ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ದೇವಸ್ಥಾನದಿಂದ ಆಂಧ್ರಪ್ರದೇಶದಲ್ಲಿ 1342 ದೇವಾಲಯಗಳ ನಿರ್ಮಾಣ

|
Google Oneindia Kannada News

ಅಮರಾವತಿ, ಆಗಸ್ಟ್‌ 26: ಹಿಂದೂ ಧರ್ಮವನ್ನು ಉತ್ತೇಜಿಸಲು ಮತ್ತು ಧಾರ್ಮಿಕ ಮತಾಂತರಗಳನ್ನು ತಡೆಗಟ್ಟಲು ಟಿಟಿಡಿ ಆಂಧ್ರಪ್ರದೇಶ ರಾಜ್ಯದಾದ್ಯಂತ 1,342 ಶ್ರೀವಾರಿ ದೇವಾಲಯಗಳನ್ನು ನಿರ್ಮಿಸಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ವಿ.ಧರ್ಮ ರೆಡ್ಡಿ ಅವರು ತಿಳಿಸಿದ್ದಾರೆ.

ತಿರುಪತಿಯ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹದಲ್ಲಿ ರಾಜ್ಯ ದತ್ತಿ ಇಲಾಖೆ ಮತ್ತು ಸಮರಸತಾ ಸೇವಾ ಪ್ರತಿಷ್ಠಾನದೊಂದಿಗೆ ಟಿಟಿಡಿ ಈ ಕುರಿತು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ ಎಂದು ಅವರು ಹೇಳಿದ್ದಾರೆ.

ಸ್ವಾದಿಷ್ಟ ತಿರುಪತಿ ಲಡ್ಡುಗೆ 307ನೇ ಹುಟ್ಟುಹಬ್ಬದ ಸಂಭ್ರಮಸ್ವಾದಿಷ್ಟ ತಿರುಪತಿ ಲಡ್ಡುಗೆ 307ನೇ ಹುಟ್ಟುಹಬ್ಬದ ಸಂಭ್ರಮ

ಆರಂಭದಲ್ಲಿ 1,342 ದೇವಾಲಯಗಳಲ್ಲಿ 120 ದೇವಾಲಯಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಮಾತನಾಡಿದ ಟಿಟಿಡಿ ಇಒ, ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅವರ ನಿರ್ದೇಶನದಂತೆ ಸಮಿತಿಯು ದೇವಾಲಯಗಳ ಪಟ್ಟಿ, ಗುರುತಿಸಿದ ಜಮೀನಿನ ವಿವರಗಳನ್ನು ಸಂಗ್ರಹಿಸಿ ಸಮರಸತಾ ಸೇವಾ ಪ್ರತಿಷ್ಠಾನಕ್ಕೆ ವಿವರಗಳನ್ನು ಸಲ್ಲಿಸಿದೆ. ಶ್ರೀವಾಣಿ ಟ್ರಸ್ಟ್ ನಿಧಿಯಲ್ಲಿ 500 ದೇವಸ್ಥಾನಗಳನ್ನು ನಿರ್ಮಿಸಲಾಗಿದೆ ಎಂದರು.

ಹಳೆಯ ಮತ್ತು ಶಿಥಿಲಗೊಂಡಿರುವ ಹಿಂದೂ ದೇವಾಲಯಗಳ ಪುನರುಜ್ಜೀವನಕ್ಕಾಗಿ 2019 ರಲ್ಲಿ ಟಿಟಿಡಿ ಶ್ರೀವಾಣಿ ಟ್ರಸ್ಟ್ ಅನ್ನು ಸ್ಥಾಪಿಸಿದೆ. ಈಗಾಗಲೇ 500 ಕೋಟಿ ರೂಪಾಯಿಗಳನ್ನು ಟ್ರಸ್ಟ್‌ಗೆ ದೇಣಿಗೆ ರೂಪದಲ್ಲಿ ಸ್ವೀಕರಿಸಲಾಗಿದೆ. ಟ್ರಸ್ಟ್ ನಿಧಿಯನ್ನು ಅಗತ್ಯ ದುರಸ್ತಿಗಳನ್ನು ಕೈಗೊಳ್ಳಲು ಮತ್ತು ಧೂಪ, ದೀಪ ಮತ್ತು ನೈವೇದ್ಯಕ್ಕಾಗಿ ದೇವಸ್ಥಾನಗಳಿಗೆ ಹಣಕಾಸಿನ ನೆರವು ನೀಡಲು ಬಳಸಲಾಗುತ್ತದೆ. ಸೆಪ್ಟೆಂಬರ್ 3 ರಂದು ನಡೆಯಲಿರುವ ಶ್ರೀವಾಣಿ ಟ್ರಸ್ಟ್ ಬೋರ್ಡ್ ಸಭೆಯಲ್ಲಿ ಹೊಸ ನೀತಿಯನ್ನು ಪ್ರಕಟಿಸಲಾಗುವುದು ಎಂದು ಟಿಟಿಡಿ ಇಒ ಹೇಳಿದರು.

ಮುಂದಿನ ಆರು ತಿಂಗಳಲ್ಲಿ 1342 ದೇವಸ್ಥಾನ

ಮುಂದಿನ ಆರು ತಿಂಗಳಲ್ಲಿ 1342 ದೇವಸ್ಥಾನ

ಸಮರಸತಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ತಲ್ಲೂರು ವಿಷ್ಣು ಮಾತನಾಡಿ, 1,342 ಶ್ರೀವಾರಿ ದೇವಾಲಯಗಳ ನಿರ್ಮಾಣವನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಈ ವೇಳೆ ಟಿಟಿಡಿ ಜೆಇಒ ಶ್ರೀ ವೀರಬ್ರಹ್ಮ, ಸಮರಸತಾ ಸೇವಾ ಪ್ರತಿಷ್ಠಾನದ ಪ್ರತಿನಿಧಿ ಶ್ರೀ ತ್ರಿನಾಥ್ ಉಪಸ್ಥಿತರಿದ್ದರು.

