ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಟಿಡಿ ಮುಖ್ಯಸ್ಥರಾಗಿ ಸುಬ್ಬಾರೆಡ್ಡಿ ಮರು ನೇಮಕ, ಸುಧಾ ಮೂರ್ತಿಯೂ ಆಯ್ಕೆ?

|
Google Oneindia Kannada News

ಅಮರಾವತಿ, ಆಗಸ್ಟ್ 8: ಆಂಧ್ರಪ್ರದೇಶ ಸರ್ಕಾರಕ್ಕೆ ಕೊರೊನಾ ಸಂಕಷ್ಟದಲ್ಲೂ ಭರ್ಜರಿ ಆದಾಯ ತಂದುಕೊಡುತ್ತಿರುವ ತಿರುಪತಿ ತಿಮ್ಮಪ್ಪನ ದೇಗುಲ ಮತ್ತೆ ಸುದ್ದಿಯಲ್ಲಿದೆ. ದೇಶದ ಶ್ರೀಮಂತ ದೇವಾಲಯ ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನಂ (ಟಿಟಿಡಿ) ನೂತನ ಮುಖ್ಯಸ್ಥರಾಗಿ ವೈ ವಿ ಸುಬ್ಬಾ ರೆಡ್ಡಿರನ್ನು ಮತ್ತೊಮ್ಮೆ ಸಿಎಂ ಜಗನ್ಮೋಹನ್ ರೆಡ್ಡಿ ನೇಮಿಸಿದ್ದಾರೆ. ವಿವಾದದ ನಡುವೆ ಜಗನ್ ಮತ್ತೊಮ್ಮೆ ತಮ್ಮ ಸಂಬಂಧಿಕರೆ ಮಣೆ ಹಾಕಿದ್ದಾರೆ.

ಮಾಜಿ ಸಂಸದ ಸುಬ್ಬಾರೆಡ್ಡಿ ಅವರು ಎರಡು ವರ್ಷಗಳ ಅವಧಿ ಟಿಟಿಡಿ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿ ಜೂನ್ ತಿಂಗಳು ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದರು. ಮುಂದಿನ ವರ್ಷ ರಾಜ್ಯಸಭೆಗೆ ಅಥವಾ ವಿಧಾನಪರಿಷತ್ ಮೂಲಕ ಆಯ್ಕೆ ಮಾಡಿ, ಸಂಪುಟಕ್ಕೆ ಸೇರಿಸಿಕೊಳ್ಳಲು ಜಗನ್ ಮುಂದಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಮತ್ತೊಂದು ಅವಧಿಗೆ ಟಿಟಿಡಿ ಚೇರ್ಮನ್ ಆಗಿ ನೇಮಿಸಿದ್ದಾರೆ.

1987ರ ಹಿಂದು ಧಾರ್ಮಿಕ ಸಂಸ್ಥೆ ಹಾಗೂ ಮುಜರಾಯಿ ಕಾಯ್ದೆ ಅನ್ವಯ ಟಿಟಿಡಿ ಚೇರ್ಮನ್ ಆಗಿ ಸುಬ್ಬಾರೆಡ್ಡಿರನ್ನು ನೇಮಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ ವಾಣಿ ಮೋಹನ್ ಅವರು ಆದೇಶ ಹೊರಡಿಸಿದ್ದಾರೆ. ಶೀಘ್ರದಲ್ಲೇ ಟಿಟಿಡಿ ಹೊಸ ಸಮಿತಿಯನ್ನು ಪುನರ್ ರಚನೆ ಮಾಡಲಾಗಲು ಸೂಚಿಸಲಾಗಿದೆ.

