ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಹಾಗೂ 9ನೇ ರೂಮ್ ರಹಸ್ಯ

|
Google Oneindia Kannada News

ಅನಂತಪುರ, ಮೇ 22: ಲೋಕಸಭೆ ಚುನಾವಣೆ ಜೊತೆಗೆ ಆಂಧ್ರಪ್ರದೇಶದಲ್ಲಿ 15ನೇ ವಿಧಾನಸಭೆಗಾಗಿ ಕೂಡಾ ಚುನಾವಣೆ ನಡೆಸಲಾಯಿತು. ಸ್ಟಾರ್ ನಟ, ನಟಿಯರು, ಸೆಲೆಬ್ರಿಟಿಗಳನ್ನು ಹೊಂದಿರುವ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬರಲಿದೆ.

ರಾಯಲಸೀಮೆಯ ಅನಂತಪುರ ಜಿಲ್ಲೆಯ ಕರ್ನಾಟಕ ಗಡಿಭಾಗದ ಹಿಂದೂಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರತಿ ಬಾರಿಯಂತೆ ಈ ಬಾರಿಯೂ ಕುತೂಹಲ ಕೆರಳಿಸಿದೆ. ತೆಲುಗಿನ ಸೂಪರ್ ಸ್ಟಾರ್ ನಟ, ಹಾಲಿ ಶಾಸಕ ನಂದಮೂರಿ ಬಾಲಕೃಷ್ಣ(ಬಾಲಯ್ಯ) ಅವರ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ.

ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್ .ಟಿ ರಾಮರಾವ್ ಅವರ ಪುತ್ರ ಬಾಲಯ್ಯ ಅವರಿಗೆ ರಾಜಕೀಯಕ್ಕಿಂತ ಸಿನಿಮಾದಲ್ಲೇ ಹೆಚ್ಚಿನ ಆಸಕ್ತಿ ಇತ್ತು.

ಅತ್ಯಂತ ಒಣ ಹವೆಯುಳ್ಳ ರಾಜಕೀಯ ಬಿರುಸಿನ ಕ್ಷೇತ್ರ ಅನಂತಪುರಅತ್ಯಂತ ಒಣ ಹವೆಯುಳ್ಳ ರಾಜಕೀಯ ಬಿರುಸಿನ ಕ್ಷೇತ್ರ ಅನಂತಪುರ

ಆದರೆ, ತೆಲುಗು ದೇಶಂ ಪಕ್ಷದ ಪರ ಚುನಾವಣಾ ಪ್ರಚಾರವನ್ನು ತಪ್ಪಿಸುತ್ತಿರಲಿಲ್ಲ. ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಟಿಡಿಪಿ ಗೆಲುವಿಗೆ ಕಾರಣದ ಬಳಿಕ ಅಪ್ಪ ಎನ್ಟಿಆರ್ ಆಶೀರ್ವಾದವೂ ಸಿಕ್ಕಿತು. 2014ರಲ್ಲಿ ಹಿಂದೂಪುರದಿಂದ ವಿಧಾನಸಭೆಗೆ ಸ್ಪರ್ಧಿಸಿ ಜಯ ದಾಖಲಿಸಿದರು.

ಹಿಂದೂಪುರ ಕ್ಷೇತ್ರ ಪರಿಚಯ

ಬಾಲಕೃಷ್ಣ ಅವರು ಟಿಡಿಪಿ ಪರವಾಗಿ ಪ್ರಚಾರ ನಡೆಸಿದ್ದರೂ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಬಾಲಕೃಷ್ಣ ಅವರ ಪುತ್ರಿ ಬ್ರಹ್ಮಣಿ ಅವರನ್ನು ಚಂದ್ರಬಾಬು ನಾಯ್ಡು ಅವರ ಪುತ್ರ ಲೋಕೇಶ್ ವರಿಸಿದ ಬಳಿಕ ನಾಯ್ಡು ಅವರ ಅಣತಿಯಂತೆ ಬಾಲಕೃಷ್ಣ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.

