• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಘೋರ ಅವಾಂತರ: ಮೇಕೆ ಬಲಿ ಬದಲು ವ್ಯಕ್ತಿಯ ತಲೆ ಕಡಿದ ಕುಡುಕ

|
Google Oneindia Kannada News

ಚಿತ್ತೂರು (ಆಂಧ್ರಪ್ರದೇಶ), ಜನವರಿ 18: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸಂಕ್ರಾಂತಿ ಆಚರಣೆಯ ನಡುವೆ ಘೋರ ಅವಾಂತರ ಜರುಗಿದೆ. ಭಾನುವಾರ (ಜನವರಿ 16) ಸಂಕ್ರಾಂತಿ ಆಚರಣೆ ಸಂದರ್ಭದಲ್ಲಿ ಪ್ರಾಣಿಬಲಿ ಕೊಡುವುದು ರೂಢಿಯಿಂದ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಬಲಿಗಾಗಿ ಸಿದ್ಧವಿದ್ದ ಮೇಕೆ ಬದಲಿಗೆ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬನ ತಲೆ ಕಡಿದ ದುರ್ಘಟನೆ ವರದಿಯಾಗಿದೆ.

ಕುಡುಕ ವ್ಯಕ್ತಿಯೊಬ್ಬ ಬಲಿಕೊಡುವ ಮೇಕೆಯನ್ನು ಹಿಡಿದಿದ್ದ ವ್ಯಕ್ತಿಯ ಕುತ್ತಿಗೆಗೆ ಕತ್ತಿ ಹಾಕಿದ್ದಾನೆ. ಪೊಲೀಸರ ಪ್ರಕಾರ, ಅಮಲೇರಿದ ಸ್ಥಿತಿಯಲ್ಲಿದ್ದ ಆ ವ್ಯಕ್ತಿ ಮೇಕೆಯನ್ನು ಕಡಿಯಲು ಕತ್ತಿ ಎತ್ತಿದ್ದಾನೆ, ಆದರೆ, ಮೇಕೆ ಕುತ್ತಿಗೆ ಬದಲಿಗೆ ಪಕ್ಕದಲ್ಲಿದ್ದ ವ್ಯಕ್ತಿ ಕುತ್ತಿಗೆ ಕತ್ತರಿಸಿದ್ದಾನೆ. ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸುರೇಶ್ (35) ಅವರನ್ನು ಮದನಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಕುತ್ತಿಗೆಗೆ ಬಲವಾದ ಏಟು ಬಿದ್ದು, ರಕ್ತಸ್ರಾವವಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಗ್ರಾಮದ ಜನರು ಪ್ರತಿ ವರ್ಷ ಸಂಕ್ರಾಂತಿ ಆಚರಣೆಯ ಸಂದರ್ಭದಲ್ಲಿ ಪ್ರಾಣಿಗಳನ್ನು ಬಲಿ ನೀಡಿ ಗ್ರಾಮದೇವತೆ ಎಲ್ಲಮ್ಮ ತಾಯಿಗೆ ಅರ್ಪಿಸುತ್ತಾರೆ. ಸಂಕ್ರಾಂತಿ ವೇಳೆ ದೇವಸ್ಥಾನದಲ್ಲಿ ಪ್ರಾಣಬಲಿ ಸಾಮಾನ್ಯ ಸಂಗತಿಯಾಗಿದ್ದು, ಈ ಮುಂಚೆ ಈ ರೀತಿ ಯಾವುದೇ ಅವಘಡ ಸಂಭವಿಸಿರಲಿಲ್ಲ. ಮದನಪಲ್ಲಿ ಗ್ರಾಮಾಂತರ ಮಂಡಲದ ವಲಸಪಲ್ಲಿಯಲ್ಲಿ ಎಂಬಲ್ಲಿ ನಡೆಯುವ ಪ್ರಾಣಿ ಬಲಿ ಕಾರ್ಯಕ್ರಮದಲ್ಲಿ ಈ ದುರಂತ ಜರುಗಿದೆ.

ಪಾನಮತ್ತನಾಗಿದ್ದ ಚಲಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Amid Sankranti celebrations in Andhra Pradeshs Chittoor district on Sunday (January 16), a shocking incident saw a man holding a sacrificial goat get slaughtered instead of the animal by a drunk man performing the ritual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X