ಅನ್ಯಮತ ಪ್ರಚಾರ ವಿವಾದ

ಅನ್ಯಮತ ಪ್ರಚಾರ ವಿವಾದ

ಅನ್ಯಮತ ಪ್ರಚಾರ ವಿವಾದ: ಸುಬ್ಬಾರೆಡ್ಡಿ ನೇಮಕ ವಿವಾದವಲ್ಲದೆ, ಅನ್ಯಮತ ಪ್ರಚಾರಕ್ಕೆ ಟಿಟಿಡಿ ಬಳಸಲಾಗುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ವಿಶ್ವದ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಸನ್ನಿಧಿ ನಿರ್ವಹಿಸುವ ಮಂಡಳಿ ಮತ್ತೊಮ್ಮೆ ಬೇಡದ ಕಾರಣಕ್ಕೆ ಸುದ್ದಿಯಲ್ಲಿದೆ. ಆಂಧ್ರಪ್ರದೇಶ ಸರ್ಕಾರಿ ಸ್ವಾಮ್ಯ ಸಂಸ್ಥೆಯಿಂದ ಮತ್ತೊಮ್ಮೆ ಅನ್ಯಮತ ಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

''ಇದರಿಂದ ಆಂಧ್ರಪ್ರದೇಶದ ಕೋಮು ಸೌಹಾರ್ದತೆ ಹದಗೆಡುತ್ತಿದೆ. ಇದರ ಸತ್ಯಾಸತ್ಯತೆ ಮನಗಾಣದೆ ಕೆಲ ಮಾಧ್ಯಮಗಳು ಟಿಟಿಡಿ ವಿರುದ್ಧ ಕೆಟ್ಟ ಭಾವನೆ ಬರುವಂತೆ ಸುದ್ದಿ ಮಾಡಿರುವುದು ಕಂಡು ಬಂದಿದೆ. ಟಿಡಿಪಿ ಈ ರೀತಿ ಧರ್ಮದಲ್ಲಿ ರಾಜಕೀಯ ಬೆರೆಸಿ, ಶಾಂತಿ, ಸೌಹಾರ್ದತೆ ಕೆಡಿಸಿದರೆ ಜನರೇ ಪಾಠ ಕಲಿಸುತ್ತಾರೆ,'' ಎಂದು ಸುಬ್ಬಾರೆಡ್ಡಿ ಪ್ರತಿಕ್ರಿಯಿಸಿದ್ದರು.

ಸುಧಾಮೂರ್ತಿ ಮರು ನೇಮಕ ಸಾಧ್ಯತೆ

ಸುಧಾಮೂರ್ತಿ ಮರು ನೇಮಕ ಸಾಧ್ಯತೆ

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಬೋರ್ಡ್‌ಗೆ ನೇಮಿಸುವ ನಿರ್ಧಾರ ತೆಗೆದುಕೊಂಡಿದ್ದು ಗಮನ ಸೆಳೆದಿತ್ತು. ಹೊಸ ಮಂಡಳಿ ನೇಮಕಕ್ಕೂ ಮುನ್ನ ಸುಧಾಮೂರ್ತಿ ಅವರು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಜಗನ್ ಅವರು ಸುಧಾಮೂರ್ತಿ ಮರು ನೇಮಕ ಮಾಡಿ ವಿವಾದಕ್ಕೆ ತೆರೆ ಎಳೆದಿದ್ದರು. ಈಗ ಇನ್ನೊಂದು ಅವಧಿಗೆ ಕರ್ನಾಟಕದಿಂದ ಸುಧಾಮೂರ್ತಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.

ಟಿಟಿಡಿ ಆದಾಯ ಏರಿಳಿತ

ಟಿಟಿಡಿ ಆದಾಯ ಏರಿಳಿತ

ಆದಾಯ ಏರಿಳಿತ: ಕೋವಿಡ್ 19 ಸಾಂಕ್ರಾಮಿಕದಿಂದ ವಿವಿಧ ಕ್ಷೇತ್ರ, ವಿವಿಧ ಉದ್ದಿಮೆಗಳ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ದೇಶದ ಅತ್ಯಂತ ಶ್ರೀಮಂತ ದೇಗುಲ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಪ್ರತಿದಿನದ ಭಕ್ತಾದಿಗಳ ಸಂಖ್ಯೆ, ದೈನಂದಿನ ಆದಾಯ ಖೋತಾ ಆಗಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಆದಾಯ ಗಳಿಕೆ ಚೇತರಿಕೆ ಕಂಡಿದೆ.

