ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಮ್ಮ ಮಕ್ಕಳು ಓದಿದ್ದು ಯಾವ ಶಾಲೆಯಲ್ಲಿ?' ನಾಯ್ಡುಗೆ ರೆಡ್ಡಿ ಪ್ರಶ್ನೆ

|
Google Oneindia Kannada News

ಅಮರಾವತಿ, ನವೆಂಬರ್ 12: ಆಂಧ್ರಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳನ್ನೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಬದಲಿಸಲು ಹೊರಟ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನಡೆಯನ್ನು ಟೀಕಿಸಿದ ಚಂದ್ರಬಾಬು ನಾಯ್ಡು ಅವರನ್ನು ಜಗನ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ದೂರುವವರು, ತಮ್ಮ ಮಕ್ಕಳನ್ನು ಯಾವ ಶಾಲೆಯಲ್ಲಿ ಓದಿಸಿದ್ದರು ಎಂಬುದನ್ನು ಹೇಳಲಿ. "ಸರ್, ಚಂದ್ರಬಾಬು ಗಾರು, ನಿಮ್ಮ ಮಗ ಯಾವ ಶಾಲೆಯಲ್ಲಿ ಓದಿದ್ದು? ನಾಳೆ ನಿಮ್ಮ ಮೊಮ್ಮಗ ಯಾವ ಶಾಲೆಯಲ್ಲಿ ಓದುತ್ತಾನೆ? ಸರ್, ವೆಂಕಯ್ಯ ನಾಯ್ಡು ಗಾರು, ಯಾವ ಮಾಧ್ಯಮದಲ್ಲಿ ನಿಮ್ಮ ಮಕ್ಕಳು, ಮೊಮ್ಮಕ್ಕಳು ಓದುತ್ತಿದ್ದಾರೆ?" ಎಂದು ಜಗನ್ ರೆಡ್ಡಿ ಪ್ರಶ್ನಿಸಿದ್ದಾರೆ.

ಪ್ರಶಸ್ತಿಗೆ ಕಲಾಂ ಬದಲು ಅಪ್ಪನ ಹೆಸರು, ಆಕ್ರೋಶಕ್ಕೆ ಹೆದರಿ ಒಲ್ಲೆ ಎಂದ ಜಗನ್ಪ್ರಶಸ್ತಿಗೆ ಕಲಾಂ ಬದಲು ಅಪ್ಪನ ಹೆಸರು, ಆಕ್ರೋಶಕ್ಕೆ ಹೆದರಿ ಒಲ್ಲೆ ಎಂದ ಜಗನ್

ಸರ್ಕಾರಿ ಶಾಲೆಗಳೆಲ್ಲವನ್ನೂ ಇಂಗ್ಲಿಷ್ ಮಾಢ್ಯಮ ಶಾಲೆಯನ್ನಾಗಿ ಮಾಡಲು ಹೊರಟ ಸರ್ಕಾರದ ಕ್ರಮವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ವಿರೋಧಿಸಿದ್ದರು.

Jagan Mohan Reddy Slams Chandrababu Naidu, Venkaiah Naidu

ಈ ಕುರಿತು ಜನಸೇನಾ ಮುಖಂಡ, ನಟ ಪವನ್ ಕಲ್ಯಾಣ್ ಅವರೂ ವಿರೊಧ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಜಗನ್ ಮೋಹನ್ ರೆಡ್ಡಿ, "ಸರ್, ನಟ ಪವನ್ ಕಲ್ಯಾಣ್ ಗಾರು, ನಿಮಗೆ ಮೂವರು ಪತ್ನಿಯರಿದ್ದಾರೆ. ನಾಲ್ಕು ಮಕ್ಕಳಿದ್ದಾರೆ. ಅವರೆಲ್ಲ ಓದುತ್ತಿರುವ ಶಾಲೆಯಲ್ಲಿ ಮಾಧ್ಯಮವಾಗಿ ಬಳಸುತ್ತಿರುವ ಭಾಷೆ ಯಾವುದು?" ಎಂದು ಅವರು ವ್ಯಂಗ್ಯವಾಗಿ ಕೇಳಿದ್ದಾರೆ.

ತಿರುಪತಿ: ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಮುಂದಾದ ವೈ ಎಸ್ ಜಗನ್ತಿರುಪತಿ: ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಮುಂದಾದ ವೈ ಎಸ್ ಜಗನ್

"ಈಗಿನ ಸ್ಪರ್ಧಾತ್ಮಕ ಕಾಲದಲ್ಲಿ ಇಂಗ್ಲಿಷ್ ಅತ್ಯಗತ್ಯ ಭಾಷೆಯಾಗಿದೆ. ಆದ್ದರಿಂದಲೇ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ" ಎಂದು ರೆಡ್ಡಿ ಸಮಜಾಯಿಷಿ ನೀಡಿದ್ದರು.

English summary
Andhra Pradesh Chief Minister YS Jagan Mohan Reddy Slams Chandrababu Naidu, Venkaiah Naidu And Pawan Kalyan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X