ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ರೋಗಿಗಳು ಇದ್ದ ಹೋಟೆಲ್‌ನಲ್ಲಿ ಬೆಂಕಿ, 7 ಸಾವು

|
Google Oneindia Kannada News

ಅಮರಾವತಿ, ಆಗಸ್ಟ್ 09 : ಆಂಧ್ರ ಪ್ರದೇಶದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 7 ಜನರು ಮೃತಪಟ್ಟಿದ್ದಾರೆ. 30 ಜನರನ್ನು ರಕ್ಷಣೆ ಮಾಡಲಾಗಿದೆ.

ಭಾನುವಾರ ಮುಂಜಾನೆ ವಿಜಯವಾಡದಲ್ಲಿರುವ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊವಿಡ್ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ, 8 ರೋಗಿಗಳು ಸಾವುಕೊವಿಡ್ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ, 8 ರೋಗಿಗಳು ಸಾವು

Fire Accident At Hotel Seven People Died

ಖಾಸಗಿ ಆಸ್ಪತ್ರೆಯೊಂದು ಈ ಹೋಟೆಲ್‌ ಅನ್ನು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಂಡಿತ್ತು ಎಂದು ತಿಳಿದು ಬಂದಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು? ಎಂಬುದು ಇನ್ನೂ ತಿಳಿದುಬಂದಿಲ್ಲ.

ಯುಎಇ ಅಜ್ಮಾನ್ ಮಾರ್ಕೆಟ್‌ನಲ್ಲಿ ಭಾರಿ ಬೆಂಕಿ ಅವಘಡಯುಎಇ ಅಜ್ಮಾನ್ ಮಾರ್ಕೆಟ್‌ನಲ್ಲಿ ಭಾರಿ ಬೆಂಕಿ ಅವಘಡ

ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿರುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಹೋಟೆಲ್‌ನಲ್ಲಿದ್ದ 30 ಜನರನ್ನು ಇದುವರೆಗೂ ರಕ್ಷಣೆ ಮಾಡಲಾಗಿದೆ ಎಂದು ವಿಜಯವಾಡ ಪೊಲೀಸರು ಹೇಳಿದ್ದಾರೆ.

ಹೋಟೆಲ್‌ನಲ್ಲಿ ಎಷ್ಟು ಜನರಿದ್ದರು?, ಯಾವ ಆಸ್ಪತ್ರೆ ಈ ಹೋಟೆಲ್‌ ಪಡೆದಿತ್ತು?, ಅಗ್ನ ಅವಘಡಕ್ಕೆ ಕಾರಣವೇನು? ಎಂಬುದು ಇನ್ನೂ ತಿಳಿದು ಬರಬೇಕಿದೆ.

English summary
Fire accident at hotel in Andhra Pradesh's Vijayawada. Seven people have died. Fire engines have rushed to the spot. Hotel was being used by a corporate hospital for treating COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X