2009ರಲ್ಲೇ ಚುನಾವಣಾ ರಾಜಕೀಯದ ಕುರುಹು

2009ರಲ್ಲೇ ಚುನಾವಣಾ ರಾಜಕೀಯದ ಕುರುಹು

2009ರಲ್ಲಿ ಚಂದ್ರಬಾಬು ನಾಯ್ಡು ಅವರ ಪರ ಚುನಾವಣಾ ಪ್ರಚಾರ ನಡೆಸಿದ್ದ ಬಾಲಕೃಷ್ಣ ಅವರ ರಾಜಕೀಯ ಪ್ರವೇಶ ಸುದ್ದಿ ದಟ್ಟವಾಗಿತ್ತು. ಆಗ ಆಂಧ್ರಪ್ರದೇಶದಲ್ಲಿ ಹೊಸ ಸಂಚಲನ ಉಂಟಾಗಿತ್ತು. ಆದರೆ, 2014ರಲ್ಲಿ ರಾಜಕೀಯ ಪ್ರವೇಶ ಪಡೆದರು ಸಿಂಹಾಚಲಂನಲ್ಲಿರುವ ಶ್ರೀಲಕ್ಷ್ಮಿ ನರಸಿಂಗ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ್ದ, ನಂದಮೂರಿ ಕುಟುಂಬಕ್ಕೂ ರಾಜಕೀಯಕ್ಕೂ ಬಿಡಿಸಲಾರದ ನಂಟಿದೆ. ತಂದೆ (ಎನ್.ಟಿ ರಾಮರಾವ್) ಅವರ ಆಶಯಗಳನ್ನು ಪೂರೈಸಲು ನಾನು ಸಕ್ರಿಯ ರಾಜಕೀಯ ಪ್ರವೇಶಿಸುವೆ ಎಂದಿದ್ದರು.

ಬೆಂಗಳೂರಿಗೆ ಬಂದಿದ್ದ ಬಾಲಯ್ಯಗೆ ಪತ್ರಕರ್ತರು ಕೇಳಿದ 2 ಪ್ರಶ್ನೆ ಇಷ್ಟವಾಗಲಿಲ್ಲ.!

ಎನ್ಟಿ ರಾಮರಾವ್ ಅವರ ಟಿಡಿಪಿ ಪಕ್ಷ

ಎನ್ಟಿ ರಾಮರಾವ್ ಅವರ ಟಿಡಿಪಿ ಪಕ್ಷ

1982ರಲ್ಲಿ ಜನಪ್ರಿಯ ನಟ, ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರು ತೆಲುಗು ದೇಶಂ ಪಕ್ಷ ಸ್ಥಾಪಿಸಿದ ಕೆಲ ತಿಂಗಳುಗಳಲ್ಲೇ ಅಧಿಕಾರ ಗದ್ದುಗೇರಿದ್ದರು. 1995ರಲ್ಲಿ ಅಳಿಯ ಚಂದ್ರಬಾಬು ನಾಯ್ಡು ಅವರಿಗೆ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಇದಾದ ಕೆಲ ತಿಂಗಳ ನಂತರ ಎನ್ ಟ್ ರಾಮರಾವ್ ಅವರು ಅಸುನೀಗಿದ್ದರು.

ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ?

ಎನ್ಟಿಆರ್ ಕೂಡಾ ಹಿಂದೂಪುರದಲ್ಲಿ ಸ್ಪರ್ಧಿಸಿದ್ದರು

ಎನ್ಟಿಆರ್ ಕೂಡಾ ಹಿಂದೂಪುರದಲ್ಲಿ ಸ್ಪರ್ಧಿಸಿದ್ದರು

1982ರಿಂದ ಟಿಡಿಪಿ ಪ್ರಭುತ್ವ ಹೊಂದಿರುವ ಈ ಕ್ಷೇತ್ರದಲ್ಲಿ ಎನ್ಟಿಆರ್ ಕೂಡಾ ಒಮ್ಮೆಸ್ಪರ್ಧಿಸಿ ಜಯ ದಾಖಲಿಸಿದ್ದರು. ನಂತರ ಎನ್ಟಿಆರ್ ಮತ್ತೊಬ್ಬ ಪುತ್ರ ನಂದಮೂರಿ ಹರಿಕೃಷ್ಣ ಜಯಭೇರಿ ಬಾರಿಸಿದ್ದರು. 2014ರಲ್ಲಿ ಬಾಲಕೃಷ್ಣ ಅವರು ಶೇ 51.12ರಷ್ಟು ಮತ(81,543) ಗಳಿಸಿ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಬಿ ನವೀನ್ ನಿಶ್ಚಲ್ ಶೇ 40.97 (65,347) ವಿರುದ್ಧ ಜಯ ದಾಖಲಿಸಿದ್ದರು.

