ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕ್ತರು ದರ್ಶನಕ್ಕೆ ಬಾರದಿದ್ದರೂ ತಿಮ್ಮಪ್ಪನಿಗೆ ಕಾಣಿಕೆ ತಪ್ಪಿಲ್ಲ!

|
Google Oneindia Kannada News

ತಿರುಪತಿ, ಮೇ 21 : ಲಾಕ್ ಡೌನ್ ಪರಿಣಾಮ ಎರಡು ತಿಂಗಳಿನಿಂದ ಭಕ್ತರಿಗೆ ತಿರುಪತಿಯಲ್ಲಿ ದೇವರ ದರ್ಶನ ಲಭ್ಯವಿಲ್ಲ. ಬೇಸಿಗೆಯಲ್ಲಿ ತಿರುಪತಿಗೆ ಕೋಟ್ಯಾಂತರ ಭಕ್ತರು ಭೇಟಿ ನೀಡುತ್ತಿದ್ದು, ಆದಾಯವೂ ಹೆಚ್ಚು ಬರುತ್ತಿತ್ತು.

Recommended Video

ಕುರಿ ಕಳೆದುಕೊಂಡ ಕುಟುಂಬಕ್ಕೆ 50 ಸಾವಿರ ಕೊಟ್ಟ ಕಾಂಗ್ರೆಸ್ ನಾಯಕ | Chitradurga | Oneindia Kannada

ಈ ಬಾರಿಯ ಬೇಸಿಯಲ್ಲಿ ಭಕ್ತರು ದೇವರ ದರ್ಶನಕ್ಕೆ ಬಾರದಿದ್ದರೂ ದೇವರಿಗೆ ಕಾಣಿಕೆ ನೀಡುವುದನ್ನು ನಿಲ್ಲಿಸಿಲ್ಲ. ಇ-ಹುಂಡಿ ವ್ಯವಸ್ಥೆಯ ಮೂಲಕ ಜನರು ಕಾಣಿಕೆಗಳನ್ನು ತಿಪ್ಪಪ್ಪನಿಗೆ ಸಲ್ಲಿಸುತ್ತಲೇ ಇದ್ದಾರೆ.

ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆ? ಇಲ್ಲಿವೆ ಹೊಸ ಮಾರ್ಗಸೂಚಿಗಳು!ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆ? ಇಲ್ಲಿವೆ ಹೊಸ ಮಾರ್ಗಸೂಚಿಗಳು!

ತಿರುಪತಿ ತಿರುಮಲ ದೇವಸ್ಥಾನಂ ಮಂಡಳಿ (ಟಿಟಿಡಿ) ನೀಡುವ ಮಾಹಿತಿಯಂತೆ ಈ ವರ್ಷದ ಏಪ್ರಿಲ್‌ನಲ್ಲಿ 1.97 ಕೋಟಿ ರೂ. ಕಾಣಿಕೆ ಇ-ಹುಂಡಿಯ ಮೂಲಕ ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 18 ಲಕ್ಷ ಹೆಚ್ಚಿನ ಸಂಗ್ರಹವಾಗಿದೆ.

ಕೊರೊನಾ ಭೀತಿ; ತಿರುಪತಿ ದೇವಾಲಯ ಒಂದು ವಾರ ಬಂದ್ ಕೊರೊನಾ ಭೀತಿ; ತಿರುಪತಿ ದೇವಾಲಯ ಒಂದು ವಾರ ಬಂದ್

ಟಿಟಿಡಿ ಟ್ರಸ್ಟ್ ಬೋರ್ಡ್‌ನ ಮುಖ್ಯಸ್ಥ ವೈ. ವಿ. ಸುಬ್ಬಾರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಟ್ರಸ್ಟ್ ಆರ್ಥಿಕ ಸಂಕಷ್ಟದಲ್ಲಿದೆ. ಕಾರ್ಮಿಕರಿಗೆ ವೇತನ ನೀಡಲು ತೊಂದರೆಯಾಗುತ್ತಿದೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಮುಂದಿನ ತಿಂಗಳ ವೇತನ ಪಾವತಿಗೂ ಸಹ ನಮಗೆ ಕಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲೂ ಸಿಗುತ್ತೆ ತಿರುಪತಿ ಲಡ್ಡು: ಬೆಲೆಯಲ್ಲಿ 50ರಷ್ಟು ಆಫರ್ಬೆಂಗಳೂರಿನಲ್ಲೂ ಸಿಗುತ್ತೆ ತಿರುಪತಿ ಲಡ್ಡು: ಬೆಲೆಯಲ್ಲಿ 50ರಷ್ಟು ಆಫರ್

