ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಮಿತೆಯ ಪ್ರತೀಕ ಚಂದ್ರಯಾನ-2: ಹೆಮ್ಮೆಯ ಕ್ಷಣಕ್ಕೆ ಗಣ್ಯರ ಅಭಿನಂದನೆ

|
Google Oneindia Kannada News

ಶ್ರೀಹರಿಕೋಟ, ಜುಲೈ 22: ಸರಿಯಾಗಿ ಗಂಟೆ ಮಧ್ಯಾಹ್ನ 2:43... ಸಹಸ್ರಾರು ಭಾರತೀಯರ ಉದ್ಗಾರದೊಂದಿಗೆ, ಜೈಕಾರದೊಂದಿಗೆ, ಅಸ್ಮಿತೆಯ ಹೆಗ್ಗುರುತಾಗಿ ಚಂದ್ರಯಾನ-2 ಉಡಾವಣೆಯಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಅವಿರತ ಶ್ರಮದ ಫಲವಾಗಿ ಬಾಹುಬಲಿ ಯಶಸ್ವಿಯಾಗಿ ಅಂಬರಕ್ಕೆ ಹಾರಿದ್ದಾನೆ.

ಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿ

ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಉಡಾವಣೆಯಾದ ಚಂದ್ರಯಾನ 2 ಇದುವರೆಗೂ ಯಾವ ದೇಶವೂ ಹೋಗಿರದ ಚಂದ್ರನ ಮೇಲ್ಮೈ ಗೆ ತೆರಳಿ ಅಧ್ಯಯನ ನಡೆಸಲಿದೆ. ಜುಲೈ 15 ರಂದೇ ಉಡಾವಣೆಯಾಗಬೇಕಿದ್ದ ಚಂದ್ರಯಾನ ಕೊನೆಯ ಕ್ಷಣದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಉಡಾವಣೆಯಾಗಿರಲಿಲ್ಲ.

ಆದರೆ ಇಂದು ಯಶಸ್ವಿಯಾಗಿ ಬಾಹುಬಲಿಯ ಉಡಾವಣೆಯಾಘಿದ್ದು, ಈ ಐತಿಹಾಸಿಕ ಕ್ಷಣವನ್ನು ಪ್ರ್ತಯಕ್ಷವಾಗಿ ಮತ್ತು ಟಿವಿ, ಫೋನ್, ವೆಬ್ ಸೈಟ್ ಮೂಲಕ ಕಣ್ತುಂಬಿಸಿಕೊಂಡ ಕೋಟ್ಯಂತರ ಜನ ಹೆಮ್ಮೆಯ ಇಸ್ರೋ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಚಂದ್ರಯಾನ-2: ಉದ್ದೇಶ ಹಾಗೂ ಉಪಯೋಗವೇನು? ಚಂದ್ರಯಾನ-2: ಉದ್ದೇಶ ಹಾಗೂ ಉಪಯೋಗವೇನು?

ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಕಚೇರಿಯಿಂದಲೇ ಈ ಕ್ಷಣದ ಲೈವ್ ಪ್ರಸಾರವನ್ನು ನೋಡಿ, ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಜೊತೆಗೆ ನೂರಾರು ನಾಯಕರು ಇಸ್ರೋದ ಈ ಪರಿಶ್ರಮವನ್ನು ಕೊಂಡಾಡಿ, ಶುಭ ಹಾರೈಸಿದ್ದಾರೆ.

ರಾಮನಾಥ್ ಕೋವಿಂದ್

ರಾಮನಾಥ್ ಕೋವಿಂದ್

"ಎಲ್ಲ ಭಾರತೀಯರಿಗೂ ಶ್ರೀಹರಿಕೋಟದಲ್ಲಿ ಉಡ್ಡಯನವಾದ ಚಂದ್ರಯಾನ-2 ಒಂದು ಹೆಮ್ಮೆಯ ಕ್ಷಣ. ಭಾರತದ ದೇಶೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ವಿಜ್ಞಾನಿಗಳಿಗೆ, ಇಂಜಿನಿಯರ್ ಗಳಿಗೆ ಅಭಿನಂದನೆಗಳು. ಇಸ್ರೋ ಮುಂದೆಯೂ ಇಂಥದೇ ಮೈಲಿಗಲ್ಲುಗಳನ್ನು ಸ್ಥಾಪಿಸಲಿ"- ರಾಮನಾಥ್ ಕೋವಿಂದ್, ರಾಷ್ಟ್ರಪತಿ

