• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Fact Check: ಬುರ್ಖಾ ಧರಿಸಿದ್ದ ಆರೆಸ್ಸೆಸ್ ಕಾರ್ಯಕರ್ತನ ಕೈಲಿ ಪಾಕ್ ಧ್ವಜ?

|

ಅಮರಾವತಿ, ಆ. 19: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಳೆದರೂ ವೈರಲ್ ವಿಡಿಯೋವೊಂದು ಭಾರಿ ಸದ್ದು ಮಾಡಿತ್ತು. ಬುರ್ಖಾಧಾರಿಯೊಬ್ಬರನ್ನು ನಡು ರಸ್ತೆಯಲ್ಲಿ ಪೊಲೀಸರು ಬುರ್ಖಾ ತೆಗೆಯುವಂತೆ ಆಗ್ರಹಿಸುತ್ತಿರುತ್ತಾರೆ. ಆ ವ್ಯಕ್ತ ಕೈಯಲ್ಲಿ ಪಾಕಿಸ್ತಾನ ಧ್ವಜವಿತ್ತದೆ. ಈ ವ್ಯಕ್ತಿ ಆರೆಸ್ಸೆಸ್ ಕಾರ್ಯಕರ್ತ ಎಂದು ಸುಳ್ಳು ಸುದ್ದಿ ಹಬ್ಬಿಸಿ ವಿವಿಧ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹಬ್ಬಿಸಲಾಯಿತು.

   ಗಣಪತಿ ಹಬ್ಬ ಮಾಡೋರು ಈ ನಿಯಮ ಪಾಲಿಸಲೇ ಬೇಕು | Oneindia Kannada

   ತನ್ನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಕರೆದುಕೊಂಡಿರುವ ರಾಜು ಉಪ್ಮಾನ್ ಎಂಬಾತ ಈ ವಿಡಿಯೋ ಟ್ವೀಟ್ ಮಾಡಿದ್ದರು. ಟ್ವೀಟ್ ನಲ್ಲಿ ಬರೆದಿದ್ದನ್ನು ಭಾಷಾಂತರಿಸಿದರೆ.. ಈ ಆರೆಸ್ಸೆಸ್ ವ್ಯಕ್ತಿ ಬುರ್ಖಾ ಧರಿಸಿಕೊಂಡು ಪಾಕಿಸ್ತಾನ ಬಾವುಟ ತೋರಿಸುತ್ತಿದ್ದಾನೆ, ಈ ಮೂಲಕ ಇಲ್ಲಿನ ಮುಸ್ಲಿಮರಿಗೆ ಅಪಮಾನ ಮಾಡುವುದು ಆತನ ಉದ್ದೇಶ ಎನ್ನಲಾಗಿತ್ತು.

   ಆದರೆ, ವಿಡಿಯೋ ಹಾಗೂ ರಾಜು ಅವರ ಟ್ವೀಟ್ ಸತ್ಯಾಸತ್ಯತೆ ಪರಿಶೀಲಿಸಿದಾಗ ಸತ್ಯ ಬೇರೆಯಾಗಿದೆ. ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಗುಂಪೊಂದನ್ನು ಪೊಲೀಸರು ಮಾರ್ಗಮಧ್ಯದಲ್ಲಿ ತಡೆದು ಬಂಧಿಸಿದ ದೃಶ್ಯ ಇದಾಗಿದೆ. ಬುರ್ಖಾ ಧರಿಸಿದ ವ್ಯಕ್ತಿ ಆರೆಸ್ಸೆಸ್ ಕಾರ್ಯಕರ್ತನಲ್ಲ, ಅಕ್ರಮ ಮದ್ಯ ಸಾಗಾಟ ಗುಂಪಿನ ಸದಸ್ಯನಾಗಿದ್ದು, ತನ್ನ ಗುರುತು ಪತ್ತೆಯಾಗದಿರಲಿ ಎಂದು ಬುರ್ಖಾ ಧರಿಸಿದ್ದ ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶ ಪೊಲೀಸರು ನಡು ರಸ್ತೆಯಲ್ಲೇ ಬುರ್ಖಾ ತೆಗೆಸಿ, ಆತನ ಸ್ಮಗಲಿಂಗ್ ಗ್ಯಾಂಗ್ ಜೊತೆ ಸಾಲಾಗಿ ಕುಳಿತುಕೊಳ್ಳಲು ಸೂಚಿಸುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಆಂಧ್ರದ ಕರ್ನೂಲ್ ಜಿಲ್ಲೆಯ ಪಂಚಲಿಂಗಲಾ ಚೆಕ್ ಪೋಸ್ಟ್ ಬಳಿ ನಡೆದ ಘಟನೆ ಇದಾಗಿದೆ ಎಂದು ಖಚಿತಪಡಿಸಬಹುದು.

   English summary
   A video of a man removing his burqa in front of policemen has gone viral on the social media. A tweet says that the man in the video is an RSS man. He had removed his burqa and waved the Pakistan flag to defame Muslims.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X