• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೈಂಗಿಕ ನಿರಾಸಕ್ತಿಗೆ ಕತ್ತೆ ಮಾಂಸ ಮದ್ದಂತೆ; ಆಂಧ್ರದಲ್ಲಿ ಕತ್ತೆಗಳಿಗೀಗ ಭಾರೀ ಡಿಮ್ಯಾಂಡ್

|

ಅಮರಾವತಿ, ಮಾರ್ಚ್ 02: ಕತ್ತೆ ಹಾಲು ಕುಡಿದರೆ ಬುದ್ಧಿ ಚುರುಕಾಗುತ್ತದೆ ಎಂದು ಮಕ್ಕಳಿಗೆ ಕತ್ತೆ ಹಾಲು ಕುಡಿಸುವುದನ್ನು ಕಂಡಿದ್ದೇವೆ. ಆದರೆ ಆಂಧ್ರದಲ್ಲಿ ಬೇರೆಯದೇ ಕಾರಣಕ್ಕೆ ಕತ್ತೆಗಳಿಗೆ ಭಾರೀ ಬೇಡಿಕೆ ಬಂದಿದೆ. ಈಚೆಗೆ ಕತ್ತೆ ಮಾಂಸ ಅಲ್ಲಿ ಫೇಮಸ್ ಆಗುತ್ತಿದೆ.

ಕತ್ತೆ ಮಾಂಸ ಸೇವಿಸಿದರೆ ಬೆನ್ನು ನೋವು, ಅಸ್ತಮಾ ನಿವಾರಣೆಯಾಗುತ್ತದೆ, ಜೊತೆಗೆ ಲೈಂಗಿಕ ನಿರಾಸಕ್ತಿ ಸಮಸ್ಯೆ ನಿವಾರಣೆಗೂ ಕತ್ತೆ ಮಾಂಸ ಪರಿಣಾಮಕಾರಿ ಮದ್ದು ಎಂದು ಸ್ಥಳೀಯರು ನಂಬಿದ್ದು, ಈ ಕಾರಣಕ್ಕೆ ಕತ್ತೆ ಮಾಂಸಕ್ಕೆ ಭಾರೀ ಬೇಡಿಕೆ ಬಂದಿದೆಯಂತೆ. ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲವಾದರೂ ಕತ್ತೆ ಮಾಂಸವನ್ನು ಕದ್ದುಮುಚ್ಚಿ ಮಾರಾಟ ಮಾಡುವುದು, ಕೊಳ್ಳುವುದು ನಡೆಯುತ್ತಲೇ ಇದೆಯಂತೆ.

ಉಡ ತಿಂದ್ರೆ ಲೈಂಗಿಕ ಶಕ್ತಿ ಹೆಚ್ಚುತ್ತೆ ಎಂದು ಪ್ರಚಾರ, ಮಾರಾಟ: ಅಸಲಿಯತ್ತೇನು? ಉಡ ತಿಂದ್ರೆ ಲೈಂಗಿಕ ಶಕ್ತಿ ಹೆಚ್ಚುತ್ತೆ ಎಂದು ಪ್ರಚಾರ, ಮಾರಾಟ: ಅಸಲಿಯತ್ತೇನು?

ಕತ್ತೆ ಮಾಂಸ ದಂಧೆ ಆಂಧ್ರದಲ್ಲಿ ಜೋರಾಗಿದ್ದು, ಕತ್ತೆಗಳನ್ನು ಮಾಂಸಕ್ಕಾಗಿ ಕೊಲ್ಲುತ್ತಿರುವುದನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುಂದೆ ಓದಿ...

 ಆಂಧ್ರದಲ್ಲಿ ಕತ್ತೆ ಮಾಂಸ ದಂಧೆ

ಆಂಧ್ರದಲ್ಲಿ ಕತ್ತೆ ಮಾಂಸ ದಂಧೆ

ವರದಿ ಪ್ರಕಾರ ಆಂಧ್ರದ ಪ್ರಕಾಶಂ, ಕೃಷ್ಣ, ಪಶ್ಚಿಮ ಗೋದಾವರಿ, ಗುಂಟೂರು ಜಿಲ್ಲೆಗಳಲ್ಲಿ ಕತ್ತೆ ಮಾಂಸ ಮಾರಾಟ ಹಾಗೂ ಸೇವನೆ ಹೆಚ್ಚಾಗಿದೆಯಂತೆ. ಕತ್ತೆ ಮಾಂಸ ಸೇವನೆ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ಕತ್ತೆಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಕತ್ತೆಗಳ ಅಕ್ರಮ ವಧೆಯನ್ನು ಇಲ್ಲಿನ ಪ್ರಾಣಿ ದಯಾ ಸಂಘ ಕಾರ್ಯಕರ್ತರು ವಿರೋಧಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ದಂಧೆ ಇನ್ನಷ್ಟು ಹೆಚ್ಚಾಗುವ ಮುನ್ನ ಮಟ್ಟ ಹಾಕಬೇಕು ಎಂದು ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.