ನರೇಂದ್ರ ಮೋದಿ

ನರೇಂದ್ರ ಮೋದಿ

ನಮ್ಮ ವೈಭವಯುತ ಇತಿಹಾಸಕ್ಕೆ ಮತ್ತೊಂದು ಹೊಸ ಕ್ಷಣ ಸೇರ್ಪಡೆಯಾಗಿದೆ. ಚಂಮದ್ರಯಾನ 2, ನಮ್ಮ ವಿಜ್ಞಾನಿಗಳ ಪರಾಕ್ರಮ, ಪರಿಶ್ರಮ ಮತ್ತು ನೂರಾಮೂವತ್ತು ಕೋಟಿ ಭಾರತೀಯರ ಇಚ್ಛಾಶಕ್ತಿಯ ಸಂಕೇತವಾಗಿದೆ. ಇಂದು ಪ್ರತಿ ಭಾರತೀಯನೂ ಹೆಮ್ಮೆ ಪಟ್ಟಿದ್ದಾನೆ" -ನರೇಂದ್ರ ಮೋದಿ, ಪ್ರಧಾನಿ

ಸಚಿತ್ರ ಮಾಹಿತಿ: ಸಂಖ್ಯೆಗಳಲ್ಲಿ 'ಬಾಹುಬಲಿ' ರಾಕೆಟ್- ಚಂದ್ರಯಾನ-2 ಸಚಿತ್ರ ಮಾಹಿತಿ: ಸಂಖ್ಯೆಗಳಲ್ಲಿ 'ಬಾಹುಬಲಿ' ರಾಕೆಟ್- ಚಂದ್ರಯಾನ-2

ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್

"ಚಂದ್ರಯಾನ 2 ರ ಯಶಸ್ವೀ ಉಡ್ಡಯನದ ನಂತರ ಭಾರತವನ್ನು ಬಾಹ್ಯಾಕಾಶದ ಸೂಪರ್ ಪವರ್ ಅನ್ನಾಗಿ ಮಾಡಿದ ಇಸ್ರೋದ ವಿಜ್ಞಾನಿಗಳಿಗೆ ನನ್ನ ಅಭಿನಂದನೆಗಳು. ಈ ಮಿಶನ್ ಭಾರೀ ಯಶಸ್ಸು ಗಳಿಸಲಿ ಎಂಬುದು ನನ್ನ ಹಾರೈಕೆ" - ಸುಷ್ಮಾ ಸ್ವರಾಜ್, ಮಾಜಿ ವಿದೇಶಾಂಗ ಸಚಿವೆ

ರಂಣದೀಪ್ ಸುರ್ಜೇವಾಲಾ

ರಂಣದೀಪ್ ಸುರ್ಜೇವಾಲಾ

"ಚಂದ್ರಯಾನದ ಯಶಸ್ವೀ ಉಡ್ಡಯನದ ಮೂಲಕ ಭಾರತ ಕೀರ್ತಿ ಹೆಚ್ಚಿದೆ. ಭಾರತವನ್ನು ಮಹಾನ್ ದೇಶವನ್ನಾಗಿ ಮಾಡುವ ಇಂಥ ಕೆಲವು ಉಲ್ಲೇಖನೀಯ ಕ್ಷಣಗಳು ನಡೆಯುತ್ತವೆ. 130 ಭಾರತೀಯರು ಹೆಮ್ಮೆ ಪಡುವಂತೆ ಮಾಡಿ, ಅದಕ್ಕಾಗಿ ಹಗಲಿರುಳೂ ಶ್ರಮಿಸಿದ ಇಸ್ರೋದ ಎಲ್ಲ ಬಾಹ್ಯಾಕಾಶ ಇಂಜಿನಿಯರ್ ಗಳಿಗೆ ನನ್ನ ಅಭಿನಂದನೆಗಳು"- ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

"ಯಾವುದೇ ದೋಷವಿಲ್ಲದೆ ಚಂದ್ರಯಾನ 2 ಅನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ಭಾರತದ ದೇಶೀಯ ಮತ್ತು ಮಹತ್ವಾಕಾಂಕ್ಷಿ ಮೂನ್ ಮಿಶನ್ ಅನ್ನು ಉಡ್ಡಯನ ಮಾಡುವ ಮೂಲಕ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇಸ್ರೋ ಹೊಸ ಅಧ್ಯಾಯ ಬರೆದಿದೆ. ಭಾರತವಿ ತನ್ನ ವಿಜ್ಞಾನಿಗಳ ಬಗ್ಗೆ ಮತ್ತು ಇಸ್ರೋ ಬಗ್ಗೆ ಹೆಮ್ಮೆ ಹೊಂದಿದೆ"- ರಾಜನಾಥ್ ಸಿಂಗ್, ರಕ್ಷಣಾ ಸಚಿವ

English summary
The historic launch of Chandrayaan-2 from Sriharikota is a proud moment for all Indians. ISRO launched this moon mission on Monday 2:43 pm. Many leaders Congratualtes the scientists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X