ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಸಿಗೆ ಮುನ್ನವೇ ಕುಲಾವಿ: ಅಮರಾವತಿಗೆ ವೈ ಎಸ್ ಜಗನ್ ಶಿಫ್ಟ್

|
Google Oneindia Kannada News

ಅಮರಾವತಿ, ಮೇ 15: ವಿಧಾನಸಭಾ ಚುನಾವಣೆಯಲ್ಲಿ ಖಚಿತ ಗೆಲುವಿನ ನಿರೀಕ್ಷೆಯೊಂದಿಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷ ತನ್ನ ಆಡಳಿತ ಕಚೇರಿಯನ್ನು ಹೈದರಾಬಾದ್ ನಿಂದ ಅಮರಾವತಿಗೆ ಸ್ಥಳಾಂತರ ಮಾಡುವ ಪ್ರಕ್ರಿಯೆ ಆರಂಭಿಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ತಾಡೇಪಲ್ಲಿ ಎನ್ನುವಲ್ಲಿ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ 'ಭವ್ಯ' ಬಂಗಲೆ ಕಮ್ ಕಚೇರಿಯಿಂದ ಪಕ್ಷ ಕಾರ್ಯನಿರ್ವಹಿಸಲಿದ್ದು, ಮೇ 22ರಿಂದ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರ ಪ್ರಕ್ರಿಯೆ ಮುಗಿಯಲಿದೆ.

ದಿನಾಂಕ ಘೋಷಣೆ ಬೆನ್ನಲ್ಲೇ ವೈಎಸ್ಆರ್ ಪಕ್ಷ ಸೇರಿದ ಖ್ಯಾತ ತೆಲುಗು ನಟದಿನಾಂಕ ಘೋಷಣೆ ಬೆನ್ನಲ್ಲೇ ವೈಎಸ್ಆರ್ ಪಕ್ಷ ಸೇರಿದ ಖ್ಯಾತ ತೆಲುಗು ನಟ

ಆದಾಗ್ಯೂ, ಹೈದಾರಾಬಾದಿನ ಲೋಟಸ್ ಪೌಂಡ್ ಕಚೇರಿಯನ್ನು ಮುಚ್ಚದೇ ಇರುವ ತೀರ್ಮಾನಕ್ಕೆ ಪಕ್ಷ ಬಂದಿದ್ದು, ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿದೆ. ಕಳೆದ ಫೆಬ್ರವರಿ 27ರಂದು ಹೊಸ ಕಟ್ಟಡ ಉದ್ಘಾಟನೆಗೊಂಡಿತ್ತು

 Confident of winning AP polls, Jagan moves Hyderabad office to Amaravati

ಮೇ 23ರ ಫಲಿತಾಂಶದ ದಿನದಂದು ವೈ ಎಸ್ ಜಗನ್ ಮೋಹನ್ ರೆಡ್ಡಿ ಪಕ್ಷದ ಕಾರ್ಯಕರ್ತರ ಜೊತೆಗೆ ಇಲ್ಲೇ ಇರಲಿದ್ದು, ಪಕ್ಷ 120ಕ್ಕೂ ಹೆಚ್ಚು ಸೀಟನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.

ಜಗನ್, ಕೆಸಿಆರ್ ಮೋದಿ ಅವರ ಮುದ್ದಿನ ನಾಯಿಗಳು: ಚಂದ್ರಬಾಬು ನಾಯ್ಡು ವಿವಾದ ಜಗನ್, ಕೆಸಿಆರ್ ಮೋದಿ ಅವರ ಮುದ್ದಿನ ನಾಯಿಗಳು: ಚಂದ್ರಬಾಬು ನಾಯ್ಡು ವಿವಾದ

ಏಪ್ರಿಲ್ ಹನ್ನೊಂದರಂದು ಆಂಧ್ರದ ಅಸೆಂಬ್ಲಿ ಮತ್ತು ಲೋಕಸಭೆಗೆ ಚುನಾವಣೆ ನಡೆದಿತ್ತು. ಮೇ 23ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ, ಹಾಗೆಯೇ ಜಗನ್ ಮುಖ್ಯಮಂತ್ರಿಯಾಗುವುದು ಕೂಡಾ ಅಷ್ಟೇ ಖಂಡಿತ, ಹಾಗಾಗಿ ನಮ್ಮ ಪಕ್ಷ ಅಮರಾವತಿಯಿಂದಲೇ ಕಾರ್ಯನಿರ್ವಹಿಸಲಿದೆ ಎಂದು ಪಕ್ಷದ ಹಿರಿಯ ಮುಖಂಡ ಎನ್ ರಾಮಕುಮಾರ್ ರೆಡ್ಡಿ ಹೇಳಿದ್ದಾರೆ.

English summary
Supremely confident of wresting power from the TDP in Andhra Pradesh, YSR Congress party president Y S Jaganmohan Reddy has decided to shift from Hyderabad to Amaravati, the new capital region, two days ahead of the declaration of results on May 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X