ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗೂಢ ದೋಣಿ ದುರಂತ: ದಡದ ಬಳಿ ಬಂದಿದ್ದ ಅಂಬಿಗ ನದಿ ಮಧ್ಯೆ ಹೋಗಿದ್ದೇಕೆ?

|
Google Oneindia Kannada News

Recommended Video

Godavari boat tragedy : ದಡದ ಬಳಿ ಬಂದಿದ್ದ ಅಂಬಿಗ ನದಿ ಮಧ್ಯೆ ಹೋಗಿದ್ದೇಕೆ? | Oneindia Kannada

ಅಮರಾವತಿ, ಸೆಪ್ಟೆಂಬರ್ 16: ಸುಮಾರು ಮೂವತ್ತಕ್ಕೂ ಹೆಚ್ಚು ಜನರನ್ನು ಜಲಸಮಾಧಿ ಮಾಡಿದ ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ ನಡೆದ ಭೀಕರ ದೋಣಿ ದುರಂತದ ಕುರಿತು ನಿಗೂಢ ಮಾಹಿತಿಯೊಂದು ಲಭ್ಯವಾಗಿದೆ.

ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಪವಾಡಸದೃಶವಾಗಿ ಬದುಕಿಬಂದ ನಂತರ ಆ ಕರಾಳ ಕ್ಷಣದ ಅನುಭವವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ದೋಣಿ ಚಾಲಕನ ವಿಚಿತ್ರ ವರ್ತನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಗೋದಾವರಿ ದೋಣಿ ದುರಂತ: ಸಾವಿನ ಸಂಖ್ಯೆ 39 ಕ್ಕೆ ಏರಿಕೆ?ಗೋದಾವರಿ ದೋಣಿ ದುರಂತ: ಸಾವಿನ ಸಂಖ್ಯೆ 39 ಕ್ಕೆ ಏರಿಕೆ?

62 ಪ್ರಯಾಣಿಕರನ್ನು ಹೊತ್ತಿದ್ದ "ಶ್ರೀವಸಿಷ್ಠ" ಎಂಬ ದೋಣಿ ಭಾನುವಾರ ಬೆಳಿಗ್ಗೆ 10:30 ರ ಹೊತ್ತಿಗೆ ಮುಳುಗಿತ್ತು. ದೋಣಿಜಯಲ್ಲಿದ್ದ ಸುಮಾರು 39 ಜನ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದ್ದು, 12 ಮೃತದೇಹಗಳು ಈಗಾಗಲೇ ಪತ್ತೆಯಾಗಿವೆ.ಆದರೆ ಘಟನೆಗೂ ಮುನ್ನ ದೋಣಿ ಚಾಲಕನ ವಿಚಿತ್ರ ನಡೆ ಇದೀಗ ಚರ್ಚೆಯ ವಿಷಯವಾಗಿದೆ.

ದಡದ ಬಳಿ ಬಂದು ನದಿ ಮಧ್ಯೆ ತೆರಳಿದ ಅಂಬಿಗ!

ದಡದ ಬಳಿ ಬಂದು ನದಿ ಮಧ್ಯೆ ತೆರಳಿದ ಅಂಬಿಗ!

"90 ಜನರು ಪ್ರಯಾಣಿಸಲು ಅವಕಾಶಬವಿದ್ದ ಎರಡು ಅಂತಸ್ತಿನ ದೋಣಿಯಲ್ಲಿ ಇದ್ದಿದ್ದು 62 ಜನ. ಕಡಿಮೆ ಜನರಿದ್ದರೂ, ದೋಣಿ ಇದ್ದಕ್ಕಿದ್ದಂತೆ ಒಂದು ಕಡೆ ವಾಲುವುದಕ್ಕೆ ಆರಂಬಿಸಿತ್ತು. ಅದೇ ಸಂದರ್ಭದಲ್ಲಿ ಬೇರೊಂದು ದೋಣಿ ಹತ್ತಿರ ಬಂದಿದ್ದರಿಂದ ಕೆಲವರನ್ನು ಆ ದೋಣಿಯಲ್ಲಿರುವವರು ರಕ್ಷಿಸಿದರು. ಹಾಗೆ ರಕ್ಷಿಸಲ್ಪಟ್ಟವರಲ್ಲಿ ನಾನೂ ಒಬ್ಬ. ನಾವು ಮತ್ತೊಮದು ದೋಣಿ ಹತ್ತುವ ಮುನ್ನ ನಾವಿದ್ದ "ಶ್ರೀವಸಿಷ್ಠ" ಎಂಬ ಹಡಗು ದಡದ ಬಳಿ ತೆರಳಿತ್ತು. ಇನ್ನು ಕೆಲವೇ ಕ್ಷಣಗಳಲ್ಲಿ ದಡ ಸೇರಬೇಕು, ಅಷ್ಟರಲ್ಲಿ ಅಂಬಿಗ ದೋಣಿಯನ್ನು ಇದ್ದಕ್ಕಿದ್ದಂತೆ ತಿರುಗಿಸಿ, ನದಿಯ ಮಧ್ಯೆ ಕೊಂಡೊಯ್ದ. ಅದಕ್ಕೆ ಕಾರಣವೇನು ಎಂಬುದು ನಮಗೆ ಅರ್ಥವಾಗಲಿಲ್ಲ. ಆ ನಂತರ ದೋಣಿ ಮುಳುಗಿ, ಈ ದುರಂತ ಸಂಭವಿಸಿದೆ" ಎನ್ನುತ್ತಾರೆ ದಶರಥ ಎಂಬುವವರು.

