ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ-ಕೊಲ್ಲಾಪುರ ವಿಶೇಷ ರೈಲು; ಕರ್ನಾಟಕದ ಮೂಲಕ ಸಂಚಾರ

|
Google Oneindia Kannada News

ತಿರುಪತಿ, ಅಕ್ಟೋಬರ್ 27 : ಭಾರತೀಯ ರೈಲ್ವೆ ತಿರುಪತಿ-ಕೊಲ್ಲಾಪುರ ನಡುವೆ ಹಬ್ಬದ ವಿಶೇಷ ರೈಲನ್ನು ಓಡಿಸಲಿದೆ. ಈ ರೈಲು ಕರ್ನಾಟಕದ ಮೂಲಕ ಸಂಚಾರ ನಡೆಸಲಿದ್ದು, ರಾಜ್ಯದ ಜನರಿಗೆ ಸಹ ಅನುಕೂಲವಾಗಲಿದೆ.

ದೀಪಾವಳಿ ಹಬ್ಬದ ಅಂಗವಾಗಿ ಭಾರತೀಯ ರೈಲ್ವೆ ವಿವಿಧ ರಾಜ್ಯಗಳಲ್ಲಿ ವಿಶೇಷ ಹಬ್ಬದ ರೈಲುಗಳನ್ನು ಓಡಿಸಲಿದೆ. ತಿರುಪತಿ-ಕೊಲ್ಲಾಪುರ ನಡುವೆ 07415/07416 ವಿಶೇ ರೈಲು ಪ್ರತಿದಿನ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ಯಶವಂತಪುರ-ಪ್ರಯಾಗ್ ರಾಜ್ ಹಬ್ಬದ ವಿಶೇಷ ರೈಲು, ವೇಳಾಪಟ್ಟಿ ಯಶವಂತಪುರ-ಪ್ರಯಾಗ್ ರಾಜ್ ಹಬ್ಬದ ವಿಶೇಷ ರೈಲು, ವೇಳಾಪಟ್ಟಿ

ತಿರುಪತಿ-ಕೊಲ್ಲಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ರೇಣಿಗುಂಟ, ಗುಂತಕಲ್, ಬಳ್ಳಾರಿ, ಹೊಸಕೋಟೆ, ಹುಬ್ಬಳ್ಳಿ, ಮೀರಜ್ ಮಾರ್ಗವಾಗಿ ಸಂಚಾರ ನಡೆಸಲಿದೆ. ವಿಶೇಷ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಸಂಚಾರ ನಡೆಸಲಿದೆ.

ಮೈಸೂರು-ತಮಿಳುನಾಡು ಹಬ್ಬದ ವಿಶೇಷ ರೈಲು; ವೇಳಾಪಟ್ಟಿ ಮೈಸೂರು-ತಮಿಳುನಾಡು ಹಬ್ಬದ ವಿಶೇಷ ರೈಲು; ವೇಳಾಪಟ್ಟಿ

Festival Special Train Between Tirupati And Kolhapur

ಹಬ್ಬದ ವಿಶೇಷ ರೈಲು ಅಕ್ಟೋಬರ್ 28 ರಿಂದ ನವೆಂಬರ್ 16ರ ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ವಿಶೇಷ ರೈಲಿನ ಸೀಟುಗಳು ಮುಂಗಡ ಟಿಕೆಟ್‌ ಬುಕ್ಕಿಂಗ್ ಆರಂಭವಾಗಿದೆ. ರೈಲಿನಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

ಮತ್ತೆ ಗೋಲ್ಡನ್ ಚಾರಿಯಟ್ ರೈಲು ಸಂಚಾರ; ಬುಕ್ಕಿಂಗ್ ಆರಂಭ ಮತ್ತೆ ಗೋಲ್ಡನ್ ಚಾರಿಯಟ್ ರೈಲು ಸಂಚಾರ; ಬುಕ್ಕಿಂಗ್ ಆರಂಭ

ರೈಲಿನ ವೇಳಾಪಟ್ಟಿ, ನಿಲ್ದಾಣಗಳು

ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈಗ ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ದೇಶಾದ್ಯಂತ 1 ತಿಂಗಳು ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ದೇಶಾದ್ಯಂತ ಒಟ್ಟು 392 ರೈಲುಗಳು ಸಂಚಾರ ನಡೆಸಲಿವೆ.

English summary
Indian railways will run festival special train between Tirupati and Kolhapur. Express train will run via Renigunta, Guntakal, Ballari, Hospet, Hubballi, Miraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X