ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದಿಂದ ಕರ್ನಾಟಕಕ್ಕೆ ಬರಲಿದೆ ಎಪಿಎಸ್ಆರ್‌ಟಿಸಿ ಬಸ್

|
Google Oneindia Kannada News

ಅಮರಾವತಿ, ಜೂನ್ 15 : ಆಂಧ್ರಪ್ರದೇಶ ಸರ್ಕಾರ ಜೂನ್ 17ರಿಂದ ಕರ್ನಾಟಕಕ್ಕೆ ಅಂತರರಾಜ್ಯ ಬಸ್ ಸೇವೆಯನ್ನು ಆರಂಭಿಸಲಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಬಸ್ ಸಂಚಾರ ರದ್ದುಗೊಂಡಿತ್ತು. ಮೊದಲ ಹಂತದಲ್ಲಿ 168 ಬಸ್‌ಗಳು ಸಂಚಾರ ನಡೆಸಲಿವೆ.

ಜೂನ್ 17ರ ಬುಧವಾರದಿಂದ ಕರ್ನಾಟಕಕ್ಕೆ ಬಸ್ ಸೇವೆ ಆರಂಭಿಸಲಾಗುತ್ತದೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ಕರ್ನೂಲ್, ಚಿತ್ತೂರು, ಅನಂತಪುರ ಸೇರಿದಂತೆ ಜಿಲ್ಲಾ ಕೇಂದ್ರಗಳಿಂದ ಬಸ್ ಸಂಚಾರ ಆರಂಭವಾಗಲಿದೆ.

ವಿಆರ್‌ಎಸ್ ಯೋಜನೆ ಪ್ರಕಟಿಸಿದ ಕೆಎಸ್ಆರ್‌ಟಿಸಿವಿಆರ್‌ಎಸ್ ಯೋಜನೆ ಪ್ರಕಟಿಸಿದ ಕೆಎಸ್ಆರ್‌ಟಿಸಿ

ಒಟ್ಟು 4 ಹಂತದಲ್ಲಿ 500 ಬಸ್‌ಗಳ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಎಪಿಎಸ್‌ಆರ್‌ಟಿಸಿ ಹೇಳಿದೆ. ಬುಧವಾರ 168 ಬಸ್‌ಗಳು ಸಂಚಾರವನ್ನು ಆರಂಭಿಸಲಿವೆ. ಸೋಮವಾರದಿಂದಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.

ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ಕೊಟ್ಟ ಕೆಎಸ್ಆರ್‌ಟಿಸಿಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ಕೊಟ್ಟ ಕೆಎಸ್ಆರ್‌ಟಿಸಿ

APSRTC To Resume Bus Service To Karnataka From June 17

ಮೂರು ಜಿಲ್ಲೆಗಳಿಂದ ಸಂಚಾರ ನಡೆಸುವ ಬಸ್‌ಗಳಿಗೆ ಪ್ರಯಾಣಿಕರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ? ಎಂಬುದನ್ನು ಪರಿಶೀಲಿಸಲಾಗುತ್ತದೆ. ಬಳಿಕ ನೆಲ್ಲೂರು, ಕಡಪ, ಪ್ರಕಾಶಂ, ಕೃಷ್ಣ, ಗಂಟೂರು, ಪಶ್ಚಿಮ ಗೋದಾವರಿಯಿಂದ ಬಸ್ ಸಂಚಾರ ಆರಂಭಿಸಲಾಗುತ್ತದೆ.

ಕರ್ನಾಟಕ; ಸರ್ಕಾರಿ ಬಸ್‌ ಸಂಚಾರಕ್ಕೆ ಹೆಚ್ಚಿದ ಬೇಡಿಕೆಕರ್ನಾಟಕ; ಸರ್ಕಾರಿ ಬಸ್‌ ಸಂಚಾರಕ್ಕೆ ಹೆಚ್ಚಿದ ಬೇಡಿಕೆ

ಬಸ್ ಸಂಚಾರ ಆರಂಭಿಸುವಾಗ ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲನೆ ಮಾಡಲಾಗುತ್ತದೆ. ಕರ್ನಾಟಕದಿಂದ ರಾಜ್ಯಕ್ಕೆ ಆಗಮಿಸುವ ಶೇ 5ರಷ್ಟು ಪ್ರಯಾಣಿಕರ ಸ್ಯಾಂಪಲ್ ಸಂಗ್ರಹಣೆ ಮಾಡಿ ಕೋವಿಡ್ - 19 ಪರೀಕ್ಷೆ ನಡೆಸಲಾಗುತ್ತದೆ.

ಆಂಧ್ರಪ್ರದೇಶ ಸರ್ಕಾರ ತೆಲಂಗಾಣ ರಾಜಧಾನಿ ಹೈದರಾಬಾದ್, ತಮಿಳುನಾಡು ರಾಜಧಾನಿ ಚೆನ್ನೈಗೆ ಬಸ್ ಸಂಚಾರ ಆರಂಭಿಸಲು ಅಲ್ಲಿನ ರಾಜ್ಯ ಸರ್ಕಾರಗಳ ಅನುಮತಿ ಕೇಳಿದೆ. ಬಸ್‌ನಲ್ಲಿ ಸಂಚಾರ ನಡೆಸುವವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಬಸ್ ಹತ್ತುವಾಗ ಮತ್ತು ಇಳಿಯುವಾಗ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಲು ಬಸ್‌ಗಳ ಸೀಟುಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಎಪಿಎಸ್‌ಆರ್‌ಟಿಸಿ ಹೇಳಿದೆ.

English summary
Andhra Pradesh State Road Transport Corporation said that it will resume bus services to Karnataka from June 17, 2020. 168 bus will run between interstate from Kurnool, Chittoor and Anantapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X