• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಧಿಕಾರ ಹೋಯ್ತು, ಮನೆಯನ್ನೂ ಕಳೆದುಕೊಳ್ಳಲಿದ್ದಾರೆ ಚಂದ್ರಬಾಬು ನಾಯ್ಡು!

|
   ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಂಡ್ರು...ಈಗ ಮನೆ ಕೂಡ ಕಳೆದುಕೊಳ್ಳಬಹುದು | Oneindia Kannada

   ವಿಜಯವಾಡ, ಜೂನ್ 20: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಸದ್ಯದಲ್ಲೇ ತಮ್ಮ ಸುಂದರ ಮನೆಯನ್ನು ತೊರೆಯಬೇಕಾಗಬಹುದು!

   ಮಂಗಳಗಿರಿ ಕ್ಷೇತ್ರದ ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಶಾಸಕ ಅಲ್ಲಾ ರಾಮಕೃಷ್ಣ ರೆಡ್ಡಿ ಈ ವಿಷಯ ತಿಳಿಸಿದ್ದು, ಮಾಜಿ ಮುಖ್ಯಮಂತ್ರಿಗೆ ಇದು ಭಾರೀ ಆಘಾತವನ್ನುಂಟು ಮಾಡಿದೆ.

   ಚಂದ್ರಬಾಬು ನಾಯ್ಡುಗೆ ತೀವ್ರ ಹಿನ್ನಡೆ, ಬಿಜೆಪಿಯತ್ತ ಟಿಡಿಪಿ ಶಾಸಕರು!

   ಆಂಧ್ರಪ್ರದೇಶದ ರಾಜ್ಯ ರಾಜಧಾನಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ(APCRDA)ದ ಅಧ್ಯಕ್ಷರೂ ಆಗಿರುವ ರಾಮಕೃಷ್ಣ, ಚಂದ್ರಬಾಬು ನಾಯ್ಡು ಅವರು ಮನೆ ಕಟ್ಟಿರುವುದು ಅಕ್ರಮ ಜಾಗದಲ್ಲಾಗಿರುವುದರಿಂದ ಅವರು ಮನೆಯನ್ನು ಖಾಲಿ ಮಾಡಬೇಕಾಗುತ್ತದೆ ಎಂದಿದ್ದಾರೆ.

   ನಾಯ್ಡು ಅವರು ಮನೆ ಕಟ್ಟಿರುವುದು ನದಿ ದಂಡೆಯ ಪ್ರದೇಶದಲ್ಲಿ. ಇಂಥ ಜಾಗದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ. ಆದ್ದರಿಂದ ಅವರು ಮನೆ ಬಿತ್ತು ಬೇರೆಡೆಗೆ ಹೋಗುವುದ ಅನಿವಾರ್ಯ ಎಂದು ರಾಮಕೃಷ್ಣ ಹೇಳಿದ್ದಾರೆ.

   ಪತ್ರ ಬರೆದಿದ್ದ ನಾಯ್ಡು

   ಪತ್ರ ಬರೆದಿದ್ದ ನಾಯ್ಡು

   ಉಂಡವಳ್ಳಿ ಎಂಬಲ್ಲಿರುವ ತಮ್ಮ ಈ ನಿವಾಸವನ್ನು ಕೆಲ ದಿನಗಳ ಕಾಲ ಕಚೇರಿ ಕೆಲಸಕ್ಕೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಚಂದ್ರಬಾಬು ನಾಯ್ಡು ಪತ್ರ ಬರೆದಿದ್ದರು. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

   ಮನೆ ಖಾಲಿ ಮಾಡಲು ಸೂಚನೆ?

   ಮನೆ ಖಾಲಿ ಮಾಡಲು ಸೂಚನೆ?

   ಅಲ್ಲಾ ರಾಮಕೃಷ್ಣ ರೆಡ್ಡಿ APCRDA ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಚಂದ್ರಬಾಬು ನಾಯ್ಡು ಅವರು ಮನೆ ಖಾಲಿ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕವಾಗಿಯೇ ಘೋಷಿಸಿದ್ದಾರೆ. ಅಕ್ರಮವಾಗಿ ಕಟ್ಟಲಾದ ಎಲ್ಲ ಕಟ್ಟಡಗಳನ್ನು ಖಾಲಿ ಮಾಡಿಸಲಾಗುವುದು ಮತ್ತು ಅದನ್ನು ನೆಲಸಮ ಮಾಡಲಾಗುವುದು. ಅದು ಯಾರದೇ ಮನೆಯಾಗಿರಲಿ ಎಂದು ರೆಡ್ಡಿ ಹೇಳಿದ್ದಾರೆ!

   ವಿಜಯವಾಡ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಜೊತೆ ನಡೆದಿದ್ದೇನು?

