• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನಾಚಿಕೆ ಆಗಲ್ವಾ ಆಂಧ್ರಕ್ಕೆ ಬರೋಕೆ?' ಮೋದಿಗೆ ನಾಯ್ಡು ಪ್ರಶ್ನೆ!

|

ಅಮರಾವತಿ, ಮಾರ್ಚ್ 01: "ಬರಿಗೈಯಲ್ಲಿ ಆಂಧ್ರಕ್ಕೆ ಬರೋಕೆ ನಾಚಿಕೆ ಆಗಲ್ವಾ?" ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಪತ್ರ ಬರೆದಿದ್ದಾರೆ.

ಶುಕ್ರವಾರ ಮೋದಿ ಅವರು ವಿಶಾಖಾಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪತ್ರವೊಂದನ್ನು ಬರೆದಿರುವ ನಾಯ್ಡು, ಐದು ವರ್ಷಗಳ ಹಿಂದೆ, ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಸಮಯದಲ್ಲಿ ನೀಡಿದ ಯಾವ ಭರವಸೆಯನ್ನೂ ನೀವು ಈಡೇರಿಸಲಿಲ್ಲ ಎಂದು ದೂರಿದ್ದಾರೆ.

ಈ ಬಾರಿ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡುಗೆ ಭಾರೀ ಮುಖಭಂಗ?

"ನಾನೇ ಖುದ್ದಾಗಿ ನವದೆಹಲಿಗೆ 29 ಬಾರಿ ಆಗಮಿಸಿದ್ದೇನೆ. ನಿಮ್ಮ ಬಳಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆಯೂ ಚರ್ಚಿಸಿದ್ದೇನೆ. ಆದರೆ ನೀವು ಇದುವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ" ಎಂಡು ನಾಯ್ಡು ಆರೋಪಿಸಿದರು.

ಮೋದಿಗಿಂತ ಅರವಿಂದ್ ಕೇಜ್ರಿವಾಲ್ ಉತ್ತಮ ಪ್ರಧಾನಿಯಾಗಬಲ್ಲರು: ನಾಯ್ಡು

"ನಿಮ್ಮ ವಿಶಾಖಾಪಟ್ಟಣ ಭೇತಿಯ ಸಮಯದಲ್ಲಿ ಇಲ್ಲಿನ ಐದು ಕೋಟಿ ಜನ ನಿಮ್ಮ ಬಗ್ಗೆ ಎಷ್ಟು ಕೋಪ ಹೊಂದಿದ್ದಾರೆ ಎಂಬುದನ್ನು ನೀವೇ ನೋಡುತ್ತೀರಿ. ನಿಮಗೆ ಜನರ ಭಾವನೆಗಳು ಅರ್ಥವಾಗುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಜನರಿಗೆ ಮೋಸ ಮಾಡುತ್ತಿದ್ದೀರಿ" ಎಂದು ನಾಯ್ಡು ಪತ್ರದಲ್ಲಿ ಬರೆದಿದ್ದಾರೆ.

English summary
Andhra Pradesh Chief Minister N Chandrababu Naidu on Thursday asked Prime Minister Narendra Modi if he was not ashamed to visit the state with ''empty hands'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X