ಜೀವರಕ್ಷಕ ಜಾಕೇಟ್ ತೊಟ್ಟಿದ್ದ ಬಗ್ಗೆ ಮಾಹಿತಿ ಇಲ್ಲ!

ಜೀವರಕ್ಷಕ ಜಾಕೇಟ್ ತೊಟ್ಟಿದ್ದ ಬಗ್ಗೆ ಮಾಹಿತಿ ಇಲ್ಲ!

ದೋಣಿಯಲ್ಲಿ ಸುಮಾರು 150 ರಷ್ಟು ಜೀವರಕ್ಷಕ ಜಾಕೇಟ್ ಗಳ ದಾಸ್ತಾನಿತ್ತು. ಆದರೆ ದೋಣಿ ನಡೆಸುವವರಾಗಲೀ, ಇನ್ಯಾವುದೇ ಸಿಬ್ಬಂದಿಯಾಗಲೀ ಜಾಕೆಟ್ ತೊಡುವಂತೆ ಪ್ರಯಾಣಿಕರಿಗೆ ಆದೇಶ ನೀಡಿರಲಿಲ್ಲ. ಹಲವು ಪ್ರಯಾಣಿಕರು ಜಾಕೆಟ್ ತೊಟ್ಟಿರಲಿಲ್ಲ. ಜೀವರಕ್ಷಕ ಜಾಕೆಟ್ ದೋನಿಯಲ್ಲೇ ಇದ್ದರೂ, ಪ್ರಯಾಣಿಕರಿಗೆ ಅದನ್ನು ತೊಡಲು ಹೇಳದೇ ಇದ್ದಿದ್ದು ಮತ್ತು ಪ್ರಯಾಣಿಕರೇ ಅದನ್ನು ಕೇಳಿ ಪಡೆಯದೇ ಇದ್ದಿದ್ದು, ಮತ್ತಷ್ಟು ಪ್ರಾಣಹಾನಿಗೆ ಕಾರಣವಾಯಿತು ಎಂಬ ಮಾಹಿತಿಯೂ ಲಭ್ಯವಾಗಿದೆ.

ಗೋದಾವರಿ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 7 ಮಂದಿ ಸಾವುಗೋದಾವರಿ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 7 ಮಂದಿ ಸಾವು

ಪರವಾನಗಿ ಇಲ್ಲದ ದೋಣಿ!

ಪರವಾನಗಿ ಇಲ್ಲದ ದೋಣಿ!

ಅಪಘಾತಕ್ಕೀಡಾದ ಶ್ರೀವಸಿಷ್ಠ ದೋಣಿ ಬಂದರು ಪ್ರಾಧಿಕಾರದ ಪರವಾನಗಿಯನ್ನೂ ಹೊಂದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪ್ರವಾಹ ಜೋರಾಗಿದ್ದರೂ, ವಿರುದ್ಧ ದಿಕ್ಕಿನಿಂದ ಚಾಲಕ ತೆರಳಿದ್ದು, ಅದೇ ಸಂದರ್ಭದಲ್ಲಿ ಬೃಹತ್ ಬಂಡೆಯೊಂದು ತಗುಲಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಹೇಳಿದೆ.

10 ಲಕ್ಷ ರೂ. ಪರಿಹಾರ

10 ಲಕ್ಷ ರೂ. ಪರಿಹಾರ

ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಮೃತರ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

English summary
Godavari Boat Tragedy: Why Boatman turns boat towards middle of the river from bank!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X