   ಅಕ್ರಮ ಕಟ್ಟಡದಲ್ಲಿ ವಾಸ

   ಅಕ್ರಮ ಕಟ್ಟಡದಲ್ಲಿ ವಾಸ

   ಅಕ್ರಮ ಕಟ್ಟಡದಲ್ಲಿ ವಾಸಿಸುತ್ತಿದ್ದ ಚಂದ್ರಬಾಬು ನಾಯ್ಡು ಅವರು ರಾಜಧಾನಿ ಅಮರಾವತಿಯನ್ನು ಕಟ್ಟಲು ಹೊರಟಿದ್ದರು! ಅಮರಾವತಿ ಕಟ್ಟಲು ಹೊರಟಿದ್ದ ಚಂದ್ರಬಾಬು ನಾಯ್ಡು ಅವರಿಗೆ ಅಮರಾವತಿಯಲ್ಲೇ ಸ್ವಂತ ಮನೆಯಿರಲಿಲ್ಲ. ಆದರೆ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅಮರಾವತಿಯ ತಡೆಪಳ್ಳಿಯಲ್ಲಿ ಮನೆಯನ್ನು ಹೊಂದಿದ್ದಾರೆ ಎಂದು ರಾಮಕೃಷ್ಣ ರೆಡ್ಡಿ ಟೀಕಿಸಿದ್ದಾರೆ.

   ಕೋರ್ಟ್ ಮೆಟ್ಟಿಲೇರುತ್ತೇನೆ ಎಂದ ಟಿಡಿಪಿ

   ಕೋರ್ಟ್ ಮೆಟ್ಟಿಲೇರುತ್ತೇನೆ ಎಂದ ಟಿಡಿಪಿ

   ಈ ಕುರಿತು ಪ್ರತಿಕ್ರಿಯೆ ನೀಡಿದ ಟಿಡಿಪಿ ವಕ್ತಾರ ದಿನಕರನ್ ಲಂಕಾ, "ಸರ್ಕಾರವೇನಾದರೂ ಒತ್ತಾಯಪೂರ್ವಕವಾಗಿ ಮಾಜಿ ಮುಖ್ಯಮಂತ್ರಿ ನಾಯ್ಡು ಅವರನ್ನು ಮನೆಯಿಂದ ಆಚೆ ಹಾಕಲು ಪ್ರಯತ್ನಿಸಿದ್ದೇ ಆದರೆ, ನಾವು ಕಾನೂನಿನ ಹಾದಿ ಹಿಡಿಯಬೇಕಾಗುತ್ತದೆ, ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ" ಎಂದಿದ್ದಾರೆ.

   ನದಿ ತಟದಲ್ಲಿ ಸುಸಜ್ಜಿತ ಮನೆ

   ನದಿ ತಟದಲ್ಲಿ ಸುಸಜ್ಜಿತ ಮನೆ

   ನದಿತಟದಲ್ಲಿರುವ ಸುಸಜ್ಜಿತ ಬಂಗಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಂದ್ರಬಾಬು ನಾಯ್ಡು ವಾಸವಿದ್ದಾರೆ. ಹೈದರಾಬಾದಿನಿಂದ ವಿಜಯವಾಡಕ್ಕೆ ರಾಜ್ಯ ಆಡಳಿತ ಕೇಂದ್ರ ಬದಲಾದ ಲಾಗಾಯ್ತೂ ಅವರು ಅಲ್ಲಿಯೇ ವಾಸವಿದ್ದಾರೆ. ಈ ಮನೆ ಓರ್ವ ಖಾಸಗಿ ವ್ಯಕ್ತಿಯದ್ದಾಗಿದ್ದು, ಹಿಂದಿನ ಸರ್ಕಾರ ಇದನ್ನು ಲೀಸಿಗೆ ತೆಗೆದುಕೊಂಡಿತ್ತು. ಇದನ್ನೇ ಚಂದ್ರಬಾಬು ನಾಯ್ಡು ಅವರ ಗೃಹಕಚೇರಿಯನ್ನಾಗಿ ಮಾಡಲಾಗಿತ್ತು. 'ಪ್ರಜಾ ವೇದಿಕಾ' ಎಂಬ ಮೀಟೀಂಗ್ ಹಾಲ್ ಅನ್ನೂ ಚಂದ್ರಬಾಬು ನಾಯ್ಡು ಇಲ್ಲಿ ಕಟ್ಟಿಕೊಂಡಿದ್ದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   The building where Andhra Pradesh's former CM Chandrababu Naidu has been staying is illegal as it was constructed in river bed, said YSRCP MLA Alla Ramakrishna Reddy. He also said, Naidu will be evicted from house.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more