ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲು ಹಗರಣ: ಅದಾನಿ ಸಂಸ್ಥೆ ವಿರುದ್ಧ ಕ್ರಿಮಿನಲ್ ಕೇಸ್

|
Google Oneindia Kannada News

ನವದೆಹಲಿ/ಅಮರಾವರಿ, ಜನವರಿ 17: ಆಂಧ್ರಪ್ರದೇಶದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಪೂರೈಸಲು ಕಂಪನಿಗಳ ಆಯ್ಕೆಗೆ ಕರೆದ ಟೆಂಡರ್ ನಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತಂತೆ ತನಿಖೆ ನಡೆಸಿರುವ ಸಿಬಿಐ, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ನ್ಯಾಷನಲ್ ಕೋ ಅಪರೇಟಿವ್ ಕನ್‌ಸ್ಯೂಮರ್ ಫೆಡರೇಷನ್ (ಎನ್‌ಸಿಸಿಎಫ್) ಮಾಜಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು, ಎಫ್‌ಐಆರ್ ಹಾಕಿದ್ದಾರೆ.

ಎನ್‌ಸಿಸಿಎಫ್ ಹಾಗೂ ಅದಾನಿ ಸಂಸ್ಥೆ ಮಾಜಿ ಅಧ್ಯಕ್ಷ ವೀರೇಂದ್ರ ಸಿಂಗ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ. ಪಿ ಗುಪ್ತಾ, ಮಾಜಿ ಹಿರಿಯ ಸಲಹೆಗಾರ ಎಸ್. ಸಿ ಸಿಂಘಾಲ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆಫೆ ಕಾಫಿ ಡೇ ಅಂಗ ಸಂಸ್ಥೆ ಕೊಳ್ಳಲು ಮುಂದಾದ ಜಿಂದಾಲ್, ಅದಾನಿಕೆಫೆ ಕಾಫಿ ಡೇ ಅಂಗ ಸಂಸ್ಥೆ ಕೊಳ್ಳಲು ಮುಂದಾದ ಜಿಂದಾಲ್, ಅದಾನಿ

ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ಬಿಡ್ಡರ್‌ಗಳ ಆಯ್ಕೆಯ ವಿಧಾನದಲ್ಲಿ ಮಾರ್ಪಾಡು ಮಾಡುವ ಮೂಲಕ ಆರೋಪಿಗಳಿಗೆ ಅನುಕೂಲವಾಗುಂತೆ ನೋಡಿಕೊಳ್ಳಲಾಗಿದೆ.ಅನರ್ಹತೆ ಹೊರತಾಗಿಯೂ ಅಹಮದಾಬಾದ್ ಮೂಲದ ಅದಾನಿ ಸಂಸ್ಥೆಯಿಂದ ಆಮದು ಕಲ್ಲಿದ್ದಲನ್ನು ಆಂಧ್ರಪ್ರದೇಶ ಪವರ್ ಜನರೇಷನ್ ಕಾರ್ಪ್ ಲಿಮಿಟೆಡ್(ಎಪಿಜಿಇಎನ್‌ಸಿಒ) ಕಂಪನಿಗೆ ಪೂರೈಸಲು ಗುತ್ತಿಗೆ ನೀಡಲಾಗಿದೆ" ಎಂದು ಆರೋಪಿಸಲಾಗಿದೆ.

CBI files criminal case against Adani Enterprises

ಮೋದಿ, ಅಂಬಾನಿ-ಅದಾನಿಯ ಬಿಜಿನೆಸ್ ಮ್ಯಾನೇಜರ್: ಸಿಧು ಟೀಕೆ ಮೋದಿ, ಅಂಬಾನಿ-ಅದಾನಿಯ ಬಿಜಿನೆಸ್ ಮ್ಯಾನೇಜರ್: ಸಿಧು ಟೀಕೆ

ವಿಜಯವಾಡದ ನಾರ್ಲಾ ತಾತ ರಾವ್ ಥರ್ಮಲ್ ಪವರ್ ಪ್ಲಾಂಟ್ ಮತ್ತು ಕಡಪದಲ್ಲಿರುವ ರಾಯಲಸೀಮಾ ಥರ್ಮಲ್ ಪವರ್ ಪ್ಲಾಂಟ್‌ಗೆ 600, 000 ಟನ್ ಕಲ್ಲಿದ್ದಲು ಪೂರೈಕೆಗೆ 2010ರಲ್ಲಿ ಒಪ್ಪಂದ ಇದಾಗಿದೆ. ಕಲ್ಲಿದ್ದಲು ಪೂರೈಕೆಗೆ ಸಂಬಂಧಿಸಿದಂತೆ ಎಲ್ಲ ವಿಧಿವಿಧಾನ ಹಾಗೂ ಕಾನೂನುಗಳನ್ನು ಪಾಲಿಸಲಾಗಿದೆ" ಎಂದು ಅದಾನಿ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

English summary
The Central Bureau of Investigation (CBI) has filed a criminal case against Adani Enterprises Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X