ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಚಿಕ್ಕಪ್ಪನ ಸಾವಿನ ಪ್ರಕರಣ ಸಿಬಿಐ ತನಿಖೆಗೆ: ಹೈಕೋರ್ಟ್

|
Google Oneindia Kannada News

ವಿಜಯವಾಡ, ಮಾರ್ಚ್ 12: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿ ಅವರ ಕಿರಿಯ ಸೋದರ, ಮಾಜಿ ಸಚಿವ ವೈ.ಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣವನ್ನು ಸಿಬಿಐ ನಡೆಸಲು ಆಂಧ್ರಪ್ರದೇಶ ಹೈಕೋರ್ಟ್ ಆದೇಶಿಸಿದೆ

Recommended Video

ಬ್ಯಾಂಕ್ ನಲ್ಲಿಟ್ಟಿದ್ದ ಹಣವನ್ನು ವಾಪಸ್ ಪಡೆದಿದ್ದ TTD

ಜಸ್ಟೀಸ್ ಯು ದುರ್ಗಾಪ್ರಸಾದ್ ರಾವ್ ಅವರಿದ್ದ ನ್ಯಾಯಪೀಠವು ಬುಧವಾರದಂದು ಈ ಕುರಿತಾದ ಅರ್ಜಿಗಳನ್ನು ಪರಿಶೀಲಿಸಿ, ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ವಿವೇಕಾನಂದ ರೆಡ್ಡಿ ಅವರ ಪತ್ನಿ ಸೌಭಾಗ್ಯಮ್ಮ, ಮಗಳು ಸುನೀತಾ, ಅಳಿಯ ನರೆರೆಡ್ಡಿ ರಾಜಶೇಖರ್ ರೆಡ್ಡಿ, ಬಿಜ್ಪಿ ನಾಯಕ ಸಿ ಆದಿನಾರಾಯಣ ರೆಡ್ಡಿ ಅವರು ಸಿಬಿಐ ತನಿಖೆಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು.

ಮುಕೇಶ್ ಅಂಬಾನಿ ಮನವಿಯಂತೆ ರಾಜ್ಯಸಭೆ ಟಿಕೆಟ್ ಕೊಟ್ಟ ಜಗನ್!ಮುಕೇಶ್ ಅಂಬಾನಿ ಮನವಿಯಂತೆ ರಾಜ್ಯಸಭೆ ಟಿಕೆಟ್ ಕೊಟ್ಟ ಜಗನ್!

ಮಾರ್ಚ್ 15, 2019ರಂದು ವೈ.ಎಸ್. ವಿವೇಕಾನಂದ ರೆಡ್ಡಿ ಮೃತಪಟ್ಟಿದ್ದರು. ಹೃದಯಾಘಾತ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. ಅದರೆ, ಅವರ ಸಾವಿನ ಬಗ್ಗೆ ಅವರ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರು. ಅವರ ಆಪ್ತ ಸಹಾಯಕ ಕೃಷ್ಣಾ ರೆಡ್ಡಿ, ವಿವೇಕಾನಂದ ಅವರ ಬೆಡ್‌ರೂಂ ಮತ್ತು ಬಾತ್‌ರೂಂಗಳಲ್ಲಿ ರಕ್ತದ ಕಲೆಗಳು ಕಂಡುಬಂದಿರುವುದು ಶಂಕಾಸ್ಪದವಾಗಿದೆ ಎಂದು ಪ್ರಕರಣದ ತನಿಖೆ ನಡೆಸುವಂತೆ ಪುಲಿವೆಂದಲ ಪೊಲೀಸರಿಗೆ ದೂರು ನೀಡಿದ್ದರು.

AP HC orders CBI probe into YSR brother Vivekananda Reddy murder

ಇದಾದ ಬಳಿಕ ಜಗನ್ ಕೂಡಾ ತಮ್ಮ ಚಿಕ್ಕಪ್ಪನ ಸಾವಿನ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದರು. ಸುಮಾರು 1300 ಮಂದಿಯನ್ನು ಪ್ರಶ್ನಿಸಲಾಗಿತ್ತು. ಅನೇಕರಿಗೆ ನಾರ್ಕೋ ಅನಾಲಿಸಸ್ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಕೋರ್ಟಿಗೆ ಜಗನ್ ತಿಳಿಸಿದ್ದರು. ಆದರೆ, ಕುಟುಂಬದಿಂದ ಒತ್ತಡ ಹೆಚ್ಚಾಗಿದ್ದರಿಂದ ತಮ್ಮ ಹೇಳಿಕೆ ಹಿಂಪಡೆದಿದ್ದರಿಂದ ಸಿಬಿಐ ತನಿಖೆಗೆ ವಹಿಸಲು ದಾರಿ ಮಾಡಿಕೊಟ್ಟಿತ್ತು.

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆ

ಪುಲಿವೆಂದಲಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 1999ರಲ್ಲಿ ಕಡಪ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದ್ದರು. 2004ರ ಚುನಾವಣೆಯಲ್ಲಿಯೂ ಭರ್ಜರಿ ಗೆಲುವು ಕಂಡಿದ್ದರು. ಸಹೋದರ ರಾಜಶೇಖರ್ ರೆಡ್ಡಿ ನಿಧನದ ಬಳಿಕ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ತೊರೆದು ವೈಎಸ್‌ಆರ್ ಕಾಂಗ್ರೆಸ್ ಸ್ಥಾಪಿಸಿದ್ದ ಜಗನ್ ಮೋಹನ್ ರೆಡ್ಡಿ ಮತ್ತು ವಿವೇಕಾನಂದ ರೆಡ್ಡಿ ನಡುವೆ ಮನಸ್ತಾಪವಿತ್ತು. ಆದರೆ, 2011ರ ವಿಧಾನಸಭೆ ಉಪ ಚುನಾವಣೆಯಲ್ಲಿ ಅತ್ತಿಗೆ ವೈ.ಎಸ್. ವಿಜಯಮ್ಮ ಅವರ ಎದುರು ಸೋಲು ಅನುಭವಿಸಿದ ನಂತರ ಜಗನ್ ಮೋಹನ್ ರೆಡ್ಡಿ ಅವರ ಪಕ್ಷವನ್ನು ಸೇರಿಕೊಂಡಿದ್ದರು.

English summary
The Andhra Pradesh High Court on Wednesday ordered the Central Bureau of Investigation (CBI) to probe into the killing of Former Minister YS Vivekananda Reddy brother of former CM YS Rajashekhara Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X