ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಘಟಬಂಧನ ಪರ್ವಕ್ಕೆ ನಾಯ್ಡು ಮುಂದಾಳತ್ವ! ಇಂದು ಮಹತ್ವದ ಸಭೆ

|
Google Oneindia Kannada News

ಈಗಾಗಲೇ ಎನ್ ಡಿಎಯೇತರ ಪಕ್ಷಗಳನ್ನು ಒಗ್ಗೂಡಿಸಿ ಮಹಾಘಟಬಂಧನ ನಿರ್ಮಿಸುವಲ್ಲಿ ಸಾಕಷ್ಟು ಓಡಾಟ ನಡೆಸುತ್ತಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಇಂದು(ಮೇ 18) ಮಹತ್ವದ ಸಭೆ ನಡೆಸಲಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ನಂತರ ಉತ್ತರ ಪ್ರದೇಶದ ಲಕ್ನೋಕ್ಕೆ ತೆರಳಿ ಅಲ್ಲಿ ಎಸ್ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ನಾಯ್ಡು ಭೇಟಿ ಮಾಡಲಿದ್ದಾರೆ.

ಆಂಧ್ರದ ಐದು ಮತಗಟ್ಟೆಗಳಲ್ಲಿ ಮರುಮತದಾನ, ನಾಯ್ಡು ಕೆಂಡಾಮಂಡಲ!ಆಂಧ್ರದ ಐದು ಮತಗಟ್ಟೆಗಳಲ್ಲಿ ಮರುಮತದಾನ, ನಾಯ್ಡು ಕೆಂಡಾಮಂಡಲ!

Chandrababu Naidu to meet Rahul Gandhi, Mayawati and Akhilesh Yadav today

ಅಷ್ಟೇ ಅಲ್ಲ, ತೆಲುಗು ದೇಶಂ ಪಕ್ಷದ ನಾಯಕ ನಾಯ್ಡೂ ಅವರು ಎನ್ ಸಿಪಿ ಮುಖಂಡ ಶರದ್ ಪವಾರ್, ಸಿಪಿಐ ಮುಖಂಡ ಸುರವರಂ ಸುಧಾಕರ್ ರೆಡ್ಡಿ, ಎಲ್ ಜೆಡಿ ನಾಯಕ ಶರದ್ ಯಾದವ್ ಅವರನ್ನೂ ನಾಯ್ಡು ಭೇಟಿ ಮಾಡಲಿದ್ದಾರೆ.

ಅಖಾಡಕ್ಕಿಳಿದ ನಾಯ್ಡು, ದೇಶದ ರಾಜಕೀಯದಲ್ಲಿನ್ನು ಮಿಂಚಿನ ಸಂಚಾರ!ಅಖಾಡಕ್ಕಿಳಿದ ನಾಯ್ಡು, ದೇಶದ ರಾಜಕೀಯದಲ್ಲಿನ್ನು ಮಿಂಚಿನ ಸಂಚಾರ!

ಈಗಾಗಲೇ ವಿವಿಪ್ಯಾಟ್ ಕುರಿತು ತಗಾದೆ ತೆಗೆದಿರುವ ಚಂದ್ರಬಾಬು ನಾಯ್ಡು ಅ ವರು, ಆಂಧ್ರಪ್ರದೇಶದ ಐದು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶ ನೀಡಿರುವ ಚುನಾವಣಾ ಆಯೋಗದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈಗಾಗಲೇ ಸಿತಾರಾಮ್ ಯೆಚೂರಿ ಅವರನ್ನು ನಾಯ್ಡು ಭೇಟಿ ಮಾಡಿದ್ದು, ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮೇ 19 ರಂದು ಏಳೂ ಹಂತದ ಲೋಕಸಭೆ ಚುನಾವಣೆ ಮುಕ್ತಾಯವಾಗಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Lok Sabha Elections 2019: Andhra Pradesh chief minister N Chandrababu Naidu on Saturday will meet Congress president Rahul Gandhi and later SP and BSP leaders Akhilesh Yadav and Mayawati respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X