ ಜೆಡಿಯು ಉಪಾಧ್ಯಕ್ಷ ಸ್ಥಾನವನ್ನು ನಿತೀಶ್ ಕುಮಾರ್ ಅವರು ನೀಡಿದ್ದಾರೆ. ಆದರೆ, 2017ರಲ್ಲೇ ತಮ್ಮ Indian Political Action Committee (IPAC) ತಂಡವನ್ನು ಆಂಧ್ರಪ್ರದೇಶದಲ್ಲಿ ನಿಯೋಜಿಸಿದ್ದ ಪ್ರಶಾಂತ್ ಅವರು ಆಂಧ್ರಪ್ರದೇಶ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಫಲಿತಾಂಶವನ್ನು ವೈಎಸ್ ಜಗನ್ ಮೋಹನ್ ರೆಡ್ಡಿ ಜತೆ ಕೂತು ವೀಕ್ಷಿಸಿದ್ದಾರೆ.

<span class=ಜಗನ್ ರೆಡ್ಡಿ ಪಟ್ಟುಗಳಿಗೆ ಹಳೇ ಜಟ್ಟಿ ಚಂದ್ರಬಾಬು ಚಿತ್" title="ಜಗನ್ ರೆಡ್ಡಿ ಪಟ್ಟುಗಳಿಗೆ ಹಳೇ ಜಟ್ಟಿ ಚಂದ್ರಬಾಬು ಚಿತ್" />ಜಗನ್ ರೆಡ್ಡಿ ಪಟ್ಟುಗಳಿಗೆ ಹಳೇ ಜಟ್ಟಿ ಚಂದ್ರಬಾಬು ಚಿತ್

ವೈಎಸ್ಸಾರ್ ಕಾಂಗ್ರೆಸ್ 25 ಲೋಕಸಭೆ ಸ್ಥಾನಗಳಲ್ಲಿ 22 ಸ್ಥಾನ ಗೆದ್ದಿದೆ. 175 ವಿಧಾನಸಭಾ ಕ್ಷೇತ್ರಗಳಲ್ಲಿ 150 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ಸಿನಿಂದ ಮುನಿಸಿಕೊಂಡು 2011ರಲ್ಲಿ ವೈಎಸ್ಸಾರ್ ಕಾಂಗ್ರೆಸ್ ಸ್ಥಾಪಿಸಿದ ಜಗನ್ ಗೆ ಅಧಿಕಾರಕ್ಕೆ ಬರಲು 8 ವರ್ಷ ಬೇಕಾಯಿತು.
ನಾಯ್ಡು ಕೋಟೆ ಭೇದಿಸಿದ ಜಗನ್! ಹೀಗೊಂದು ರೋಚಕ ರಾಜಕಾರಣ
2009ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಜಗನ್ ರೆಡ್ಡಿ ಅವರ ತಂದೆ ಮಾಜಿ ಸಿಎಂ ವೈಎಸ್ ರಾಜಶೇಖರರೆಡ್ಡಿ ಅವರು ಮೃತಪಟ್ಟ ಬಳಿಕವೇ ಅಧಿಕಾರ ಸಿಗುವ ಕನಸು ಕಂಡಿದ್ದ ಜಗನ್ ಗೆ ಸೋನಿಯಾ ಗಾಂಧಿ ನಿರಾಶೆ ಮೂಡಿಸಿದ್ದರು. ಇದೇ ಸಿಟ್ಟಿನಲ್ಲಿ ಪಕ್ಷ ಸಂಘಟಿಸಿ 2014ರಲ್ಲಿ ಚುನಾವಣೆ ಎದುರಿಸಿದರೂ ಗೆಲುವು ಕಂಡಿರಲಿಲ್ಲ.