ಕೋವಿಡ್ 19ಕ್ಕೂ ಮುನ್ನ ಪ್ರತಿದಿನ ಸರಾಸರಿ 65 ಸಾವಿರಕ್ಕೂ ಅಧಿಕ ಮಂದಿಯನ್ನು ಕಾಣುತ್ತಿದ್ದ ತಿರುಮಲ ಬೆಟ್ಟ, ಈಗ 15 ಸಾವಿರಕ್ಕೆ ಕುಸಿದಿದೆ. ಕೋವಿಡ್ 19 ಮಾರ್ಗಸೂಚಿಯಂತೆ ಆನ್ ಲೈನ್ ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡ 6 ಸಾವಿರ ಮಂದಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ 8 ಸಾವಿರ ಮಂದಿಗೆ ಅವಕಾಶ ನೀಡಲಾಗಿದೆ.

ವಿಶೇಷ ಟಿಕೆಟ್ ಹೊಂದಿದ್ದರೆ ದೇಗುಲ ಪ್ರವೇಶ

ವಿಶೇಷ ಟಿಕೆಟ್ ಹೊಂದಿದ್ದರೆ ದೇಗುಲ ಪ್ರವೇಶ

8 ಸಾವಿರ ಮಂದಿಗೆ ಕೋವಿಡ್ 19 ಮಾರ್ಗಸೂಚಿಯಂತೆ ಅವಕಾಶ ಕಲ್ಪಿಸಲಾಗಿದ್ದು, ದೇಗುಲದ ಆವರಣದಲ್ಲೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ವಿಶೇಷ ಟಿಕೆಟ್ ಹೊಂದಿರುವವರಿಗೆ ಮೊದಲು ಟಿಟಿಡಿ ದೇವಸ್ಥಾನದಿಂದ ಸುಮಾರು ಎರಡೂವರೆ ಕಿಲೋಮೀಟರ್‌ ದೂರದ ಅಲಿಪಿರಿ ಬಳಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ವೈದ್ಯಕೀಯ ತಪಾಸಣೆ ಬಳಿಕ ಆರೋಗ್ಯವಂತರಾಗಿರುವ ಹಾಗೂ ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ಭಕ್ತರಿಗೆ ಮಾತ್ರ ದರ್ಶನಕ್ಕೆ ಅನುಮತಿ ಕೊಡಲಾಗುತ್ತಿದೆ.

ಟಿಟಿಡಿ ಹಳೆ ಸಮಿತಿ ಹೇಗಿದೆ?

ಟಿಟಿಡಿ ಹಳೆ ಸಮಿತಿ ಹೇಗಿದೆ?

ಟಿಟಿಡಿ ಹಳೆ ಸಮಿತಿ : ಈ ಹಿಂದಿನ ಮಂಡಳಿಯ ಸದಸ್ಯರ ಪೈಕಿ ಸುಧಾ ಮೂರ್ತಿ. ಸಂಪತ್​​ ರವಿ ನಾರಾಯಣ, ರಮೇಶ್​ ಶೆಟ್ಟಿ ಕರ್ನಾಟಕದಿಂದ ನೇಮಕವಾಗಿದ್ದರು. ಒಟ್ಟಾರೆ, ತೆಲಂಗಾಣದಿಂದ 7 ಮಂದಿ, ಆಂಧ್ರ ಪ್ರದೇಶದಿಂದ 8 ಜನ, ಕರ್ನಾಟಕ, ತಮಿಳುನಾಡಿನಿಂದ ತಲಾ 4, ದೆಹಲಿ, ಮಹಾರಾಷ್ಟ್ರದಿಂದ ತಲಾ ಒಬ್ಬರು ಈ ಮಂಡಳಿಯಲ್ಲಿ ಸದಸ್ಯರಾಗಿ ನೇಮಕವಾಗಿದ್ದರು.