ಜೂನ್ 30ರವರೆಗೆ ತಿರುಪತಿಯಲ್ಲಿ ವಾರದಿನಗಳ ಕೆಲ ಸೇವೆ ಇಲ್ಲ- ಕಾರಣ ಇದುಜೂನ್ 30ರವರೆಗೆ ತಿರುಪತಿಯಲ್ಲಿ ವಾರದಿನಗಳ ಕೆಲ ಸೇವೆ ಇಲ್ಲ- ಕಾರಣ ಇದು

ಕನಿಷ್ಠ ಬೆಂಬಲ ಬೆಲೆಯಲ್ಲಿ ಬೆಳೆಗಳ ಖರೀದಿ

ಕನಿಷ್ಠ ಬೆಂಬಲ ಬೆಲೆಯಲ್ಲಿ ಬೆಳೆಗಳ ಖರೀದಿ

ತಿರುಪತಿಯ ಶ್ವೇತ ಭವನದಲ್ಲಿ ಆಯೋಜಿಸಿದ್ದ ನೋಡಲ್ ಗೋಶಾಲೆ ಸಂಚಾಲಕರು ಹಾಗೂ ಸಾವಯವ ಕೃಷಿಕರ ತರಬೇತಿ ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಆವರಣದಲ್ಲಿ ನಿರ್ಮಿಸಿರುವ ಹಲವಾರು ಮಳಿಗೆಗಳಿಗೆ ಗುರುವಾರ ಭೇಟಿ ನೀಡಿದ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರು ಸಾವಯವ ಕೃಷಿಕರು ಬೆಳೆದ ಸಾವಯವ ಬೆಳೆಗಳನ್ನು ಟಿಟಿಡಿ ಖರೀದಿಸಲಿದೆ. ಟಿಟಿಡಿ ಎಲ್ಲಾ ಸಾವಯವ ಉತ್ಪನ್ನಗಳಾದ ಬೆಲ್ಲ, ಅಕ್ಕಿ, ಬೇಳೆಕಾಳುಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುತ್ತದೆ ಎಂದರು.

ಸಾವಯವ ಬೆಲ್ಲ ಸವಿದ ಇಒ

ಸಾವಯವ ಬೆಲ್ಲ ಸವಿದ ಇಒ

ಈ ವೇಳೆ ತೊಟ್ಟಬೀಡು ಮಂಡಲದ ಪೋಡಿ ಗ್ರಾಮದ ಸಾವಯವ ಕೃಷಿಕ ಜಲಗಂ ಶ್ಯಾಮ್ ಅವರು ಸಾವಯವ ಅಕ್ಕಿ ಮತ್ತು ತರಕಾರಿಗಳನ್ನು ಬೆಳೆಯಲು ಮತ್ತು ಮಾರುಕಟ್ಟೆಗೆ ತಮ್ಮ ಸಮಸ್ಯೆಗಳನ್ನು ವಿವರಿಸಿದರು. ಚಿತ್ತೂರು ಜಿಲ್ಲೆ ಎಸ್‌ಆರ್ ಪುರಂನ ಮುಗುಂಟಾ ಗ್ರಾಮದ ರೈತ ಶೇಷಾದ್ರಿ ರೆಡ್ಡಿ ತಂದಿದ್ದ ಸಾವಯವ ಬೆಲ್ಲವನ್ನು ಇಒ ಜತೆಗೂಡಿ ಸವಿದರು. ನವಧಾನ್ಯ, ಎಲೆ, ತರಕಾರಿ ಬಳಸಿ ರೈತರು ಬಿಡಿಸಿರುವ ರಂಗೋಲಿಯನ್ನು ಪರಿಶೀಲಿಸಿದರು.

ಸಾವಯವ ಕೃಷಿ ಪ್ರೋತ್ಸಾಹಿಸಲು ಇಲಾಖೆ

ಸಾವಯವ ಕೃಷಿ ಪ್ರೋತ್ಸಾಹಿಸಲು ಇಲಾಖೆ

ತಿರುಪತಿಯ ಶ್ವೇತ ಭವನದಲ್ಲಿ ನೋಡಲ್ ಗೋಶಾಲೆ ಸಂಚಾಲಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸುಬ್ಬಾ ರೆಡ್ಡಿ, ಮಣ್ಣನ್ನು ಕೀಟನಾಶಕ ಮುಕ್ತಗೊಳಿಸುವ ಗುರಿಯೊಂದಿಗೆ ಟಿಟಿಡಿ ಪ್ರತಿಯೊಂದರಲ್ಲೂ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ವಿಶೇಷ ಇಲಾಖೆಯನ್ನು ಸ್ಥಾಪಿಸುವ ಮೂಲಕ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ರೈತರನ್ನು ಪ್ರೇರೇಪಿಸುವತ್ತ ಗಮನಹರಿಸುತ್ತಿದ್ದಾರೆ ಎಂದರು.

English summary
Tirumala Tirupati Temple Executive Officer Dr AV Dharma Reddy said that TTD will build 1,342 Srivari temples across the state of Andhra Pradesh to promote Hinduism and prevent religious conversions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X