ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ 'ಲೈನ್' ಕಾಟ, ಪುಂಡತನ ತೋರಿದರೆ ಪಕ್ಕಾ ಜೈಲೂಟ!

|
Google Oneindia Kannada News

ಅಮರಾವತಿ, ಡಿಸೆಂಬರ್.13: ನಡುಬೀದಿಯಲ್ಲಿ ಹುಡುಗಿಯರನ್ನು ರೇಗಿಸೋದಲ್ಲ. ಇನ್ನು ಮುಂದೆ ಆನ್ ಲೈನ್ ನಲ್ಲೂ ಹುಡ್ಗೀರಿಗೆ ಲೈನ್ ಹೊಡೆಯುವ ಹಾಗಿಲ್ಲ. ಮಹಿಳೆಯರಿಗೆ ಕಾಟ ಕೊಡುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಜೈಲಿನಲ್ಲಿ ಮುದ್ದೆ ಮುರಿಯಬೇಕಾಗುತ್ತದೆ.

ಹೌದು, ಮಹಿಳಾ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಆಂಧ್ರಪ್ರದೇಶದಲ್ಲಿ ವಿಶೇಷ ಕಾಯ್ದೆಯೊಂದನ್ನು ಜಾರಿಗೊಳಿಸಲಾಗಿದೆ. ಆನ್ ಲೈನ್ ಕಾಮುಕರ ಕಾಟ ತಪ್ಪಿಸುವ ಬಗ್ಗೆ ದಿಶಾ ಕಾಯ್ದೆಯಲ್ಲಿ ಹೇಳಲಾಗಿದೆ. ಇಂದು ಆಂಧ್ರಪ್ರದೇಶ ಸರ್ಕಾರ ಮಂಡಿಸಿದ ದಿಶಾ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.

ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ

ಪಶುವೈದ್ಯ ಮೇಲೆ ಕಾಮುಕರು ಎಸಗಿದ ದುಷ್ಕೃತ್ಯಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಭಾರತೀಯ ಸಂವಿಧಾನದ ಐಪಿಸಿ ಸೆಕ್ಷನ್ 376ರ ಪ್ರಕಾರ ದಿಶಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

Disha Bill Pass: Imprisonment For Online Harassment On Womens

ಆನ್ ಲೈನ್ ನಲ್ಲಿ ಕಾಟ, ಜೈಲೂಟ ಪಕ್ಕಾ!

ದಿಶಾ ಕಾಯ್ದೆ ಪ್ರಕಾರ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅತ್ಯಾಚಾರದಂತ ಅಪರಾಧಗಳು ಸಾಕ್ಷ್ಯಾಧಾರಗಳ ಸಮೇತ ಸಾಬೀತಾದರೆ 21 ದಿನಗಳಲ್ಲೇ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಬಗ್ಗೆ ಕಾಯ್ದೆಯಲ್ಲಿ ಹೇಳಲಾಗುತ್ತದೆ. ಇದರ ಜೊತೆಗೆ ಆನ್ ಲೈನ್ ಕಾಮುಕರ ಕಾಟಕ್ಕೆ ಕಡಿವಾಣ ಹಾಕುವ ಬಗ್ಗೆಯೂ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಆಂಧ್ರಪ್ರದೇಶ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣಿರಿಸಿದೆ.

ಆನ್ ಲೈನ್ ನಲ್ಲಿ ಮಹಿಳೆಯರಿಗೆ ಕಾಟ ಕೊಡುವ ಭೂಪರಿಗೂ ಬಿಸಿ ಮುಟ್ಟಿಸಲು ತೀರ್ಮಾನಿಸಲಾಗಿದೆ. ಮಹಿಳೆಯರ ದುಂಬಾಲು ಬೀಳುವ ಕಾಮುಕರನ್ನು ಗುರುತಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಈ ಮೊದಲು ಎರಡು ವರ್ಷವಿದ್ದ ಜೈಲುಶಿಕ್ಷೆ ಪ್ರಮಾಣವನ್ನು ನಾಲ್ಕು ವರ್ಷಕ್ಕೆ ಏರಿಕೆ ಮಾಡಲಾಗಿದೆ.

English summary
Disha Bill Pass: Imprisonment For Online Harassment On Womens In Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X