ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಕ್ಯಾಬಿನೆಟ್ ನಲ್ಲಿ ಸಿಗದ ಸ್ಥಾನ, ಬೇಸತ್ತ ನಟಿ ರೋಜಾ ಮಾಡಿದ್ದೇನು?

|
Google Oneindia Kannada News

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ನಗರಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ. ಮರು ಆಯ್ಕೆಯಾದ ಬಳಿಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಚಿವ ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಜಗನ್ ಕ್ಯಾಬಿನೆಟ್ ನಲ್ಲಿ ಸ್ಥಾನ ಸಿಕ್ಕಿಲ್ಲ.

ತಪ್ಪಿದ ಕ್ಯಾಬಿನೆಟ್ ಸ್ಥಾನ, ನಟಿ ರೋಜಾಗೆ 'ಚೇರ್ಮನ್' ಸ್ಥಾನದ ಆಫರ್ತಪ್ಪಿದ ಕ್ಯಾಬಿನೆಟ್ ಸ್ಥಾನ, ನಟಿ ರೋಜಾಗೆ 'ಚೇರ್ಮನ್' ಸ್ಥಾನದ ಆಫರ್

ಜಗನ್ಮೋಹನ್‍ ರೆಡ್ಡಿಯವರ ವೈ.ಎಸ್‍.ಆರ್.ಕಾಂಗ್ರೆಸ್ ಪಕ್ಷದಿಂದ ನಗರಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ರೋಜಾ ಅವರು ರೋಚಕ ಗೆಲುವು ಸಾಧಿಸಿದ ಬಳಿಕ ಮಾತನಾಡಿ, ನಾನು ಪಕ್ಷಕ್ಕೆ 'ಐರನ್ ಲೆಗ್' ದುರಾದೃಷ್ಟವಂತೆ ಎಂದು ಜರೆಯಲಾಗಿತ್ತು. ಆದರೆ, ನಾನು 'ಗೋಲ್ಡನ್ ಲೆಗ್' ಅದೃಷ್ಟವಂತೆ ಎಂದು ಸಾಬೀತು ಮಾಡಿದ್ದೇನೆ ಎಂದಿದ್ದರು.

'ನಾನು ವೈಎಸ್ಸಾರ್ ಪಕ್ಷದ 'ಲಕ್ಕಿ ಚಾರ್ಮ್'': ನಟಿ ರೋಜಾ 'ನಾನು ವೈಎಸ್ಸಾರ್ ಪಕ್ಷದ 'ಲಕ್ಕಿ ಚಾರ್ಮ್'': ನಟಿ ರೋಜಾ

2009ರಲ್ಲಿ ತೆಲುಗುದೇಶಂ ಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷರಾಗಿದ್ದ ರೋಜಾ ಅವರು ಆ ವರ್ಷ ಸೋಲು ಕಂಡಿದ್ದರಿಂದ 'ಐರನ್ ಲೆಗ್ ' ಎಂದು ಎಲ್ಲರೂ ಜರೆದಿದ್ದರು. ನಂತರ ತೆಲುಗುದೇಶಂ ಪಕ್ಷವನ್ನು ಆಗಸ್ಟ್ 2009ರಲ್ಲಿ ತೊರೆದು ತಕ್ಷಣವೇ ವೈಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

ಬೇಸತ್ತ ರೋಜಾ ಫೋನ್ ಸ್ವಿಚ್ಡ್ ಆಫ್

ಬೇಸತ್ತ ರೋಜಾ ಫೋನ್ ಸ್ವಿಚ್ಡ್ ಆಫ್

ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ನೂತನ ಶಾಸಕಿಯಾಗಿ ಆರ್ ಕೆ ರೋಜಾ ಅವರಿಗೂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಚಿವ ಸಂಪುಟ ವಿಸ್ತರಣೆ ಸಮಾರಂಭಕ್ಕೆ ಹಾಜರಾಗಬೇಕಿತ್ತು. ಶನಿವಾರದಂದು 25 ಮಂದಿ ಶಾಸಕರನ್ನು ತಮ್ಮ ಸಂಪುಟಕ್ಕೆ ಜಗನ್ ಸೇರಿಸಿಕೊಂಡರು. ಆದರೆ, ಸಂಪುಟದಲ್ಲಿ ಸ್ಥಾನ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಜಾತಿ ಲೆಕ್ಕಾಚಾರದಿಂದ ಕೈ ತಪ್ಪಿದ ಅವಕಾಶ

