ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದಲ್ಲಿ ಅತ್ಯಾಚಾರಿಗಳಿಗೆ 21 ದಿನಗಳಲ್ಲೇ ಗಲ್ಲುಶಿಕ್ಷೆ

|
Google Oneindia Kannada News

ಅಮರಾವತಿ, ಡಿಸೆಂಬರ್.13: ತೆಲಂಗಾಣದಲ್ಲಿ ಪಶುವೈದ್ಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿದ್ದು ಹಳೆಯ ವಿಚಾರ. ಈಗ ನೆರೆಯ ರಾಜ್ಯದಲ್ಲಿ ಅಂಥದ್ದೆ ಘಟನೆ ನಡೆದರೆ 21 ದಿನಗಳಲ್ಲೇ ಅಪರಾಧಿಗೆ ಗಲ್ಲುಶಿಕ್ಷೆ ಖಾಯಂ.

ಮಹಿಳೆಯರ ಮೇಲೆ ದೌರ್ಜನ್ಯ ತಡೆಗೆ ನೆರೆಯ ರಾಜ್ಯದಲ್ಲಿ ವಿನೂತನ ಕಾಯ್ದೆಯೊಂದನ್ನು ಜಾರಿಗೊಳಿಸಲಾಗಿದೆ. ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸರ್ಕಾರ ರೂಪಿಸಿದ ದಿಶಾ ಮಸೂದೆ ಪಾಸ್ ಆಗಿದ್ದು ಕಾಯ್ದೆಯಾಗಿ ಜಾರಿಯಾಗಿದೆ.

ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ 21 ದಿನದಲ್ಲಿ ನ್ಯಾಯ!ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ 21 ದಿನದಲ್ಲಿ ನ್ಯಾಯ!

ಪಶುವೈದ್ಯ ಮೇಲೆ ಕಾಮುಕರು ಎಸಗಿದ ದುಷ್ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಹಾಗೂ ಪೊಲೀಸರ ಕ್ರಮಕ್ಕೆ ಶಹಬ್ಬಾಶ್ ಎಂದಿದ್ದರು. ಒಂದ ತಂದೆಯಾಗಿ, ಪತಿಯಾಗ, ಸಹೋದರನಾಗಿ ಪಶುವೈದ್ಯೆ ಮೇಲೆ ನಡೆದ ಕ್ರೌರ್ಯವನ್ನು ನಾನು ಖಂಡಿಸುತ್ತೇನೆ ಎಂದಿದ್ದ ಜಗನ್, ತಮ್ಮದೇ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ವಿಧಾನಸಭೆಯಲ್ಲಿ ಸರ್ಕಾರದ ದಿಶಾ ಕಾಯ್ದೆ ಪಾಸ್

ವಿಧಾನಸಭೆಯಲ್ಲಿ ಸರ್ಕಾರದ ದಿಶಾ ಕಾಯ್ದೆ ಪಾಸ್

ಆಂಧ್ರಪ್ರದೇಶ ಸರ್ಕಾರ ರಾಜ್ಯದ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ದೌರ್ಜನ್ಯ ತಡೆಗೆ ರೂಪಿಸಿದ ಕಾಯ್ದೆಗೆ ಪಶುವೈದ್ಯೆ ದಿಶಾ ಹೆಸರನ್ನೇ ಇರಿಸಲಾಗಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರದ ದಿಶಾ ಕಾಯ್ದೆ ಡಿಸೆಂಬರ್.13ರ ಶುಕ್ರವಾರ ಅಂಗೀಕಾರಗೊಂಡಿದೆ.

21 ದಿನಗಳಲ್ಲೇ ಅಪರಾಧಿಗೆ ಗಲ್ಲುಶಿಕ್ಷೆ

21 ದಿನಗಳಲ್ಲೇ ಅಪರಾಧಿಗೆ ಗಲ್ಲುಶಿಕ್ಷೆ

ಮಹಿಳೆಯರ ಮೇಲೆ ಕ್ರೌರ್ಯ ಮೆರೆದ ಅತ್ಯಾಚಾರಿಗೆ 21 ದಿನಗಳಲ್ಲೇ ಗಲ್ಲುಶಿಕ್ಷೆ ವಿಧಿಸುವ ಬಗ್ಗೆ ದಿಶಾ ಕಾಯ್ಜೆಯಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಸಂವಿಧಾನದ ಐಪಿಸಿ ಸೆಕ್ಷನ್ 376ರ ಪ್ರಕಾರ ಸೂಕ್ತ ಸಾಕ್ಷ್ಯಾಧಾರಗಳಿದ್ದಲ್ಲಿ ಅಪರಾಧಿಗೆ ಘಟನೆ ನಡೆದು 21 ದಿನಗಳಲ್ಲಿ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಹೇಳಲಾಗಿದೆ.

ತೆಲಂಗಾಣ ಎನ್‌ಕೌಂಟರ್: ತನಿಖಾ ಸಮಿತಿ ರಚಿಸಿದ ಸುಪ್ರೀಂಕೋರ್ಟ್ತೆಲಂಗಾಣ ಎನ್‌ಕೌಂಟರ್: ತನಿಖಾ ಸಮಿತಿ ರಚಿಸಿದ ಸುಪ್ರೀಂಕೋರ್ಟ್

