ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಪ್ಪನ ಕೊಲೆಯಲ್ಲಿ ಚಂದ್ರಬಾಬು ನಾಯ್ಡು ಕೈವಾಡ: ಜಗನ್ ಆರೋಪ

|
Google Oneindia Kannada News

ಅಮರಾವತಿ, ಮಾರ್ಚ್ 16: ಶುಕ್ರವಾರ ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದ ಆಂಧ್ರಪ್ರದೇಶ ವೈಎಸ್‌ಆರ್ ಕಾಂಗ್ರೆಸ್ ನಾಯಕ, ಜಗನ್‌ಮೋಹನ್ ರೆಡ್ಡಿ ಚಿಕ್ಕಪ್ಪ ವೈ.ಎಸ್. ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವಿಧಿ ವಿಜ್ಞಾನ ವರದಿ ಖಚಿತಪಡಿಸಿದೆ.

ವಿವೇಕಾನಂದ ರೆಡ್ಡಿ ಅವರನ್ನು ಇರಿದು ಕೊಲೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಅವರ ಮೃತದೇಹದಲ್ಲಿ ಏಳು ಕಡೆ ಹರಿತವಾದ ಆಯುಧದಿಂದ ಇರಿದ ಗಾಯದ ಕಲೆಗಳು ಪತ್ತೆಯಾಗಿವೆ.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳ ಪ್ರಕಾರ ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಹೇಳಿಕೆ ತಿಳಿಸಿದೆ.

ಜಗನ್ ಚಿಕ್ಕಪ್ಪ ಸಾವು: ಅಸಹಜ ಸಾವಿನ ಬಗ್ಗೆ ದೂರು ದಾಖಲು ಜಗನ್ ಚಿಕ್ಕಪ್ಪ ಸಾವು: ಅಸಹಜ ಸಾವಿನ ಬಗ್ಗೆ ದೂರು ದಾಖಲು

ರಾತ್ರಿ 11.30 ರಿಂದ ಬೆಳಿಗಿನ ಜಾವ 5 ಗಂಟೆಯ ಒಳಗಿನ ಅವಧಿಯಲ್ಲಿ ಹತ್ಯೆ ಮಾಡಲಾಗಿದೆ. ಅವರ ಮೇಲೆ ಬೆಡ್‌ರೂಮ್‌ನಲ್ಲಿ ದಾಳಿ ನಡೆದಿದ್ದು, ಬಳಿಕ ದೇಹವನ್ನು ಸ್ನಾನದ ಕೋಣೆಗೆ ಸಾಗಿಸಿರಬಹುದು ಎನ್ನಲಾಗಿದೆ.

jagan accusing chandrababu naidu behind killing of his uncle ys vivekananda reddy

ಶುಕ್ರವಾರ ಬೆಳಗ್ಗೆ 5.30ರ ವೇಳೆಗೆ ವಿವೇಕಾನಂದ ಅವರ ಆಪ್ತ ಸಹಾಯಕ ಕೃಷ್ಣಾ ರೆಡ್ಡಿ ಮನೆಗೆ ತೆರಳಿ ಬೆಲ್ ಮಾಡಿದಾಗ ಬಾಗಿಲು ತೆರೆಯಲಿಲ್ಲ. ಅವರು ಮಲಗಿದ್ದಾರೆ ಎಂದು ಭಾವಿಸಿ ಸ್ವಲ್ಪ ಹೊತ್ತು ಪತ್ರಿಕೆ ಓದಿದ್ದರು. ಬಳಿಕ ವಿವೇಕಾನಂದ ಅವರ ಪತ್ನಿ ಸೌಭಾಗ್ಯಮ್ಮ ಅವರಿಗೆ ಕರೆ ಮಾಡಿದರು. ಈ ಸಂದರ್ಭದಲ್ಲಿ ಅವರು ಊರಿನಲ್ಲಿ ಇರಲಿಲ್ಲ.

ಒಂದು ಗಂಟೆಯ ಬಳಿಕ ಕೆಲಸದಾಕೆ ಬಂದು ಬಾಗಿಲು ಬಡಿದಾಗಲೂ ಒಳಗಿನಿಂದ ಪ್ರತಿಕ್ರಿಯೆ ಬರಲಿಲ್ಲ. ನಂತರ ವಿವೇಕಾನಂದ ಅವರ ಆಪ್ತರು ಬಾಗಿಲು ತಳ್ಳಲು ಪ್ರಯತ್ನಿಸಿದರು. ಬಾಗಿಲು ಒಳಗಿನಿಂದ ಲಾಕ್ ಆಗಿರದೆ ಇರುವುದು ಕಂಡು ಬಂದಿತು. ಬೆಡ್‌ರೂಂನಲ್ಲಿ ಅವರಿಗೆ ರಕ್ತದ ಕಲೆಗಳು ಕಾಣಿಸಿದವು. ಸ್ನಾನದ ಕೋಣೆಯಲ್ಲಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೇಹ ಪತ್ತೆಯಾಯಿತು. ಅವರು ಮೃತಪಟ್ಟಿರುವುದು ಖಚಿತವಾದ ಕೂಡಲೇ ಸೌಭಾಗ್ಯಮ್ಮ ಮತ್ತು ಮಗ ಎನ್ ರಾಜಾ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು.

ದಿನಾಂಕ ಘೋಷಣೆ ಬೆನ್ನಲ್ಲೇ ವೈಎಸ್ಆರ್ ಪಕ್ಷ ಸೇರಿದ ಖ್ಯಾತ ತೆಲುಗು ನಟ ದಿನಾಂಕ ಘೋಷಣೆ ಬೆನ್ನಲ್ಲೇ ವೈಎಸ್ಆರ್ ಪಕ್ಷ ಸೇರಿದ ಖ್ಯಾತ ತೆಲುಗು ನಟ

ಎಎಸ್‌ಪಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಹತ್ಯೆ ಪ್ರಕರಣದ ತನಿಖೆ ನಡೆಸಲಿದೆ. ಬೆರಳಚ್ಚು ಗುರುತುಗಳು ಮತ್ತು ಇತರೆ ವಿಧಿ ವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ತಲೆ ಮತ್ತು ಬಲಗೈ ಮೇಲೆ ಒಟ್ಟು ಏಳು ಇರಿತದ ಗುರುತುಗಳಿವೆ ಎಂದು ಕಡಪ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ ತಿಳಿಸಿದ್ದಾರೆ.

ವಿವೇಕಾನಂದ ರೆಡ್ಡಿ ಅವರ ಕೊಲೆಗೆ ಕಾರಣ ಮತ್ತು ಪಾತಕಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಹತ್ಯೆಗೂ ಮುನ್ನ ಅವರ 24 ಗಂಟೆಯ ಚಟುವಟಿಕೆಗಳ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಕೊಲೆಯ ಸನ್ನಿವೇಶವನ್ನು ಮರುಸೃಷ್ಟಿ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಹತ್ಯೆಯ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಮಗ ಲೋಕೇಶ್ ಅವರ ಕೈವಾಡವಿದೆ ಎಂದು ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ. ಅದನ್ನು ಚಂದ್ರಬಾಬು ನಾಯ್ಡು ನಿರಾಕರಿಸಿದ್ದಾರೆ.

ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವೈಎಸ್‌ಆರ್ ಕಾಂಗ್ರೆಸ್ ಒತ್ತಾಯಿಸಿದೆ.

English summary
YSR Congress leader Jaganmohan Reddy accused Andhra Pradesh Chief Minister N Chandrababu Naidu of being behind the killing of his uncle YS Vivekananda Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X