ಜಾತಿ ಲೆಕ್ಕಾಚಾರದಿಂದ ಕೈ ತಪ್ಪಿದ ಅವಕಾಶ

ರೆಡ್ಡಿ ಸಮುದಾಯಕ್ಕೆ ಸೇರಿರುವ ರೋಜಾ ಅವರಿಗೆ ಸ್ಥಾನ ಸಿಗದೆ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಅವರಿಗೆ ಸ್ಥಾನ ಸಿಕ್ಕಿದೆ. ಚಿತ್ತೂರು ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ ರೋಜಾ ಬದಲಿಗೆ ರಾಮಚಂದ್ರ ರೆಡ್ಡಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಅದೇ ಜಿಲ್ಲೆಯವರಾದ ರೋಜಾರನ್ನು ಕಡೆಗಣಿಸಲಾಗಿದೆ. ಇದರಿಂದ ರೋಜಾ ಅಭಿಮಾನಿಗಳು, ಪಕ್ಷದಲ್ಲಿನ ಹಿಂಬಾಲಕರು ಕೂಡಾ ಬೇಸರಗೊಂಡೀದ್ದು, ಯಾರೂ ಕೂಡಾ ಹಿರಿಯ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ.

ಕ್ಯಾಬಿನೆಟ್ ಜಾತಿ ಲೆಕ್ಕಾಚಾರ

ಕ್ಯಾಬಿನೆಟ್ ಜಾತಿ ಲೆಕ್ಕಾಚಾರ

11 ಮಂದಿ ಮುಂದುವರಿದ ಜಾತಿ, ಪಂಗಡ, 7 ಮಂದಿ ಹಿಂದುಳಿದ ವರ್ಗ, 5 ಎಸ್ಸಿ, 1 ಎಸ್ಟಿ ಹಾಗೂ 1 ಅಲ್ಪಸಂಖ್ಯಾತ ಸಮುದಾಯಕ್ಕೆ ಹಂಚಲಾಗಿದೆ.

ಈ ಪೈಕಿ ನಾಲ್ವರು ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ. ಬಲಿನೇನಿ ಶ್ರೀನಿವಾಸ(ಓಂಗೊಲೆ), ಮೆಕಪಟಿ ಗೌತಮ್ ರೆಡ್ಡಿ(ಆತ್ಮಕೂರು), ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ(ಪುಂಗನೂರು), ಬುಗ್ಗನ್ನ ರಾಜೇಂದ್ರ ನಾಥ್ ರೆಡ್ಡಿ(ದೊನೆ) ಅವರಿಗೆ ಅವಕಾಶ ಸಿಕ್ಕಿದೆ.

ರೋಜಾ ಕಡಿಮೆ ಅಂತರದಲ್ಲಿ ರೋಚಕ ಗೆಲುವು ಕಂಡಿದ್ದಾರೆ

ರೋಜಾ ಕಡಿಮೆ ಅಂತರದಲ್ಲಿ ರೋಚಕ ಗೆಲುವು ಕಂಡಿದ್ದಾರೆ

ರೋಜಾ ಕಡಿಮೆ ಅಂತರದಲ್ಲಿ ರೋಚಕ ಗೆಲುವು ಕಂಡಿದ್ದಾರೆ. ಟಿಡಿಪಿ ಅಭ್ಯರ್ಥಿಯಾಗಿ ನಿಂತಿದ್ದ ಗಾಲಿ ಭಾನು ಪ್ರಕಾಶ್ ವಿರುದ್ಧ ರೋಜಾ ಬರೀ 2,630 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ‌ 2014 ರಲ್ಲಿ ಟಿಡಿಪಿ ಅಭ್ಯರ್ಥಿ ಗಾಲಿ ಮುದ್ದುಕೃಷ್ಣಂ ನಾಯ್ಡು ವಿರುದ್ಧ ಕೇವಲ 858 ಮತಗಳ ಅಂತರದಲ್ಲಿ ರೋಜಾ ಗೆದ್ದಿದ್ದರು. ಈ ಬಾರಿ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಆಡಳಿತ ವಿರೋಧಿ ಅಲೆ, ಜಗನ್ ಮೋಹನ್ ರೆಡ್ಡಿ ಆಶ್ವಾಸನೆ ಎಲ್ಲವೂ ವರ್ಕ್ ಔಟ್ ಆಗಿದೆ.

English summary
Firebrand MLA from Nagari, popular YSRCP leader R K Roja disappointed after being left out of the cabint. Roja who belongs to Reddy community, was disappointed being left out of the cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X