ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋದಾವರಿ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 7 ಮಂದಿ ಸಾವು

|
Google Oneindia Kannada News

ವಿಜಯವಾಡ, ಸೆಪ್ಟೆಂಬರ್ 15: ದೋಣಿ ಮುಳುಗಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ ಘಟನೆ ಭಾನುವಾರ ಮಧ್ಯಾಹ್ನ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ನಡೆದಿದೆ. ಈ ದೋಣಿಯಲ್ಲಿ 50 ಪ್ರಯಾಣಿಕರು ಹಾಗೂ 11 ಮಂದಿ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.

"ನಾವು ಈ ವರೆಗೆ ಏಳು ಶವಗಳನ್ನು ತೆಗೆದಿದ್ದೇವೆ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ" ಎಂದು ಎಎಸ್ ಪಿ ರಾಹುಲ್ ದೇವ್ ಸಿಂಗ್ ಹೇಳಿದ್ದಾರೆ. ದೋಣಿಯು ಹೆಸರಾಂತ ಪ್ರವಾಸಿ ತಾಣ ಪಾಪಿಕೊಂಡಾಲು ಕಡೆಗೆ ಸಾಗುತ್ತಿತ್ತು. ಈ ವೇಳೆ ಅನಾಹುತ ಸಂಭವಿಸಿದೆ.

ಕೇರಳಕ್ಕೆ ಕಯಾಕಿಂಗ್ ಹೋಗಿದ್ದ ಇಬ್ಬರು ನದಿ ಪ್ರವಾಹಕ್ಕೆ ಸಿಲುಕಿ ಸಾವುಕೇರಳಕ್ಕೆ ಕಯಾಕಿಂಗ್ ಹೋಗಿದ್ದ ಇಬ್ಬರು ನದಿ ಪ್ರವಾಹಕ್ಕೆ ಸಿಲುಕಿ ಸಾವು

ಪ್ರಾಥಮಿಕ ವರದಿಗಳ ಪ್ರಕಾರ, ಪ್ರವಾಸಿಗರ ಪೈಕಿ ಬಹುತೇಕರು ಜೀವರಕ್ಷಕ ಜಾಕೆಟ್ ಧರಿಸಿದ್ದರು. ಸ್ಥಳೀಯರು 14 ಪ್ರವಾಸಿಗರನ್ನು ರಕ್ಷಿಸಿದ್ದಾರೆ. ನದಿಯಲ್ಲಿ ವಿಪರೀತ ನೀರು ಇದ್ದುದರಿಂದ ಪಾಪಿಕೊಂಡಾಲು ದೋಣಿ ಸೇವೆಯನ್ನು ನಿಲ್ಲಿಸಲಾಗಿತ್ತು. ಒಳಹರಿವು ಕಡಿಮೆ ಆಗಿತ್ತು ಎಂಬ ಕಾರಣಕ್ಕೆ ಮತ್ತೆ ಶುರು ಮಾಡಲಾಗಿತ್ತು. ಸದ್ಯಕ್ಕೆ ಗೋದಾವರಿ ನದಿಯಲ್ಲಿ ಐದು ಲಕ್ಷ ಕ್ಯೂಸೆಕ್ ಒಳಹರಿವಿದೆ.

Boat Capsizes In Godavari River, At Least 7 People Dead

ವರದಿಗಳ ಪ್ರಕಾರ, ಗಂದಿ ಪೋಚಮ್ಮ ದೇವಾಲಯದಿಂದ ಪ್ರಯಾಣ ಆರಂಭ ಆಗಿತ್ತು. ಕಚಲೂರು ಮಂಡ ಹಳ್ಳಿ ಬಳಿ ದೋಣಿ ಮುಳುಗಿದೆ. ಕೆಲವು ಪ್ರವಾಸಿಗರು ಈಜಿಕೊಂಡು ತುಟುಕುಂಟ ಹಳ್ಳಿ ಬಳಿ ಬದಿದ್ದಾರೆ. ಮತ್ತೊಂದು ಬದಿಯಲ್ಲಿ ಹಳ್ಳಿಗರು 14 ಮಂದಿಯನ್ನು ರಕ್ಷಿಸಿದ್ದಾರೆ.

Boat Capsizes In Godavari River, At Least 7 People Dead

ಸ್ನೇಹಿತನ ಕಾಪಾಡಲು ಹೋಗಿ ಅಮೆರಿಕದಲ್ಲಿ ಸಾವನ್ನಪ್ಪಿದ ಸಿಂಧನೂರು ಯುವಕ

ಇನ್ನು ದೋಣಿ ನಡೆಸುವವರು ನೀಡಿ ಮಾಹಿತಿ ಪ್ರಕಾರ, ದೋಣಿಯಲ್ಲಿ 90 ಮಂದಿ ಪ್ರಯಾಣಿಸಬಹುದಿತ್ತು ಹಾಗೂ ಅದರಲ್ಲಿ 150 ಜೀವರಕ್ಷಕ ಜಾಕೆಟ್ ಗಳಿದ್ದವು. ಇನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಜಿಲ್ಲಾ ಅಧಿಕಾರಿಗಳ ಜತೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವೇಗವಾಗಿ ಮಾಡಲು ಸೂಚಿಸಿದ್ದಾರೆ. ಪ್ರವಾಸೋದ್ಯಮ ಸಚಿವರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.

English summary
Boat capsizes in Godavari river, Andhra Pradesh. At least 7 people dead, many missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X