ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ನಡುವೆ ಆಂಧ್ರ ಸರ್ಕಾರದಿಂದ ಹೊಸ ಅಸ್ತ್ರ ಪ್ರಯೋಗ

|
Google Oneindia Kannada News

ಅಮರಾವತಿ, ಏಪ್ರಿಲ್.14: ಕೊರೊನಾ ವೈರಸ್ ನಿಯಂತ್ರಣಕ್ಕೆ ಭಾರತ ಲಾಕ್ ಡೌನ್ ಕ್ರಮವನ್ನೇನೋ ಜಾರಿಗೊಳಿಸಲಾಗಿದೆ. ಇದರಿಂದ ದೇಶಾದ್ಯಂತ ಅಗತ್ಯ ವಸ್ತುಗಳು ಸಿಗದೇ ಜನರು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಆಂಧ್ರ ಪ್ರದೇಶ ಸರ್ಕಾರ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

Recommended Video

ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಮಿಷನರ್ ಭಾಸ್ಕರ್ ರಾವ್ | Bhaskar Rao | Bengaluru | Oneindia kannada

ರಾಜ್ಯದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಯೋಜನೆಯನ್ನು ರೂಪಿಸಿದೆ. ಆಂಧ್ರ ಪ್ರದೇಶದಾದ್ಯಂತ 22 ಸಾವಿರ ವೈಎಸ್ಆರ್ ಜನತಾ ಬಜಾರ್ ತೆರೆಯಲು ಚಿಂತನೆ ನಡೆಸಿದೆ.

125 ನಗರಗಳಲ್ಲಿ ಸ್ವಿಗ್ಗಿಯಿಂದ ದಿನಸಿ ಉತ್ಪನ್ನಗಳ ವಿತರಣೆ 125 ನಗರಗಳಲ್ಲಿ ಸ್ವಿಗ್ಗಿಯಿಂದ ದಿನಸಿ ಉತ್ಪನ್ನಗಳ ವಿತರಣೆ

ಜನತಾ ಬಜಾರ್ ಗಳ ಮೂಲಕ ರಾಜ್ಯದ ಜನರಿಗೆ ಅಗತ್ಯವಿರುವ ಸರಕು ಸಾಮಗ್ರಿಗಳನ್ನು ಪೂರೈಕೆ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ನಡೆಸುತ್ತಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳ ಜೊತೆಗೆ ಸ್ವತಃ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಚರ್ಚೆ ನಡೆಸಿದ್ದಾರೆ.

India Lockdown: 22,000 Janata Bazar Across Andra Pradesh To Supply Essentials


ಕೃಷಿ ವಲಯಕ್ಕೆ ಹೊಡೆತ ಬೀಳದಂತೆ ಕ್ರಮ:

ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆಗೆ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸಭೆ ನಡೆಸಿದ್ದು ರಾಜ್ಯದಲ್ಲಿರುವ ಗೋಲ್ಡ್ ಸ್ಟೋರೇಜ್ ಗಳ ಸಂಗ್ರಹಣಾ ಸಾಮರ್ಥ್ಯ ಹಾಗೂ ಉತ್ಪಾದಿಸಲಾದ ಸರಕುಗಳ ನಿರ್ವಹಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಯಾವ ಪ್ರದೇಶಗಳಲ್ಲಿ ಜನತಾ ಬಜಾರ್ ಗಳನ್ನು ತೆರೆದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬುದರ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದು, ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಗೊಳಿಸಲಾಗುತ್ತದೆ ಎಂದು ಸರ್ಕಾರವು ಭರವಸೆಯನ್ನು ನೀಡಿದೆ.

English summary
India Lockdown: 22,000 Janata Bazar Across Andra Pradesh To Supply Essentials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X