ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಾಖಪಟ್ಟಣಂ ಮಹಾ ಅನಿಲ ದುರಂತಕ್ಕೆ ಕಾರಣ ಏನು?

|
Google Oneindia Kannada News

ವಿಶಾಖಪಟ್ಟಣಂ, ಮೇ 7: ದೇಶ ಕೊರೊನಾ ಹಾವಳಿಯಿಂದ ತತ್ತರಿಸಿರುವ ನಡುವೆಯೇ ಆಂಧ್ರಪ್ರದೇಶದ ವಿಶಾಕಪಟ್ಟಣದಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದ ಮತ್ತೊಂದು ಆಘಾತ ಎದುರಾಗಿದೆ.

Recommended Video

ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸಿ ಎಂದ ನಾರಾಯಣ ಮೂರ್ತಿ ದಂಪತಿಗಳು | Infosys | Narayan & Sudha Murthy

ವಿಶಾಖಪಟ್ಟಣಂ ಹೊರವಲಯದ ಆರ್ ಆರ್ ವೆಂಕಟಾಪುರಂ ಬಳಿಯ ಎಲ್‌ ಜಿ ಪಾಲಿಮರ್ಸ್ ಎಂಬ ಎಂಎನ್‌ಸಿ ಕಂಪೆನಿಯ ಕಾರ್ಖಾನೆಯಲ್ಲಿ ಮಹಾ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇದುವರೆಗೆ 10 ಜನ ಮೃತಪಟ್ಟಿದ್ದು, 800 ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. 5000 ಜನಕ್ಕೆ ನೇರವಾಗಿ ವಿಷಾನಿಲ ತಟ್ಟಿದೆ.

ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ: 8 ಬಲಿ, 5000ಕ್ಕೂ ಅಧಿಕ ಮಂದಿ ಅಸ್ವಸ್ಥವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ: 8 ಬಲಿ, 5000ಕ್ಕೂ ಅಧಿಕ ಮಂದಿ ಅಸ್ವಸ್ಥ

ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಗಮಿಸಿದ್ದು, ಬಿರುಸಿನ ಕಾರ್ಯಾಚರಣೆ ನಡೆಸಿದೆ. ಅನಿಲ ಸೋರಿಕೆಯ ಸುಮಾರು ಎಂಟು ಕಿಲೋ ಮೀಟರ್ ವಿಸ್ತಾರವನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಇಡೀ ದೇಶವನ್ನು ಬೆಚ್ಚಿ ಬಿಳ್ಳಿಸಿರುವ ಎಲ್‌ಜಿ ಪಾಲಿಮರ್ಸ್‌ ಘಟಕದ ವಿಷಾನಿಲ (ಸ್ಟಿರಿನ್ ಗ್ಯಾಸ್) ಸೋರಿಕೆಗೆ ಕಾರಣ ಏನು ಎಂಬ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ.

ಅನಿಲ ಸೋರಿಕೆಗೆ ಕಾರಣ ಏನು

ಅನಿಲ ಸೋರಿಕೆಗೆ ಕಾರಣ ಏನು

ಎಲ್‌ಜಿ ಪಾಲಿಮರ್ಸ್‌ ಘಟಕದ ವಿಷಾನಿಲ ಸೋರಿಕೆಗೆ ಬಗ್ಗೆ ಆಂಧ್ರಪ್ರದೇಶ ಸರ್ಕಾರ ತನಿಖೆ ಆರಂಭಿಸಿದೆ. ಪ್ಯಾಕ್ಟರಿಯ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಿಷಾನಿಲ ಹರಡಿದೆ. ಈ ವಿಷಾನಿಲ ಹರಡಲು ನಿಖರ ಕಾರಣ ಏನು ಎಂಬ ಬಗ್ಗೆ ಗೊಂದಲಗಳು ಮೂಡಿದ್ದು, ಸದ್ಯದ ಪ್ರಾಥಮಿಕ ವರದಿಗಳ ಪ್ರಕಾರ ಇದು ಕಾರ್ಖಾನೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಆದ ದುರಂತ ಎಂದು ಹೇಳಲಾಗುತ್ತಿದೆ.

ಬೆಳಗಿನ ಜಾವ 3 ಗಂಟೆಯ ಸುಮಾರು

ಬೆಳಗಿನ ಜಾವ 3 ಗಂಟೆಯ ಸುಮಾರು

ಬೆಳಗಿನ ಜಾವ 3 ಗಂಟೆಯ ಸುಮಾರು ಪ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ ಪ್ರಾರಂಭವಾಗಿದೆ. ಅನಿಲ ಸೋರಿಕೆಯನ್ನು ತಡೆಗಟ್ಟುವ ಸಿಬ್ಬಂದಿ ಮೈ ಮರೆತಿದ್ದೆ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆಂಧ್ರಪ್ರದೇಶ ಡಿಜಿಪಿ ಸುಹಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಷಾನಿಲ ಸೋರಿಕೆ ಬಗ್ಗೆ ನಮಗೆ ಮುಂಜಾನೆ 3.30 ರ ಸುಮಾರು ಮಾಹಿತಿ ಬಂದಿತ್ತು. ಸ್ಥಳಕ್ಕೆ ದೌಡಾಯಿಸಿ 5.30 ರ ಸುಮಾರು ಆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ರೈಲುಗಳು ರದ್ದು

ರೈಲುಗಳು ರದ್ದು

ವಿಷಾನಿಲ ಸೋರಿಕೆಯ ಪರಿಣಾಮವಾಗಿ ವಿಶಾಖಪಟ್ಟಣಂ ಮಾರ್ಗವಾಗಿ ಹೋಗುವ ಎಲ್ಲ ಗೂಡ್ಸ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸ್ಥಳದಲ್ಲಿ 8 ಕಿಲೋ ಮೀಟರ್ ಸುತ್ತಮುತ್ತ ಜನರನ್ನು ತೆರವು ಮಾಡಲು ಎನ್‌ಡಿಆರ್‌ಎಫ್ ಬಿರುಸಿನ ಕಾರ್ಯಾಚರಣೆ ನಡೆಸಿದೆ.

ಪ್ರಧಾನಿ ಮೋದಿ ಸಾಂತ್ವಾನ

ಪ್ರಧಾನಿ ಮೋದಿ ಸಾಂತ್ವಾನ

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರು, ಅಮರಾವತಿಯಿಂದ ವಿಶಾಖಪಟ್ಟಣಕ್ಕೆ ದೌಡಾಯಿಸಿದ್ದಾರೆ. ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಈ ಘಟನೆ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ.

English summary
What Is The Reason For Visakhapatnam Gas Tragedy? over 5000 people effected from Visakhapatnam LG polymer factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X