ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ: ಟಿಡಿಪಿ ಸಂಸದನ ಮೇಲೆ ಐಟಿ ದಾಳಿ, ಪಕ್ಷದ ಮುಖಂಡರಿಂದ ಪ್ರತಿಭಟನೆ

|
Google Oneindia Kannada News

ಅಮರಾವತಿ, ಏಪ್ರಿಲ್ 10: ಆಂಧ್ರ ಪ್ರದೇಶದ ಟಿಡಿಪಿ ಸಂಸದರ ಮೇಲೆ ಐಟಿ ದಾಳಿ ಆಗಿದ್ದು, ದಾಳಿಯನ್ನು ಖಂಡಿಸಿ ಪಕ್ಷದ ಮುಖಂಡರು ರಾತ್ರಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ.

ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರಿಗೆ ಸಂಬಂಧಿಸಿದ ಹಲವು ಕಡೆ ಐಟಿ ದಾಳಿ ನಡೆದಿದ್ದು, ತನಿಖೆ ಇನ್ನೂ ನಡೆಯುತ್ತಿದೆ. ಈ ದಾಳಿಯನ್ನು ಟಿಡಿಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.

ಟಿಡಿಪಿ ಮುಖಂಡ ಲಂಕಾ ದಿವಾಕರ್ ಮಾತನಾಡಿ, ಗಲ್ಲಾ ಜಯದೇವ್ ಅವರು ಆಂಧ್ರದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ವ್ಯಕ್ತಿಗಳಲ್ಲಿ ಮೊದಲಿಗರು, ತಮ್ಮ ವ್ಯವಹಾರವನ್ನು ಸಾರ್ವಜನಿಕವಾಗಿಟ್ಟರುವ ವ್ಯಕ್ತಿ ಅವರ ಮೇಲೆ ರಾಜಕೀಯ ದುರುದ್ದೇಶದಿಂದಲೇ ದಾಳಿ ಮಾಡಲಾಗಿದೆ ಎಂದಿದ್ದಾರೆ.

IT raids on TDP MP Galla Jaydev, TDP protesting against BJP

ಕೇಂದ್ರದ ಬಿಜೆಪಿಯು ಉದ್ದೇಶಪೂರ್ವಕವಾಗಿ ಆಡಳಿತಾರೂಢ ಟಿಡಿಪಿ ಮುಖಂಡರನ್ನು ಗುರಿ ಮಾಡಿಕೊಂಡಿದೆ. ಬಿಜೆಪಿಯು ತನ್ನ ಬಿ-ಟೀಮ್ ಜಗನ್‌ಮೋಹನ್ ರೆಡ್ಡಿ ಸೂಚನೆಯಂತೆ ಈ ದಾಳಿಗಳನ್ನು ಆಂಧ್ರದಲ್ಲಿ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಐಟಿ ರೇಡ್! ಅಷ್ಟೊಂದು ಹಣ ಜಮೆಯಾಗಿದ್ದು ಯಾವ ಪಕ್ಷಕ್ಕೆ?ಮಧ್ಯಪ್ರದೇಶದಲ್ಲಿ ಐಟಿ ರೇಡ್! ಅಷ್ಟೊಂದು ಹಣ ಜಮೆಯಾಗಿದ್ದು ಯಾವ ಪಕ್ಷಕ್ಕೆ?

ಕೇಂದ್ರದ ವಿರುದ್ಧ ಟಿಡಿಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಣಯಿಸಿದಾಗ, ಅವಿಶ್ವಾಸ ನಿರ್ಣಯ ಮಂಡನೆಯನ್ನು ಸದನಕ್ಕೆ ಮಂಡಿಸಿದ್ದು ಇದೇ ಗಲ್ಲಾ ಜಯದೇವ್ ಅವರು.

ದೇವೇಗೌಡರ ಸಂಬಂಧಿ ಲಾಕರ್ ನಲ್ಲಿ 6.5.ಕೋಟಿ ಪತ್ತೆ; ಬಂಧನ ಸಾಧ್ಯತೆ ದೇವೇಗೌಡರ ಸಂಬಂಧಿ ಲಾಕರ್ ನಲ್ಲಿ 6.5.ಕೋಟಿ ಪತ್ತೆ; ಬಂಧನ ಸಾಧ್ಯತೆ

ಕರ್ನಾಟಕದಲ್ಲಿ ಸಹ ಕೆಲವು ದಿನಗಳ ಹಿಂದಷ್ಟೆ ಆಡಳಿತಾರೂಡ ಸರ್ಕಾರದ ಸಚಿವರ ಮೇಲೆಯೇ ಐಟಿ ದಾಳಿ ಆಯಿತು, ಜೆಡಿಎಸ್‌-ಕಾಂಗ್ರೆಸ್ ಸಚಿವರ ಆಪ್ತರ ಮನೆಗಳ ಮೇಲೂ ದಾಳಿ ಆಯಿತು, ಆಗ ದೋಸ್ತಿ ನಾಯಕರು ಐಟಿ ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದರು.

ನನ್ನ ಮನೆಗಳ ಮೇಲೆ ಐಟಿ ದಾಳಿಗೆ ಸಂಚು: ಚಿದಂಬರಂ ಆರೋಪನನ್ನ ಮನೆಗಳ ಮೇಲೆ ಐಟಿ ದಾಳಿಗೆ ಸಂಚು: ಚಿದಂಬರಂ ಆರೋಪ

ಕಳೆದ ಎರಡು ದಿನದಿಂದ ಮಧ್ಯಪ್ರದೇಶ ಸಿಎಂ ಕಮಲನಾಥ್ ಅವರ ಆಪ್ತೇಷ್ಟರ ಮನೆಗಳ ಮೇಲೆ ಐಟಿ ದಾಳಿ ನಡೆಯುತ್ತಿದೆ.

English summary
IT raids happen in Andhra Pradesh TDP MP Galla Jaydev. TDP leaders protesting against the raids. TDP leaders calling it politically motivated raids.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X