 ಮೂರು ರಾಜ್ಯಗಳಿಂದ ಆಂಧ್ರಕ್ಕೆ ಕತ್ತೆಗಳ ರಫ್ತು

ಮೂರು ರಾಜ್ಯಗಳಿಂದ ಆಂಧ್ರಕ್ಕೆ ಕತ್ತೆಗಳ ರಫ್ತು

ಕರ್ನಾಟಕ, ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಆಂಧ್ರಕ್ಕೆ ಕತ್ತೆಗಳನ್ನು ತರಿಸಿಕೊಂಡು ಇಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ದೂರಿದ್ದಾರೆ. ಪ್ರಕಾಶಂ ಜಿಲ್ಲೆಯಲ್ಲಿ ಮೊದಲು ಕತ್ತೆ ಮಾಂಸ ದಂಧೆ ಆರಂಭಗೊಂಡು, ನಂತರ ಕೃಷ್ಣ, ಪಶ್ಚಿಮ ಗೋದಾವರಿ, ಗುಂಟೂರಿಗೆ ಹರಡಿದೆ. ಹೀಗೇ ಬಿಟ್ಟರೆ ರಾಜ್ಯದ ಇತರೆ ಕಡೆಗಳಲ್ಲೂ ಮುಂದುವರೆಯುತ್ತದೆ ಎಂದು ಆರೋಪಿಸಿದ್ದಾರೆ.

 ಲೈಂಗಿಕ ಆಸಕ್ತಿ ಹೆಚ್ಚಿಸಲು ಕತ್ತೆ ಮಾಂಸ ಸೇವನೆ

ಲೈಂಗಿಕ ಆಸಕ್ತಿ ಹೆಚ್ಚಿಸಲು ಕತ್ತೆ ಮಾಂಸ ಸೇವನೆ

ಕತ್ತೆ ಮಾಂಸದ ಸೇವನೆಯಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದು. ಉಸಿರಾಟದ ಸಮಸ್ಯೆಗೂ ಈ ಮಾಂಸ ಮದ್ದು. ಕತ್ತೆ ಮಾಂಸ ಸೇವನೆಯಿಂದ ಲೈಂಗಿಕ ಆರೋಗ್ಯ ವೃದ್ಧಿಯಾಗುತ್ತದೆ. ಕತ್ತೆ ಮಾಂಸದಲ್ಲಿ ಲೈಂಗಿಕ ಶಕ್ತಿ ಹಾಗೂ ಆಸಕ್ತಿ ವೃದ್ಧಿಸುವ ಅಂಶವಿದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಕತ್ತೆ ರಕ್ತವನ್ನು ಕುಡಿದರೆ ಅತಿ ವೇಗವಾಗಿ ಓಡಬಹುದು ಎಂಬ ನಂಬಿಕೆಯೂ ಜನರಲ್ಲಿದೆ. ಪ್ರಕಾಶಂ ಜಿಲ್ಲೆಯ ವೇಟಪಾಲೆಂ ಗ್ರಾಮದಲ್ಲಿ ಮೀನುಗಾರಿಕೆಗೆ ಇಳಿಯುವ ಮೊದಲು ಮೀನುಗಾರರು ಕತ್ತೆ ರಕ್ತವನ್ನು ಕುಡಿದು ಹೋಗುತ್ತಾರೆ ಎನ್ನಲಾಗಿದೆ. ಈ ಹಲವು ಕಾರಣಗಳಿಂದ ಕತ್ತೆ ಮಾಂಸ ಸೇವನೆ ಇಲ್ಲಿ ಜೋರಾಗಿದೆ.

 ಒಂದು ಕೆ.ಜಿ ಕತ್ತೆ ಮಾಂಸಕ್ಕೆ 600 ರೂ

ಒಂದು ಕೆ.ಜಿ ಕತ್ತೆ ಮಾಂಸಕ್ಕೆ 600 ರೂ

ಮಾಂಸ ಸೇವನೆ ಹೆಚ್ಚುತ್ತಿದ್ದಂತೆ ಕತ್ತೆ ಬೆಲೆಯೂ ಹೆಚ್ಚಾಗಿದೆ. ಒಂದು ಕೆ.ಜಿ. ಕತ್ತೆ ಮಾಂಸಕ್ಕೆ 600 ರೂಪಾಯಿವರೆಗೂ ಬೆಲೆ ಇದ್ದು, ಒಂದು ಕತ್ತೆ 15-20 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಕಾನೂನಿನ ಪ್ರಕಾರ ಕತ್ತೆಯನ್ನು ಅಕ್ರಮವಾಗಿ ಕೊಲ್ಲುವುದು ಅಪರಾಧವಾಗಿದ್ದು, ಕದ್ದು ಮುಚ್ಚಿ ಈ ದಂಧೆ ನಡೆಸಲಾಗುತ್ತಿದೆ.

English summary
Donkey meat got high demand in andhra pradesh as locals believe it will treat back pain and enhance sex drive,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X