ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ; ತಾಯಿಯ ಶವವನ್ನು ಬೈಕ್‌ನಲ್ಲೇ ಸಾಗಿಸಿದ ಮಗ

|
Google Oneindia Kannada News

ಅಮರಾವತಿ, ಏಪ್ರಿಲ್ 30; ದೇಶದಲ್ಲಿ ಕೋವಿಡ್ 2ನೇ ಅಲೆಗೆ ಸಿಲುಕಿ ವಿವಿಧ ರಾಜ್ಯಗಳು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಅದರಲ್ಲಿಯೂ ಹೊಸ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಪ್ರಕರಣಗಳು ರಾಜ್ಯಗಳಲ್ಲಿ ಆತಂಕ ಉಂಟು ಮಾಡಿವೆ.

ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಅಂಬ್ಯುಲೆನ್ಸ್‌ ಸೇವೆಗಳು ಸಿಗದಿರುವುದು ಕಂಡು ಬಂದಿದೆ. ಆಂಧ್ರ ಪ್ರದೇಶದಲ್ಲಿಯೂ ಇಂತಹ ಘಟನೆ ನಡೆದಿದೆ. ಶವ ಸಾಗಣೆ ಮಾಡಲು ಅಂಬ್ಯುಲೆನ್ಸ್ ಸಿಗದ ಕಾರಣ 18 ಕಿ. ಮೀ. ಬೈಕ್‌ನಲ್ಲಿ ಶವ ಸಾಗಿಸಲಾಗಿದೆ.

ವೈರಲ್ ವಿಡಿಯೋ; ಬಿಡದಿಯಲ್ಲಿ ಜೆಸಿಬಿಯಲ್ಲಿ ಶವ ಸಾಗಾಟ! ವೈರಲ್ ವಿಡಿಯೋ; ಬಿಡದಿಯಲ್ಲಿ ಜೆಸಿಬಿಯಲ್ಲಿ ಶವ ಸಾಗಾಟ!

50 ವರ್ಷದ ಮಹಿಳೆ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಳು. ಕೋವಿಡ್‌ ಸೋಂಕು ತಗುಲಿದ ಮಹಿಳೆಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಆಮ್ಲಜನಕದ ಪ್ರಮಾಣ ಕಡಿಮೆಯಾದ ಕಾರಣ ಮಹಿಳೆ ಮರಣ ಹೊಂದಿದಳು.

ಕೋಲಾರ; ಮಹಿಳೆ ಸಾವು, ರಸ್ತೆಯಲ್ಲೇ 4 ಗಂಟೆ ಉಳಿದ ಶವ ಕೋಲಾರ; ಮಹಿಳೆ ಸಾವು, ರಸ್ತೆಯಲ್ಲೇ 4 ಗಂಟೆ ಉಳಿದ ಶವ

COVID Death Women Body Carried In Bike For 18 Km

ಆದರೆ, ಆಸ್ಪತ್ರೆಯಿಂದ ಶವವನ್ನು ಸಾಗಣೆ ಮಾಡಲು ಆಂಬ್ಯುಲೆನ್ಸ್ ಸಿಗಲಿಲ್ಲ. ಮಹಿಳೆಯ ಪುತ್ರ ಮತ್ತು ಅಳಿಯ ಬೈಕ್‌ನಲ್ಲಿಯೇ ಶವವನ್ನು ಸಾಗಣೆ ಮಾಡಿದರು. ಪೊಲೀಸರು ಬೈಕ್ ಹಿಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆಸ್ಪತ್ರೆ ಮತ್ತು ಸರ್ಕಾರದ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಇಂತಹ ಹಲವಾರು ಘಟನೆಗಳು ಬೆಳಕಿಗೆ ಬರುತ್ತಿವೆ.

English summary
50 year old women who died due to COVID in Andhra Pradesh. Dead body carried in the bike for 18 km after there’s no ambulance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X