ಆಂಧ್ರಪ್ರದೇಶ: ವಿ ಪ್ರಶಾಂತಿ, ಯುವಿ ರಮಣ ಮೂರ್ತಿ ರಾಜು(ಕೆ ಬಾಬು ರಾಜು), ಡಿ ಪಿ ಅನಂತ, ಚಿಪ್ಪಗಿರಿ ಪ್ರಸಾದ್, ಮೇದಾ ಮಲ್ಲಿಕಾರ್ಜುನ ರೆಡ್ಡಿ, ಗೊಲ್ಲ ಬಾಬು ರಾವ್, ನಾದೆಂದ್ಲಾ ಸುಬ್ಬಾರಾವ್, ಪಾರ್ಥಸಾರಥಿ
ಕರ್ನಾಟಕ: ರಮೇಶ್ ಶೆಟ್ಟಿ, ಸಂಪತ್, ರವಿ ನಾರಾಯಣನ್, ಸುಧಾ ನಾರಾಯಣಮೂರ್ತಿ
ತೆಲಂಗಾಣ: ಜುಪಲ್ಲಿ ರಾಮೇಶ್ವರ್ ರಾವ್, ದಾಮೋದರ್ ರಾವ್, ಪುಟ್ಟ ಪ್ರತಾಪ್ ರೆಡ್ಡಿ, ಬಿ ಪಾರ್ಥಸಾರಥಿ ರೆಡ್ಡಿ, ವಿ ಭಾಸ್ಕರ ರಾಮರಾವ್, ಮುರಾಂಶೆಟ್ಟಿ ರಾಮುಲು, ಕೆ ಶಿವಕುಮಾರ್.
ತಮಿಳುನಾಡು: ಕೃಷ್ಣಮೂರ್ತಿ ವೈದ್ಯನಾಥನ್, ಎನ್ ಶ್ರೀನಿವಾಸನ್, ನಿಚಿತಾ ಮುತ್ತುವರಪು, ಕುಮಾರ ಗುರು.
ದೆಹಲಿ: ಶಿವಶಂಕರನ್,
ಮಹಾರಾಷ್ಟ್ರ: ರಾಜೇಶ್ ಶರ್ಮ

ಇಂಡಿಯಾ ಸಿಮೆಂಟ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್

ಇಂಡಿಯಾ ಸಿಮೆಂಟ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್

ವೈಎಸ್ ಆರ್ ಪಕ್ಷದ ಅಧ್ಯಕ್ಷ ಹಾಗೂ ಕಡಪ ಸಂಸದ ಜಗಮೋಹನ್ ರೆಡ್ಡಿ ಒಡೆತನದ ಕಂಪೆನಿಯಲ್ಲಿ ಕಾನೂನು ಬಾಹಿರವಾಗಿ ಇಂಡಿಯಾ ಸಿಮೆಂಟ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಅವರು ಹಣ ಹೂಡಿಕೆ ಮಾಡಿ, ಸಿಬಿಐ ತನಿಖೆ ಎದುರಿಸಿದ್ದು ನೆನಪಿರಬಹುದು. ಬಿಸಿಸಿಐನ ಮಾಜಿ ಅಧ್ಯಕ್ಷ ಉದ್ಯಮಿ ಎನ್ ಶ್ರೀನಿವಾಸನ್ ನೇಮಕ ನಿರೀಕ್ಷಿತವಾಗಿತ್ತು ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಉದ್ಯಮಿಗಳ ಪೈಕಿ ಮೈ ಹೋಂ ಗ್ರೂಪ್ ಚೇರ್ಮನ್ ಜುಪಲ್ಲಿ ರಾಮೇಶ್ವರ್ ರಾವ್(ತೆಲಂಗಾಣ), ಹಾಗೂ ನಮಸ್ತೆ ತೆಲಂಗಾಣ ದಿನಪತ್ರಿಕೆಯ ಎಂಡಿ ದಿವಕೊಂಡಾ ದಾಮೋದರ್ ರಾವ್ ಸೇರ್ಪಡೆಗೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಕಾರಣ ಎಂಬುದು ಗುಟ್ಟಾದ ವಿಷಯವೇನಲ್ಲ.

English summary
The Andhra Pradesh government on Sunday reappointed Y V Subba Reddy, Chief Minister Y S Jagan Mohan Reddy's uncle, as the Chairman of Tirumala Tirupati Devasthanams Board, ending a lot of speculation over his future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X