ಬಿಹಾರದಲ್ಲಿ ಜೆಡಿಯು ಉಪಾಧ್ಯಕ್ಷ

ಬಿಹಾರದಲ್ಲಿ ಜೆಡಿಯು ಉಪಾಧ್ಯಕ್ಷ

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಗೆಲುವು ತಂದುಕೊಟ್ಟ ಬಳಿಕ ಪ್ರಶಾಂತ್ ಗೆ ಕೇಂದ್ರದಲ್ಲಿ ಉನ್ನತ ಹುದ್ದೆಯ ಆಸೆ ಇತ್ತಂತೆ. ಆದರೆ, ಇದಕ್ಕೆ ಅಮಿತ್ ಶಾ ಆಸ್ಪದ ನೀಡದ ಕಾರಣ ಅವರು ನಿತೀಶ್ ಹಾಗೂ ಮಹಾಮೈತ್ರಿಕೂಟ ಪರ ನಿಂತು ಶಾ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಶಾ ತಂತ್ರ ಎಲ್ಲವೂ ನೆಲಕಚ್ಚಿ, ಸಾರಾಯಿ ಮುಕ್ತ ಬಿಹಾರದ ಕನಸಿಗೆ ಜನ ಮತ ಹಾಕಿದರು. ಕೊನೆಗೆ ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ಕೈ ಜೋಡಿಸುವಂಥ ಪರಿಸ್ಥಿತಿ ಉಂಟಾಯಿತು. ಬಿಹಾರದಲ್ಲಿ ಪ್ರಶಾಂತ್ ಗೆ ಉಪಾಧ್ಯಕ್ಷ ಹುದ್ದೆ ಸಿಕ್ಕಿತು.

ಉತ್ತರಪ್ರದೇಶದಲ್ಲಿ ಪ್ರಶಾಂತ್ ಗೆ ಸೋಲು

ಉತ್ತರಪ್ರದೇಶದಲ್ಲಿ ಪ್ರಶಾಂತ್ ಗೆ ಸೋಲು

ಮೋದಿ ಗೆಲ್ಲಿಸಲು 'ಚಾಯ್ ಪೇ ಚರ್ಚಾ', ನಿತೀಶ್ ಗೆಲುವಿಗೆ 'ಸಾರಾಯಿ ಮುಕ್ತ' ಮಂತ್ರ ಜಪಿಸಿದ್ದ ಪ್ರಶಾಂತ್ ಕಿಶೋರ್, ಉತ್ತರಪ್ರದೇಶ ಜಾತಿ ಸಂಕೀರ್ಣತೆಯ ಮರ್ಮ ಅರಿಯದೆ 'ಮೇಲ್ವರ್ಗದ ಸಿಎಂ' ಎಂದು ಬ್ರಾಹ್ಮಣರಿಗೆ ಮಣೆ ಹಾಕಲು ಹೋಗಿ ಮಗಚಿ ಬಿದ್ದರು. ಶೀಲಾ ದೀಕ್ಷಿತ್ ಕರೆ ತರಲಾಯಿತು, ಕೊನೆಗೆ ಪ್ರಿಯಾಂಕಾ ಹೆಸರು ಕೇಳಿ ಬಂದಿತ್ತು.

ಒಬಿಸಿ ಮತಗಳು, ಅಖಿಲೇಶ್ ಸರ್ಕಾರ ಮರೆತ ಬುಡಕಟ್ಟು ಜನಾಂಗ, ಜಾತಿ, ಮತ ಪಂಥಗಳ ಓಲೈಕೆ ಮೂಲಕ ಬಿಜೆಪಿ ಶೇ 57ರಷ್ಟು ಕುರ್ಮಿ, ಶೇ 63ರಷ್ಟು ಲೋಧ್, ಶೇ 60 ರಷ್ಟು ಇತತೆ ಒಬಿಸಿ ಮತಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಅಖಿಲೇಶ್ ರಂತೆ ಪ್ರಶಾಂತ್ ಕೂಡಾ ಈ ವರ್ಗವನ್ನು ಕಡೆಗಣಿಸಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು. ಕೊನೆಯ ನಗು ಅಮಿತ್ ಶಾ ಪಾಲಾಯಿತು

