ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಕಾರ್ಡ್ ನಲ್ಲಿ ಜಾತಿ ಗೊಂದಲ; ಮದುವೆಯೇ ರದ್ದುಗೊಳಿಸಿದ ವರ

|
Google Oneindia Kannada News

ಗುಂಟೂರು (ಆಂಧ್ರಪ್ರದೇಶ), ಜೂನ್ 25: ವಧುವಿನ ಜಾತಿಯ ಬಗ್ಗೆ ಅನುಮಾನಗೊಂಡು ಕೊನೆ ಕ್ಷಣದಲ್ಲಿ ಮದುವೆಯನ್ನು ರದ್ದು ಮಾಡಿದ ಘಟನೆ ಭಾನುವಾರ ರಾತ್ರಿ ಪೆದಕಾಕನಿಯಲ್ಲಿ ನಡೆದಿದೆ. ಆ ನಂತರ ವಧುವಿನ ಕಡೆಯವರು ಕ್ರೊಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಸರಿಯಾದ ಕಾರಣ ನೀಡದೆ ಹುಡುಗನ ಕಡೆಯವರು ಮದುವೆ ರದ್ದು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ: ಪೆದಕಾಕನಿಯಲ್ಲಿರುವ ಭ್ರಮರಾಂಭ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮದುವೆ ನಿಗದಿ ಆಗಿತ್ತು. ದೇವಾಲಯದ ನೋಂದಣಿ ಪುಸ್ತಕದಲ್ಲಿ ಮಾಹಿತಿ ದಾಖಲಿಸುವ ಸಲುವಾಗಿ ಗಂಡು ಹಾಗೂ ಹೆಣ್ಣಿನ ಕಡೆಯವರಿಂದ ಆಧಾರ್ ಕಾರ್ಡ್ ಅನ್ನು ಪುರೋಹಿತರು ಕೇಳಿದ್ದಾರೆ.

ಇನ್ನೇನು ತಾಳಿ ಕಟ್ಟಬೇಕು ಅನ್ನವಷ್ಟರಲ್ಲಿ ಪ್ರಿಯಕರನ ಎಂಟ್ರಿ, ಮುಂದೇನಾಯ್ತು?ಇನ್ನೇನು ತಾಳಿ ಕಟ್ಟಬೇಕು ಅನ್ನವಷ್ಟರಲ್ಲಿ ಪ್ರಿಯಕರನ ಎಂಟ್ರಿ, ಮುಂದೇನಾಯ್ತು?

ಆಧಾರ್ ನಲ್ಲಿ ವಧುವಿನ ಹೆಸರು ಶಾರದಾ ಹಾಗೂ ಆಕೆಯ ತಂದೆ ಹೆಸರು ಪಿಡುಗು ಆಂಜನೇಯಲು ಎಂದು ದಾಖಲಾಗಿದೆ. ಅದರಲ್ಲಿ ರೆಡ್ಡಿ ಎಂದು ನಮೂದಾಗಿರಲಿಲ್ಲ. ಏಕೆಂದರೆ, ತಾವು ಆ ಜಾತಿಗೆ ಸೇರಿದವರು ಎಂದು ಹುಡುಗಿಯ ಕಡೆಯವರು ತಿಳಿಸಿದ್ದರು.

Caste not mentioned in Aadhaar; bridegroom call off the marriage

ಪುರೋಹಿತರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹುಡುಗನ ಕಡೆಯವರು ಈ ಬಗ್ಗೆ ಮತ್ತಷ್ಟು ಅನುಮಾನ ವ್ಯಕ್ತಪಡಿಸಿದಾಗ ಜಗಳ ಏರ್ಪಟ್ಟಿದೆ. ವರ ವೆಂಕಟರೆಡ್ಡಿ ಮತ್ತು ಆತನ ತಂದೆ ಮುನ್ನಗಿ ಅಪ್ಪಿ ರೆಡ್ಡಿ, ಸತ್ತೇನಪಲ್ಲಿ ಮಂಡಲದ ಗುಡಿಪಾಡು ಹಳ್ಳಿಯವರು ಮದುವೆಯನ್ನು ರದ್ದು ಮಾಡಿದ್ದಾರೆ.

ಆದರೆ, ಗದೇವಾರಿಪಲ್ಲಿಯ ಪಿಡುಗು ಆಂಜನೇಯಲು ಹೇಳುವ ಪ್ರಕಾರ, ತಾವು ಪಿಚಿಕುಂಟ ರೆಡ್ಡಿ ಸಮುದಾಯಕ್ಕೆ ಸೇರಿದವರಾದರೂ ಹೆಸರಿನ ಜತೆಗೆ ರೆಡ್ಡಿ ಎಂದು ಸೇರಿಸುವ ಪರಿಪಾಠ ಇಲ್ಲ. ಆದರೆ ಹುಡುಗನ ಕಡೆಯವರು ಈ ಉತ್ತರಕ್ಕೆ ತೃಪ್ತರಾಗದೆ, ಮದುವೆಯನ್ನೇ ರದ್ದು ಮಾಡಿದ್ದಾರೆ.

English summary
Due to caste not mentioned in Aadhaar card, bridegroom call off the marriage in Guntur, Andhra Pradesh. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X