ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದು ದೇಗುಲಗಳ ಮೇಲೆ ಜಗನ್ ಕಣ್ಣು, ಮೋಹನದಾಸ್ ಪೈ ಟ್ವೀಟೇಟು

|
Google Oneindia Kannada News

ಬೆಂಗಳೂರು, ಆಗಸ್ಟ್ 19: ಇನ್ಫೋಸಿಸ್ ಸಂಸ್ಥೆ ಮಾಜಿ ನಿರ್ದೇಶಕ, ಮಣಿಪಾಲ್ ವಿದ್ಯಾಸಂಸ್ಥೆ ಚೇರ್ಮನ್ ಮೋಹನ್ ದಾಸ್ ಪೈ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಗುಲಗಳಿಗೆ ಮಂಜೂರಾದ ದಾನ ರೂಪದ ಜಮೀನನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ.

ಸಿದ್ಧಾರ್ಥ ಸಾವು: 'ತೆರಿಗೆ ಭಯೋತ್ಪಾದನೆ' ಬಗ್ಗೆ ಉದ್ಯಮಿಗಳ ಆತಂಕಸಿದ್ಧಾರ್ಥ ಸಾವು: 'ತೆರಿಗೆ ಭಯೋತ್ಪಾದನೆ' ಬಗ್ಗೆ ಉದ್ಯಮಿಗಳ ಆತಂಕ

ಹಿಂದು ದೇಗುಲಗಳನ್ನು ಗುರಿಯನ್ನಾಗಿಸಿಕೊಳ್ಳಲಾಗುತ್ತಿದೆ, ಚರ್ಚ್, ಮಸೀದಿಗೆ ಮಂಜೂರಾದ ಭೂಮಿ ಬಗ್ಗೆ ಯಾವುದೇ ಆದೇಶವಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಅಮೆರಿಕ ಮೂಲದ ಪಿಗುರೂಸ್ ಎಂಬ ಸಂಸ್ಥೆಯ ವರದಿಯನ್ನು ಟ್ವೀಟ್ ಮಾಡಿದ್ದಾರೆ. ಆದರೆ, ಪೈ ಅವರ ಟ್ವೀಟ್ ನಿಂದ ಕೆರಳಿದ ಸರ್ಕಾರಿ ಅಧಿಕಾರಿಗಳು, ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟಿಗಳು, ಜಗನ್ ಬೆಂಬಲಿಸಿ ಪ್ರತಿಕ್ರಿಯಿಸಿದ್ದಾರೆ.

Former director of Infosys Mohandas Pai slams AP CM Jagan

ಪೋಲಾವರಂ ಯೋಜನೆಯ ರಿವರ್ಸ್ ಟೆಂಡರ್, ಅನೇಕ ಸರ್ಕಾರಿ ಯೋಜನೆಗಳ ಸ್ಥಗಿತದ ಬಗ್ಗೆ ಕಿಡಿಕಾರಿದ್ದ ಮೋಹನದಾಸ್ ಪೈ, ಜಗನ್ ಅವರು ವ್ಯಾಪಾರದಲ್ಲಿ ಭಯೋತ್ಪಾದನೆ ತರುತ್ತಿದ್ದಾರೆ, ಜಗನ್ ಸರ್ಕಾರದ ಕ್ಲೀನ್ ಎನರ್ಜಿ ನೀತಿ ಬಗ್ಗೆ ಜಪಾನ್ ಕೂಡಾ ಆಕ್ಷೇಪ ವ್ಯಕ್ತಪಡಿಸಿದೆ. ಆಂಧ್ರದ ಭವಿಷ್ಯ ಕತ್ತಲಲ್ಲಿ ತಳ್ಳುವಂಥ ನಿರ್ಧಾರವನ್ನು ಜಗನ್ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದರು.

English summary
Former director of Infosys Mohandas Pai takes on AP CM Jagan Mohan Reddy and questions Land grab issues cricultating in Andhra Pradesh in which land donted by Hindu devotees will be taken back by Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X