7 ದಿನಗಳಲ್ಲಿ ಪ್ರಕರಣದ ಸಂಪೂರ್ಣ ತನಿಖೆ

7 ದಿನಗಳಲ್ಲಿ ಪ್ರಕರಣದ ಸಂಪೂರ್ಣ ತನಿಖೆ

ಮಹಿಳಾ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳನ್ನು ತುಂಬಾ ದಿನಗಳ ಕಾಲ ಮುಂದುವರಿಸುವಂತಿಲ್ಲ. ಘಟನೆ ನಡೆದು 7 ದಿನಗಳಲ್ಲೇ ತನಿಖೆಯನ್ನು ಮುಕ್ತಾಯಗೊಳಿಸಬೇಕು. ಇನ್ನು, 14 ದಿನಗಳಲ್ಲಿ ಆರೋಪಿಗಳ ಸಂಪೂರ್ಣ ವಿಚಾರಣೆ ನಡೆಯಬೇಕು. ನಂತರ ಸೂಕ್ತ ಸಾಕ್ಷ್ಯಾಧಾರಗಳಿದ್ದಲ್ಲಿ 21 ದಿನಗಳೊಳಗೆ ಅಪರಾಧಿಗೆ ಗಲ್ಲುಶಿಕ್ಷೆ ವಿಧಿಸುವ ಬಗ್ಗೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ಅಪ್ರಾಪ್ತರಿಗೆ ಕಿರುಕುಳ ನೀಡಿದರೆ ಜೀವಾವಧಿ

ಅಪ್ರಾಪ್ತರಿಗೆ ಕಿರುಕುಳ ನೀಡಿದರೆ ಜೀವಾವಧಿ

ಮಹಿಳೆಯರಷ್ಟೇ ಅಲ್ಲ ಅಪ್ರಾಪ್ತರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಬಗ್ಗೆಯೂ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 21 ದಿನಗಳಲ್ಲೇ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಘಟನೆ ನಡೆದು 7 ದಿನಗಳಲ್ಲಿ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಬೇಕು. 14 ದಿನಗಳಲ್ಲಿ ಆರೋಪಿಗಳ ವಿಚಾರಣೆಯನ್ನು ಮುಗಿಸಬೇಕು. 21 ದಿನಗಳೊಳಗೆ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕಾಯ್ದೆ ಹೇಳುತ್ತದೆ.

ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್: ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರಅತ್ಯಾಚಾರ ಆರೋಪಿಗಳ ಎನ್‌ಕೌಂಟರ್: ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ

ಆನ್ ಲೈನ್ ನಲ್ಲಿ ಕಾಟ, ಜೈಲೂಟ ಪಕ್ಕಾ!

ಆನ್ ಲೈನ್ ನಲ್ಲಿ ಕಾಟ, ಜೈಲೂಟ ಪಕ್ಕಾ!

ಆಂಧ್ರಪ್ರದೇಶ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣಿರಿಸಿದೆ. ಆನ್ ಲೈನ್ ನಲ್ಲಿ ಮಹಿಳೆಯರಿಗೆ ಕಾಟ ಕೊಡುವ ಭೂಪರಿಗೂ ಬಿಸಿ ಮುಟ್ಟಿಸಲು ತೀರ್ಮಾನಿಸಲಾಗಿದೆ. ಮಹಿಳೆಯರ ದುಂಬಾಲು ಬೀಳುವ ಕಾಮುಕರನ್ನು ಗುರುತಿಸಿ ಜೈಲಿಗೆ ಕಳುಹಿಸಲಾಗುತ್ತದೆ.

ಆಂಧ್ರದ ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯ

ಆಂಧ್ರದ ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯ

ಮಹಿಳಾ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಆಂಧ್ರಪ್ರದೇಶದ ಪ್ರತಿ ಜಿಲ್ಲೆಗಳಲ್ಲೂ ವಿಶೇಷ ನ್ಯಾಯಾಲಯ ತೆರೆಯಲು ತೀರ್ಮಾನಿಸಲಾಗಿದೆ. ಈ ಕೋರ್ಟ್ ಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲಾಗುತ್ತದೆ. ಪೋಕ್ಸೋ ಕಾಯ್ದೆ ಅಡಿ ಬರುವ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿ, ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆ ನಡೆಸಲಾಗುತ್ತದೆ. ಇನ್ನು, ಪ್ರಕರಣಗಳ ಇತ್ಯರ್ಥ ಮಿತಿಯನ್ನು ದಿಶಾ ಕಾಯ್ದೆಯಡಿ ಮೂರು ತಿಂಗಳಿಗೆ ಇಳಿಕೆ ಮಾಡಲಾಗಿದೆ.

ಮಹಿಳೆಯರ ರಕ್ಷಣೆಗೆ ವಿಶೇಷ ಪೊಲೀಸ್ ಪಡೆ

ಮಹಿಳೆಯರ ರಕ್ಷಣೆಗೆ ವಿಶೇಷ ಪೊಲೀಸ್ ಪಡೆ

ಆಂಧ್ರಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಪರಾಧ ಕಾಯ್ದೆ 2019ರ ಅಡಿ ಪ್ರತಿಜಿಲ್ಲೆಯಲ್ಲೂ ಮಹಿಳೆಯರ ರಕ್ಷಣಾ ದೃಷ್ಟಿಯಿಂದ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಲಾಗುತ್ತದೆ. ಡಿಎಸ್ ಪಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ಪಡೆ ಕಾರ್ಯ ನಿರ್ವಹಿಸಲಿದೆ. ಇನ್ನು, ಪ್ರತಿ ಜಿಲ್ಲಾ ಕೋರ್ಟ್ ಗಳಲ್ಲಿ ಇಂಥ ಪ್ರಕರಣಗಳ ಬಗ್ಗೆ ವಾದ ಮಂಡಿಸಲು ಸರ್ಕಾರವೇ ವಕೀಲರನ್ನು ನೇಮಿಸಲು ಮುಂದಾಗಿದೆ.

English summary
Disha Bill Passed In Andhra Pradesh Assembly For Women And Childrens Security. Culprit Must Punish In 21 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X