ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ಲೈನ್ ಗೇಮ್, ಬೆಟ್ಟಿಂಗ್ ನಿಷೇಧ ವಿಧೇಯಕ ಆಂಧ್ರ ಅಸೆಂಬ್ಲಿ ಅಸ್ತು!

|
Google Oneindia Kannada News

ಅಮರಾವತಿ, ಡಿ.2: ಆಂಧ್ರಪ್ರದೇಶ ಗೇಮಿಂಗ್(ತಿದ್ದುಪಡಿ) 2020 ವಿಧೇಯಕಕ್ಕೆ ಆಂಧ್ರಪ್ರದೇಶ ವಿಧಾನ ಸಭೆಯಲ್ಲಿ ಒಕ್ಕೊರಲ ಬೆಂಬಲ ವ್ಯಕ್ತವಾಗಿದೆ. ಈ ಮೂಲಕ ಆನ್ ಲೈನ್ ಗೇಮಿಂಗ್, ಬೆಟ್ಟಿಂಗ್ ಆಟಕ್ಕೆ ಜಗನ್ ಮೋಹನ್ ರೆಡ್ಡಿ ಸರ್ಕಾರ ಸಂಪೂರ್ಣ ನಿಷೇಧ ಹೇರುತ್ತಿದೆ.

ಸುಮಾರು 132 ಆಪ್ಲಿಕೇಷನ್ ಗಳನ್ನು ನಿಷೇಧದ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಈ ಆಪ್ ನಿಷೇಧ ಕುರಿತಂತೆ ಈಗಾಗಲೇ ಖುದ್ದು ಸಿಎಂ ಜಗನ್ ಅವರು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಪತ್ರ ಬರೆದಿದ್ದರು. ಆಂಧ್ರಪ್ರದೇಶದ ನಿಷೇಧದ ಪಟ್ಟಿಯಲ್ಲಿ ಪೇಟಿಯಂ ಫಸ್ಟ್ ಗೇಮ್, ಮೊಬೈಲ್ ಪ್ರೀಮಿಯರ್ ಲೀಗ್, ಅಡ್ಡಾ52 ಮುಂತಾದವು ಸೇರಿವೆ.

ಆನ್ ಲೈನ್ ಗೇಮಿಂಗ್ ಹಾವಳಿಯಿಂದ ಅನೇಕ ಸಾಮಾಜಿಕ ಪಿಡುಗು ಆರಂಭವಾಗಿದ್ದು, ಹಣ, ಪ್ರಾಣ ಎಲ್ಲವೂ ಹೋಗಿದೆ. ಬೆಟ್ಟಿಂಗ್ ಯಾವುದೇ ಮಾದರಿಯಾದರೂ ಅದರಿಂದ ನಷ್ಟ ಹೊಂದುವವರೇ ಅಧಿಕ, ಯುವ ಜನಾಂಗ ಇದರಿಂದ ಭಾರಿ ನಷ್ಟ ಅನುಭವಿಸಿದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದರು.

AP Assembly passes Gaming Amendment Bill

ಎಲ್ಲಾ ಇಂಟರ್ ನೆಟ್ ಸೇವಾದಾರರಿಗೆ ಸೂಚಿಸಿ ಸಂಬಂಧಿಸಿದ ಆಪ್ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಜಗನ್ ಮೋಹನ್ ರೆಡ್ಡಿ ಅವರು ಕೋರಿದ್ದಾರೆ.

ಆಂಧ್ರಪ್ರದೇಶ ಜೂಜು ನಿಯಂತ್ರಣ ಕಾಯ್ದೆ 1974 ಹಾಗೂ 2020ರ ತಿದ್ದುಪಡಿ ಕಾಯ್ದೆ ಅನ್ವಯ ಗೇಮಿಂಗ್, ಬೆಟ್ಟಿಂಗ್, ಜೂಜು ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದ 132 ವೆಬ್ ತಾಣ ಹಾಗೂ ಆಪ್ ಗಳನ್ನು ಪಟ್ಟಿ ಮಾಡಲಾಗಿದೆ ಎಂದು ಗೃಹ ಸಚಿವರಾದ ಎಂ ಸುಚರಿತಾ ಅವರು ಹೇಳಿದರು.

ಡ್ರೀಮ್ಸ್11 pay-to-play ಸ್ಪರ್ಧೆಗೆ ಸೆಪ್ಟೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶ ಸರ್ಕಾರ ನಿರ್ಬಂಧ ಹೇರಿತ್ತು. ಆದರೆ ನಿಷೇಧ ಹೇರಿರಲಿಲ್ಲ.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಈ ರೀತಿ ಬೆಟ್ಟಿಂಗ್, ಜೂಜು ವ್ಯವಹಾರದಲ್ಲಿ ತೊಡಗಿದ್ದರೆ ಭಾರಿ ದಂಡ ಹಾಗೂ ಜೈಲು ಶಿಕ್ಷೆ ನೀಡಲಾಗುತ್ತದೆ. ಇಂಟರ್ನೆಟ್ ಸೇವಾ ಸಂಸ್ಥೆ, ಆಪ್ ಡೆವಲಪರ್ ಮೇಲೂ ಕ್ರಮ ಜರುಗಿಸಲಾಗುತ್ತದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

English summary
The Andhra Pradesh Legislative Assembly on Tuesday passed the AP Gaming (Amendment) Bill 2020 and the Andhra Pradesh Municipal Laws (Second Amendment) Bill 2020 by voice vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X