ಬಾಲಕೃಷ್ಣ ಬಗ್ಗೆ ವಿಕಿಪೀಡಿಯ ದೊಡ್ಡ ಎಡವಟ್ಟು: ಅಭಿಮಾನಿಗಳು ಶಾಕ್.!

ಬಾಲಕೃಷ್ಣ ಅವರು ಗೆಲ್ಲುವ ಮುನ್ಸೂಚನೆ

ಬಾಲಕೃಷ್ಣ ಅವರು ಗೆಲ್ಲುವ ಮುನ್ಸೂಚನೆ

ಈ ಬಾರಿಯೂ ಬಾಲಕೃಷ್ಣ ಅವರು ಗೆಲ್ಲುವ ಮುನ್ಸೂಚನೆ ಸಿಕ್ಕಿದೆ. ಆದರೆ, ಮತ ಎಣಿಕೆ ದಿನದಂದು ಬಾಲಕೃಷ್ಣ ಸಕತ್ ಟೆನ್ಶನ್ ನಲ್ಲಿರುತ್ತಾರೆ. 2014ರಲ್ಲಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮತ ಎಣಿಕೆ ನಡೆದಿತ್ತು. ಈ ಬಾರಿಯೂ ಇದೇ ಸ್ಥಳದಿಂದ ಫಲಿತಾಂಶ ಬರಲಿದೆ. ಮತ ಎಣಿಕೆ ದಿನದಂದು ಬಾಲಯ್ಯ ಅವರು ಆರ್ ಟಿಡಿ ಸ್ಟೇಡಿಯಂನಲ್ಲಿರುತ್ತಾರೆ. ಅದರಲ್ಲೂ ರೂಮ್ ನಂಬರ್ 9ರಲ್ಲೇ ಕುಳಿತಿರುತ್ತಾರೆ

ರೂಮ್ 9 ಕ್ಕಾಗಿ ಹೋರಾಟ

ರೂಮ್ 9 ಕ್ಕಾಗಿ ಹೋರಾಟ

ಪ್ರತಿ ಬಾರಿಯಂತೆ ಈ ಬಾರಿಯೂ 9 ನೇ ನಂಬರ್ ಕೊಠಡಿ ತಮಗೆ ನೀಡುವಂತೆ ಚುನಾವಣಾಧಿಕಾರಿಗಳನ್ನು ಕೋರಿದ್ದಾರೆ. ಆದರೆ, ಈ ಬಾರಿ ರೂಮ್ 9 ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಗ್ರ ಪ್ರತಾಪಿ ಬಾಲಯ್ಯ ಅವರು ಅದೇನು ಮಾಡಿದರೋ ಗೊತ್ತಿಲ್ಲ. ಕೊನೆಗೂ ತಮ್ಮ ಲಕ್ಕಿ ಕೊಠಡಿ 9ನೇ ನಂಬರ್ ರೂಮ್ ದಕ್ಕಿಸಿಕೊಂಡಿದ್ದಾರೆ. ಬುಧವಾರ ಸಂಜೆ ವೇಳೆಗೆ ಆರ್ ಟಿಡಿ ಸ್ಟೇಡಿಯಂಗೆ ತೆರಳಲಿರುವ ಬಾಲಯ್ಯ ಹಾಗೂ ಅವರ ಬೆಂಬಲಿಗರು, ನಾಳೆ ದಿನ ಮತ ಎಣಿಕೆ ವೀಕ್ಷಣೆಗೆ ಸಜ್ಜಾಗಲಿದ್ದಾರೆ.

English summary
Telugu Super Star, Hindupur MLA Balakrishna is very sentimental about a Room no 9 during the counting day. He is preparing for Assembly Election results 2019 to be declared on May 23(Thursday) alongwith Lok Sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X