ಇ-ಹುಂಡಿ ಮೂಲಕ ಕಾಣಿಕೆ

ಇ-ಹುಂಡಿ ಮೂಲಕ ಕಾಣಿಕೆ

ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಿನಲ್ಲಿ ತಿರುಪತಿಗೆ ಯಾವುದೇ ಭಕ್ತರು ಭೇಟಿ ನೀಡಿಲ್ಲ. ಆದರೆ, ಟಿಟಿಡಿಯ ಇ-ಹುಂಡಿ ಮೂಲಕ ಕಾಣಿಕೆಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ 1.97 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಇ-ಹುಂಡಿ ಮೂಲಕ ಸಂಗ್ರಹವಾದ ಮೊತ್ತ 1.79 ಕೋಟಿ ರೂ.ಗಳು.

ಯಾವುದೇ ಆರ್ಥಿಕ ನಷ್ಟವಿಲ್ಲ

ಯಾವುದೇ ಆರ್ಥಿಕ ನಷ್ಟವಿಲ್ಲ

ಟಿಟಿಡಿ ಟ್ರಸ್ಟ್ ಬೋರ್ಡ್‌ನ ಮುಖ್ಯಸ್ಥ ವೈ. ವಿ. ಸುಬ್ಬಾರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಭಕ್ತರ ಭೇಟಿ ಇಲ್ಲದಿದ್ದರೂ ಬೋರ್ಡ್‌ಗೆ ಆರ್ಥಿಕ ನಷ್ಟವಾಗಿಲ್ಲ. ಕಾರ್ಮಿಕರಿಗೆ ವೇತನ ಪಾವತಿಗೂ ಯಾವುದೇ ತೊಂದರೆ ಉಂಟಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಕಲ್ಯಾಣ ಮಂದಿರದಲ್ಲಿ ಲಡ್ಡು ಮಾರಾಟ

ಕಲ್ಯಾಣ ಮಂದಿರದಲ್ಲಿ ಲಡ್ಡು ಮಾರಾಟ

ಭಕ್ತರ ಭೇಟಿ ಇಲ್ಲದ ಕಾರಣ ಲಾಡು ಪ್ರಸಾದವನ್ನು ಶೇ 50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ತೀರ್ಮಾನಿಸಿದೆ. 50 ರೂ.ಗೆ ಲಾಡುಗಳನ್ನು ಟಿಟಿಡಿ ಕಲ್ಯಾಣ ಮಂಟಪದಲ್ಲಿ ಮಾರಾಟ ಮಾಡಲಾಗುತ್ತದೆ. ಆಂಧ್ರಪ್ರದೇಶದ 13 ಜಿಲ್ಲೆಗಳ ಕಲ್ಯಾಣ ಮಂಟಪ, ಬೆಂಗಳೂರು, ಚೆನ್ನೈ ನಗರದಲ್ಲಿ ಪ್ರಸಾದ ಭಕ್ತರಿಗೆ ದೊರೆಯಲಿದೆ.

ಎಂದು ದೇವಾಲಯ ಓಪನ್

ಎಂದು ದೇವಾಲಯ ಓಪನ್

ದೇವಾಲಯದ ಬಾಗಿಲು ತೆರೆಯುವುದು ಮತ್ತು ಲಾಡು ವಿತರಣೆ ಮಾಡುವ ದಿನಾಂಕವನನ್ನು ಇನ್ನೂ ಘೋಷಣೆ ಮಾಡಿಲ್ಲ. ಲಾಕ್ ಡೌನ್ ಘೋಷಣೆ ಬಳಿಕ ಲಾಡು ಪ್ರಸಾದ ತಯಾರು ಮಾಡುವ ಅಡುಗೆ ಮನೆಗೆ ಬೀಗ ಹಾಕಲಾಗಿದೆ. ಹಿಂದೆ ತಯಾರು ಮಾಡಿದ ಲಾಡುವನ್ನು ಈಗ ಮಾರಾಟ ಮಾಡಲಾಗುತ್ತಿದೆ.

English summary
Due to lock down devotees missed the lord Balaji darshan in Tirumala. But they continued to offer donations by e-hundi. Rs 1.97 crore collected in the month of April 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X