ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ 35 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

|
Google Oneindia Kannada News

ಅಮರಾವತಿ, ಜುಲೈ 15 : ಆಂಧ್ರಪ್ರದೇಶದಲ್ಲಿ 2,432 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35,000ದ ಗಡಿದಾಟಿದೆ. ಇದುವರೆಗೂ 452 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ.

Recommended Video

ಚೀನಾಗೆ ಮತ್ತೊಂದು ಶಾಕ್ ಕೊಟ್ಟ ಅಮೇರಿಕಾ | Oneindia Kannada

ಭಾರತದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ 8ನೇ ಸ್ಥಾನದಲ್ಲಿದೆ. ಬುಧವಾರ 2,432 ಹೊಸ ಪ್ರಕರಣ ದಾಖಲಾಗಿದ್ದು, 44 ಜನರು ಮೃತಪಟ್ಟಿದ್ದಾರೆ.

ಆಂಧ್ರ ಸರ್ಕಾರವನ್ನು ಹೊಗಳಿದ ಸಿದ್ದರಾಮಯ್ಯ, ಧನ್ಯವಾದ ಹೇಳಿದ ಅಧಿಕಾರಿಆಂಧ್ರ ಸರ್ಕಾರವನ್ನು ಹೊಗಳಿದ ಸಿದ್ದರಾಮಯ್ಯ, ಧನ್ಯವಾದ ಹೇಳಿದ ಅಧಿಕಾರಿ

ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 35,451ಕ್ಕೆ ಏರಿಕೆಯಾಗಿದೆ. ರಾಜ್ಯದ ಪಕ್ಕದ ತೆಲಂಗಾಣದಲ್ಲಿ 37,745 ಪ್ರಕರಣಗಳು ಇವೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44,077.

ಕರ್ನಾಟಕದಿಂದ ಆಂಧ್ರಕ್ಕೆ ಸಂಚರಿಸಲು ಹೊಸ ಮಾರ್ಗಸೂಚಿ ಕರ್ನಾಟಕದಿಂದ ಆಂಧ್ರಕ್ಕೆ ಸಂಚರಿಸಲು ಹೊಸ ಮಾರ್ಗಸೂಚಿ

COVID Cases Andhra Pradesh Crossed 35 Thousand Mark

ಸೋಮವಾರ ಲಾಕ್ ಡೌನ್ ಮಾರ್ಗಸೂಚಿಯನ್ನು ಬದಲಾವಣೆ ಮಾಡಿದ್ದ ಆಂಧ್ರಪ್ರದೇಶ ಸರ್ಕಾರ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳನ್ನು ಅತಿ ಅಪಾಯಕಾರಿ ರಾಜ್ಯಗಳ ಪಟ್ಟಿಗೆ ಸೇರಿಸಿತ್ತು. ಅಂತರರಾಜ್ಯಗಳ ಸಂಚಾರವನ್ನು ಬಂದ್ ಮಾಡಿದ್ದ ಆಂಧ್ರಪ್ರದೇಶ ಸೋಮವಾರದಿಂದ ಅದನ್ನು ತೆರವುಗೊಳಿಸಿತ್ತು.

ಮೆಹಂದಿ ಎಫೆಕ್ಟ್: ವಧುವಿನ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕುಮೆಹಂದಿ ಎಫೆಕ್ಟ್: ವಧುವಿನ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕು

ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳನ್ನು ಅತಿ ಅಪಾಯಕಾರಿ ರಾಜ್ಯಗಳು ಎಂದು ಆಂಧ್ರಪ್ರದೇಶ ಪಟ್ಟಿ ಮಾಡಿದೆ. ಈ ರಾಜ್ಯಗಳ ಜನರು ಆಂಧ್ರಪ್ರದೇಶಕ್ಕೆ ಸಂಚಾರ ನಡೆಸಲು ಪಾಸು ಪಡೆಯಬೇಕು. ರಾಜ್ಯದ ಗಡಿಯಲ್ಲಿ ಕಡ್ಡಾಯವಾಗಿ ಸ್ಕ್ರೀನಿಂಗ್‌ಗೆ ಒಳಪಡಬೇಕಿದೆ.

English summary
2,432 New Coronavirus cases reported in Andhra Pradesh. State total numbers crossed 35,000 mark. Toll death in the state 452.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X