ಯೋಗಿ ಆದಿತ್ಯನಾಥ್ ಗೆಲ್ಲುವಂತಾಯಿತು

ಯೋಗಿ ಆದಿತ್ಯನಾಥ್ ಗೆಲ್ಲುವಂತಾಯಿತು

2012ರಿಂದ ಇಲ್ಲಿ ತನಕ ಉತ್ತರಪ್ರದೇಶದಲ್ಲಿ ಅಖಿಲೇಶ್ ಬೆಳೆಸಿಕೊಂಡು ಬಂದಿದ್ದ ಇಮೇಜ್ ಸಂಪೂರ್ಣವಾಗಿ ಮಣ್ಣು ಪಾಲಾಯಿತು. ಅಖಿಲೇಶ್ ಸರಕಾರದ ವಿವಿಧ ಯೋಜನೆಗಳಾದ ಸಮಾಜವಾದಿ ಪಿಂಚಣಿ ಯೋಜನೆ, ಕಾಮಧೇನು ಡೈರಿ ಯೋಜನೆ, ನೀರಾವರಿ ಯೋಜನೆ, 2017ರ ಚುನಾವಣೆ ನಂತರ ಸ್ಮಾರ್ಟ್ ಫೋನ್ ವಿತರಣೆ ಮುಂತಾದ ಯೋಜನೆಗಳನ್ನು ಮುಂದಿಟ್ಟುಕೊಂಡು ಬಿಲ್ಡಪ್ ಕೊಟ್ಟಿದ್ದ ಪ್ರೊಫೆಸರ್ ಸ್ಟೀವ್ ಜಾರ್ಡಿಂಗ್ ಅವರ ಪರಿಶ್ರಮವನ್ನು ರಾಹುಲ್ ಹಾಗೂ ಪ್ರಶಾಂತ್ ಜೋಡಿ ಹಾಳುಗೆಡವಿತು. ಈಗ ಉತ್ತರಪ್ರದೇಶದಲ್ಲಿ ಒಂದು ಸೀಟು ಮಾತ್ರ ಗೆಲ್ಲುವ ಮೂಲಕ ಕಾಂಗ್ರೆಸ್ ಕೂಡಾ ಹೀನಾಯ ಪರಿಸ್ಥಿತಿ ತಲುಪಿದೆ. ಜೊತೆಗೆ ಎಸ್ ಪಿ ಜೊತೆ ಮೈತ್ರಿ ಕೂಡಾ ಇಲ್ಲವಾಗಿದೆ.

ಮತ್ತೆ ಲಯಕ್ಕೆ ಮರಳಿದ ಪ್ರಶಾಂತ್ ಕಿಶೋರ್

ಮತ್ತೆ ಲಯಕ್ಕೆ ಮರಳಿದ ಪ್ರಶಾಂತ್ ಕಿಶೋರ್

ಅಮಿತ್ ಶಾ ಉಪಯೋಗಿಸುವ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ ಮಂತ್ರವನ್ನೇ ಆಂಧ್ರದಲ್ಲಿ ಪ್ರಶಾಂತ್ ಪಾಠ ಮಾಡಿದರು. ರಾಯಲಸೀಮೆಯಲ್ಲಿ ಜಗನ್ ಗೆ ಬಲ ಬರುವಂತೆ ಮಾಡಿದರು. ಜಗನ್ ಅವರು 15 ತಿಂಗಳುಗಳ ನಡೆಸಿದ ಪ್ರಜಾ ಸಂಕಲ್ಪ ಪಾದಯಾತ್ರೆ, 'ರಾವಾಲಿ ಜಗನ್ ಕಾವಾಲಿ ಜಗನ್' ಎಂಬ ಘೋಷವಾಕ್ಯ ಕೋಟ್ಯಂತರ ಜನರನ್ನು ತಲುಪಿತು. ಚಂದ್ರಬಾಬು ವಿರುದ್ಧ 'ಬೈ ಬೈ ಬಾಬು' ಅಭಿಯಾನವು ಯಶಸ್ವಿಯಾಯಿತು. ನವ್ಯಾ ಆಂಧ್ರ ಯೋಜನೆ ಮೂಲಕ 70 ಸಾವಿರ ಯುವ ಜನರನ್ನು ಸೆಳೆದು ಜಗನ್ ಯೋಜನೆಗಳನ್ನು ತಲುಪಿಸಲು ನೆರವಾದರು.

English summary
The YSR Congress has won 22 of 25 Lok Sabha seats and more than 150 of 175 assembly segments in the polls. Jagan Mohan founded YSR Congress in 2011 breaking away from the Congress. The success in Andhra Pradesh is another feather in the cap of political strategist Prashant Kishor and his Indian Political Action Committee (IPAC) team
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X