ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯವಾಡ ಬೆಂಕಿ ದುರಂತ; ಆಸ್ಪತ್ರೆಯ ಮೂವರ ಬಂಧನ

|
Google Oneindia Kannada News

ಅಮರಾವತಿ, ಆಗಸ್ಟ್ 10 : ವಿಜಯವಾಡದಲ್ಲಿರುವ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನರನ್ನು ಬಂಧಿಸಲಾಗಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, 10 ರೋಗಿಗಳು ಘಟನೆಯಲ್ಲಿ ಮೃತಪಟ್ಟಿದ್ದರು.

Recommended Video

ಕೇಂದ್ರದ ಮುಂದೆ ಪರಿಹಾರ ಕೇಳೋಕೆ ಇವರಿಗೆ ಧಮ್ ಇಲ್ಲ | Oneindia Kannada

ಸೋಮವಾರ ವಿಜಯವಾಡ ಪೊಲೀಸರು ರಮೇಶ್ ಆಸ್ಪತ್ರೆಯ ಮೂವರ ಹಿರಿಯ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ಆಸ್ಪತ್ರೆಯೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹೋಟೆಲ್‌ ಬಾಡಿಗೆಗೆ ಪಡೆದಿತ್ತು.

ಕೋವಿಡ್ ರೋಗಿಗಳು ಇದ್ದ ಹೋಟೆಲ್‌ನಲ್ಲಿ ಬೆಂಕಿ, 7 ಸಾವು ಕೋವಿಡ್ ರೋಗಿಗಳು ಇದ್ದ ಹೋಟೆಲ್‌ನಲ್ಲಿ ಬೆಂಕಿ, 7 ಸಾವು

ಆಸ್ಪತ್ರೆಯ ಸಿಒಒ, ಜನರಲ್ ಮ್ಯಾನೇಜರ್, ರಾತ್ರಿ ಪಾಳಿಯ ಮ್ಯಾನೇಜರ್ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಆದೇಶ ನೀಡಿದೆ.

ಆಂಧ್ರ ಪ್ರದೇಶದಲ್ಲಿ ಒಂದೇ ದಿನ 10328 ಮಂದಿಗೆ ಕೊರೊನಾವೈರಸ್! ಆಂಧ್ರ ಪ್ರದೇಶದಲ್ಲಿ ಒಂದೇ ದಿನ 10328 ಮಂದಿಗೆ ಕೊರೊನಾವೈರಸ್!

Fire Accident At Vijayawada Hotel Three Hospital Officials Arrested

ಪೊಲೀಸ್, ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿದೆ. ಹೋಟೆಲ್ ಬಾಡಿಗೆಗೆ ಪಡೆದ ಬಗ್ಗೆ ದಾಖಲೆಗಳನ್ನು ವಶಕ್ಕೆ ಪಡೆಯಲು ತಂಡ ಆಸ್ಪತ್ರೆಯ ಮುಖ್ಯಸ್ಥರ ಮನೆಯಲ್ಲಿ ಪರಿಶೀಲನೆ ಸಹ ನಡೆಸಿದೆ.

ಆಂಧ್ರ ಪ್ರದೇಶದಲ್ಲಿ ಕೊರೊನಾವೈರಸ್ ಅಂಟಿದ್ದು ಅದೆಷ್ಟು ಮಂದಿಗೆ? ಆಂಧ್ರ ಪ್ರದೇಶದಲ್ಲಿ ಕೊರೊನಾವೈರಸ್ ಅಂಟಿದ್ದು ಅದೆಷ್ಟು ಮಂದಿಗೆ?

ಆಸ್ಪತ್ರೆಯ ಮುಖ್ಯಸ್ಥರು ವಿಡಿಯೋ ಸಂದೇಶವೊಂದನ್ನು ನೀಡಿದ್ದು, ಹೋಟೆಲ್‌ನಲ್ಲಿ ಅಗ್ನಿ ಅವಘಢ ಸಂಭವಿಸದಂತೆ ಎಚ್ಚರಿಕೆ ಕೈಗೊಳ್ಳುವುದು ಹೋಟೆಲ್‌ನ ಜವಾಬ್ದಾರಿಯಾಗಿದೆ. ಈ ಬಗ್ಗೆ ಒಪ್ಪಂದದಲ್ಲಿಯೂ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.

ಹೋಟೆಲ್‌ನಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರ ಆಸ್ಪತ್ರೆಯ ಕಾರ್ಯವಾಗಿದೆ. ಅಲ್ಲಿನ ನಿರ್ವಹಣೆಯನ್ನು ಹೋಟೆಲ್‌ ನೋಡಿಕೊಳ್ಳಬೇಕು. ಹೋಟೆಲ್ ಎರಡು ಆಸ್ಪತ್ರೆಗಳನ್ನು ಚಿಕಿತ್ಸೆಗಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಸ್ಪತ್ರೆ ಮುಖ್ಯಸ್ಥರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

English summary
Fire accident at hotel in Andhra Pradesh's Vijaywada. Police arrested hospital officials in connection with the case. 10 Covid patients killed in incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X