ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲೆ ಪ್ರಕರಣ: ಸಿಎಂ ಜಗನ್ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಸಹೋದರಿ

|
Google Oneindia Kannada News

ಅಮರಾವತಿ, ಜನವರಿ 29: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಮುಜುಗರ ಎದುರಾಗಿದೆ. ಕುಟುಂಬದವರೇ ಜಗನ್ ವಿರುದ್ಧ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ವೈಎಸ್‌ಆರ್‌ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಜಗನ್ ಮೋಹನ್ ರೆಡ್ಡಿ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಸಾವಿನ ಕುರಿತು ಅವರ ಮಗಳಾದ, ಜಗನ್‌ ಸಹೋದರಿಯೂ ಆಗಿರುವ ವೈದ್ಯೆ ಸುನಿತಾ ನಾರೆಡ್ಡಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಪೊಲೀಸ್ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ರದ್ದು: ಜಗನ್ ಸರ್ಕಾರದ ಮಹತ್ವದ ನಿರ್ಣಯವಿಧಾನ ಪರಿಷತ್ ರದ್ದು: ಜಗನ್ ಸರ್ಕಾರದ ಮಹತ್ವದ ನಿರ್ಣಯ

ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ವಿವೇಕ ರೆಡ್ಡಿ ಅವರ ಕೊಲೆಯಾಗಿತ್ತು. ಈ ಕೊಲೆಯ ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕೆಂದು ಆಗಿನ ವಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಈಗ ಅವರು ಅಧಿಕಾರಕ್ಕೆ ಬಂದರೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿಲ್ಲ.

ರಾಜ್ಯಕ್ಕೆ ಮೂರು ರಾಜಧಾನಿ: ಇದ್ಯಾಕಪ್ಪಾ ನೀರಿನಲ್ಲಿ ನಿಂತ್ರು ಜನ?ರಾಜ್ಯಕ್ಕೆ ಮೂರು ರಾಜಧಾನಿ: ಇದ್ಯಾಕಪ್ಪಾ ನೀರಿನಲ್ಲಿ ನಿಂತ್ರು ಜನ?

ಪ್ರಕರಣ ಕುರಿತು ಜಗನ್ ನಡವಳಿಕೆ ಬಗ್ಗೆ ಅನುಮಾನ

ಪ್ರಕರಣ ಕುರಿತು ಜಗನ್ ನಡವಳಿಕೆ ಬಗ್ಗೆ ಅನುಮಾನ

ಇದು ಸುನಿತಾ ಅವರ ಅನುಮಾನಕ್ಕೆ ಕಾರಣವಾಗಿದ್ದು, ನ್ಯಾಯಾಲಯದ ಮೆಟ್ಟಿಲೇರಿರುವ ಸುನೀತಾ, ಪ್ರಕರಣದಲ್ಲಿ ಸಹೋದರ, ಸಿಎಂ ಜಗನ್ ನಡವಳಿಕೆ ಮತ್ತು ಪೊಲೀಸ್ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಮನವಿ ಮಾಡಿದ್ದಾರೆ.

ಎರಡನೇ ಎಸ್‌ಐಟಿ ಯನ್ನು ರಚಿಸಿದ್ದು ಏಕೆ? ಪ್ರಶ್ನೆ

ಎರಡನೇ ಎಸ್‌ಐಟಿ ಯನ್ನು ರಚಿಸಿದ್ದು ಏಕೆ? ಪ್ರಶ್ನೆ

ಎರಡನೇ ಎಸ್‌ಐಟಿ ಅನ್ನು ಏಕೆ ರಚಿಸಲಾಯಿತು, ಎರಡನೇ ಎಸ್‌ಐಟಿಯು ತನಿಖೆಯನ್ನು ಎಸ್‌ಪಿ ನೇತೃತ್ವದಲ್ಲಿ ನಡೆಸುತ್ತಿರುವುದೇಕೆ. ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿಲ್ಲವೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರಕ್ಕೆ ಪ್ರಶ್ನೆ ಕೇಳಿದ ಹೈಕೋರ್ಟ್‌

ಸರ್ಕಾರಕ್ಕೆ ಪ್ರಶ್ನೆ ಕೇಳಿದ ಹೈಕೋರ್ಟ್‌

ಸುನೀತಾ ನಾರೆಡ್ಡಿ ಅರ್ಜಿ ವಿಚಾರಣೆ ನಡೆಸಿರುವ ಆಂಧ್ರ ಪ್ರದೇಶ ಹೈಕೋರ್ಟ್, 'ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣವನ್ನು ಸಿಬಿಐ ಗೆ ಏಕೆ ವಹಿಸಲಾಗಿಲ್ಲ, ಅಥವಾ ಸಿಬಿಐ ಗೆ ವಹಿಸಲು ಇರುವ ಅಡ್ಡಿಯೇನು? ಎಂದು ಪ್ರಶ್ನಿಸಿದೆ. ಸರ್ಕಾರ ಹೈಕೋರ್ಟ್‌ ಗೆ ಉತ್ತರ ನೀಡಬೇಕಿದೆ.

ಮಾರ್ಚ್‌ ನಲ್ಲಿ ಕೊಲೆಯಾಗಿದ್ದ ವಿವೇಕಾನಂದ ರೆಡ್ಡಿ

ಮಾರ್ಚ್‌ ನಲ್ಲಿ ಕೊಲೆಯಾಗಿದ್ದ ವಿವೇಕಾನಂದ ರೆಡ್ಡಿ

ವಿವೇಕಾನಂದ ರೆಡ್ಡಿ ಅವರು ಜಗನ್ ಮೋಹನ್ ರೆಡ್ಡಿ ತಂದೆ ಮಾಜಿ ಸಿಎಂ ರಾಜಶೇಖರ ರೆಡ್ಡಿ ಅವರ ಕಿರಿಯ ಸಹೋದರ. ಅವರನ್ನು ಮಾರ್ಚ್‌ 14 ರಂದು ಹತ್ಯೆ ಮಾಡಲಾಗಿತ್ತು. ದೇಹದ ಮೇಲೆ ಚಾಕುವಿನ ಇರಿತದಿಂದಾದ ಗಾಯ, ತಲೆಗೆ ತೀವ್ರತರವಾದ ಗಾಯಗಳು ಕಂಡುಬಂದಿದ್ದವು. ಆಂಧ್ರ ವಿಧಾನಸಭೆ ಚುನಾವಣೆಗೆ ಸ್ವಲ್ಪ ದಿನ ಮುಂಚಿತವಾಗಿ ಈ ಕೊಲೆ ನಡೆದಿತ್ತು.

English summary
Andhra Pradesh CM Jagan Mohan Reddy faces problem within the family. Jagan's uncles daughter goes to court over a murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X