ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಘಟಬಂದನ್ ನಿಂದ ಪ್ರಧಾನಿ ಹುದ್ದೆಗೆ ಯಾರು, ಓವರ್ ಟು ಗೌಡ್ರು

|
Google Oneindia Kannada News

ಬೆಂಗಳೂರು, ಏಪ್ರಿಲ್ 09: ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡಲು ಸಿದ್ಧ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಈ ಮುಂಚೆ ಹೇಳಿದ್ದರು. ಆದರೆ, ಈಗ ಮಹಾಘಟಬಂದನ್ ನಿಂದ ಪ್ರಧಾನಿ ಯಾರಾಗಬಹುದು ಎಂಬುದನ್ನು ದೇವೇಗೌಡರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಾನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಸೂಕ್ತ ಎಂದು ದೇವೇಗೌಡರು ಹೇಳಿದ್ದಾರೆ.

ಮೋದಿ ವಿರುದ್ದ ಹೋರಾಡುವ ಶಕ್ತಿ ಇನ್ನೂ ನನಗಿದೆ: ದೇವೇಗೌಡ ಮೋದಿ ವಿರುದ್ದ ಹೋರಾಡುವ ಶಕ್ತಿ ಇನ್ನೂ ನನಗಿದೆ: ದೇವೇಗೌಡ

ದೇವೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಹಾಘಟಬಂದನ್ ಸಾಧ್ಯತೆ ನಿಜವಾಗಿಸಿದ್ದೇ ಚಂದ್ರಬಾಬು ನಾಯ್ಡು, ಅವರು ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

Deve Gowda, chief of Congress ally JD-S, bats for Chandrababu Naidu as PM

ಕೃಷ್ಣಾ ಜಿಲ್ಲೆಯ ತಿರುವೂರು, ಪಾಮಾರು ಕ್ಷೇತ್ರಗಳಲ್ಲಿ ಟಿಡಿಪಿ ಪರ ದೇವೇಗೌಡರು ಪ್ರಚಾರ ಕೈಗೊಂಡರು. ಏಪ್ರಿಲ್ 11ರಂದು ಆಂಧ್ರದಲ್ಲಿ ಚುನಾವಣೆ ನಡೆಯಲಿದೆ.

ದೇವೇಗೌಡರ ದೋಸ್ತಿಗಾಗಿ ಮುದ್ದಹನುಮೇಗೌಡರನ್ನೇ ಕಚಕ್ ಮಾಡಿದರೆ ಪರಂ! ದೇವೇಗೌಡರ ದೋಸ್ತಿಗಾಗಿ ಮುದ್ದಹನುಮೇಗೌಡರನ್ನೇ ಕಚಕ್ ಮಾಡಿದರೆ ಪರಂ!

ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ರಾಹುಲ್ ಗಾಂಧಿಯೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದಿದ್ದಾರೆ. ಆದರೆ, ಮೋದಿ ವಿರುದ್ಧ ಸಮರ್ಥವಾದ ನಾಯಕತ್ವ ಬೇಕಿದೆ. ನಾಯ್ಡು ಅವರು ಸೂಕ್ತ ಮುಖಂಡ ಎಂದರು. ಮಮತಾ ಬ್ಯಾನರ್ಜಿ, ಮಾಯಾವರಿ, ಅಖಿಲೇಶ್ ಯಾದವ್, ಚಂದ್ರಬಾಬು ನಾಯ್ಡು ಎಲ್ಲರೂ ಪ್ರಾದೇಶಿಕ ನಾಯಕರು, ಮೋದಿ ವಿರುದ್ಧ ಹೋರಾಡಬಲ್ಲ ಶಕ್ತಿಗಳು ಎಂದು ಗೌಡರು ಹೇಳಿದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ವಾಜಪೇಯಿ ಅವರು 23 ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಲಿಲ್ಲವೇ? ಕಾರ್ಗಿಲ್ ಯುದ್ಧ ಗೆಲ್ಲಲಿಲ್ಲವೇ? ಕಾಶ್ಮೀರಕ್ಕೆ ಯಾವ ಪ್ರಧಾನಿಯು ಹೋಗದಿದ್ದ ಸಂದರ್ಭದಲ್ಲಿ ನಾನು ಪ್ರಧಾನಿಯಾಗಿದ್ದಾಗ ಭೇಟಿ ನೀಡಿದೆ. ಲಂಡನ್ನಿನಲ್ಲಿದ್ದ ಫಾರೂಕ್ ಅಬ್ದುಲ್ಲಾ ಅವರನ್ನು ಕಾಶ್ಮೀರಕ್ಕೆ ಕರೆಸಿದೆ. ನಾಗಾಲ್ಯಾಂಡ್ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಯತ್ನಿಸಿದ್ದೆ.

ತುಮಕೂರಿನಲ್ಲಿ ಇನ್ನೂ ಆರಿಲ್ಲ ದೇವೇಗೌಡರ ಮೇಲಿನ ಅಸಮಾಧಾನ? ತುಮಕೂರಿನಲ್ಲಿ ಇನ್ನೂ ಆರಿಲ್ಲ ದೇವೇಗೌಡರ ಮೇಲಿನ ಅಸಮಾಧಾನ?

ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ, ನಿರುದ್ಯೋಗ ಸಮಸ್ಯೆ ಉಲ್ಬಣಿಸಿದಾಗ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಮೋದಿ ಓಡಾಡುತ್ತಿದ್ದರು. ಯಾವ ಮಾಧ್ಯಮಗಳು ಸರ್ಕಾರದ ಹುಳುಕನ್ನು ತೋರಿಸಿಲ್ಲ ಎಂದರು.

ಇನ್ನೊಂದೆಡೆ, ಕೇಂದ್ರದಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗೋಲ್ಲ. ಅವರು ಕೇಂದ್ರ ಸರ್ಕಾರಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Dropping hints that Andhra Pradesh Chief Minister N Chandrababu Naidu could possibly be the opposition choice for the Prime Minister’s post to replace Narendra Modi, JDS supremo H D Deve Gowda Monday said the country was looking towards the TDP president’s leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X